ರಿಕ್ಷಾ ಚಾಲಕನೋರ್ವ ನಿಷೇಧಿತ ಎಂ.ಡಿ.ಎಂ..ಎ ಮಾರಾಟ ಮಾಡಲು ನಿಂತಿದ್ದ ವೇಳೆ ಬಂಟ್ವಾಳ ನಗರ ಠಾಣಾ ಪೋಲೀಸರ ತಂಡ ಬಂಧಿಸಿದ ಘಟನೆ ನಡೆದಿದೆ.

ಬಂಟ್ವಾಳ ನಿವಾಸಿಯಾಗಿರುವ ಮೊಹಮ್ಮದ್ ಇಮ್ತಿಯಾಜ್ ಎಂಬಾತನನ್ನು ಪೋಲೀಸರು ಪಾಣೆಮಂಗಳೂರು ಎಂಬಲ್ಲಿ ಬಂಧಿಸಿದ್ದಾರೆ. ಪಾಣೆಮಂಗಳೂರು ಸ್ಮಶಾನದ ರಸ್ತೆಯಲ್ಲಿ ಈತ ಅನುಮಾಸ್ಪವಾಗಿ ರಿಕ್ಷಾದಲ್ಲಿ ನಿಂತಿರುವ ವೇಳೆ ಪೋಲೀಸರು ವಿಚಾರಿಸಿದಾಗ ಈತನ ಬಳಿ 1000 ಸಾವಿರ ಮೌಲ್ಯದ ಎಂ.ಡಿ.ಎಂ..ಎ ಮಾದಕ ವಸ್ತುಗಳು ಸಿಕ್ಕಿದ್ದು ಪೋಲೀಸರು ಈತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಈತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.



