ಮಂಗಳೂರು ಮಂಗಳಾ ಕ್ರೀಡಾಂಗಣದಲ್ಲಿ ನಡೆದ ದ.ಕ, ಉಡುಪಿ ಹಾಗೂ ಕೊಡಗು ಜಿಲ್ಲೆಗಳನ್ನೊಳಗೊಂಡ ಅಂತರ್ ಜಿಲ್ಲಾ ಮಾಸ್ಟರ್ಸ್ ಕ್ರೀಡಾ ಕೂಟದಲ್ಲಿ ಪುತ್ತೂರಿನ ಧೀರಜ್ ಕೆಮ್ಮಿಂಜೆಯವರು ಶಾಟ್‌ಪುಟ್ ಮತ್ತು 200 ಮೀ ಓಟದಲ್ಲಿ ಚಿನ್ನ ಹಾಗೂ ಬೆಳ್ಳಿ ಪದಕವನ್ನು ಪಡೆದಿದ್ದಾರೆ.

ಇವರು ಜಯಪ್ರಕಾಶ್ ಮರೀಲ್ ಮತ್ತು ಉಷಾರಾಣಿ ದಂಪತಿಯ ಪುತ್ರನಾಗಿದ್ದು, ರಾಮಕ್ಷತ್ರಿಯ ಸೇವಾ ಸಂಘ ಪುತ್ತೂರಿನ ಸದಸ್ಯ ಹಾಗೂ ರಾಮಕ್ಷತ್ರಿಯ ಯುವ ವೃಂದದ ಸದಸ್ಯರು ಆಗಿರುತ್ತಾರೆ.



