ಜನ ಮನದ ನಾಡಿ ಮಿಡಿತ

Advertisement

ಕಿನ್ನಿಗೋಳಿ:ಗ್ರಾಮೀಣ ಭಾಗದಲ್ಲಿ ಕನ್ನಡದ ಮನಸ್ಸು ಕ್ರಿಯಾಶೀಲ- ಮೋಹನ್ ಆಳ್ವ

ಮುಲ್ಕಿ: ಗ್ರಾಮೀಣ ಪ್ರದೇಶಗಳಲ್ಲಿ ಕನ್ನಡದ ಮತ್ತು ಸಾಹಿತ್ಯದ ಕೆಲಸಗಳು ನಡೆಯುತ್ತಲೇ ಇರುತ್ತವೆ. ಆ ಮೂಲಕ ಕನ್ನಡದ ಮನಸ್ಸು ಕ್ರಿಯಾಶೀಲವಾಗಿರುತ್ತದೆ ಎಂದು ಮೂಡುಬಿದ್ರೆ ಡಾ. ಮೋಹನ ಆಳ್ವ ಹೇಳಿದರು.

ಅವರು ಶುಕ್ರವಾರ ಕಿನ್ನಿಗೋಳಿ ಅನಂತ ಪ್ರಕಾಶದ ಗಾಯತ್ರೀ ಪ್ರಕಾಶನದಿಂದ ಪ್ರಕಟಿತ 169ನೇ ಕೃತಿ ರಾಧಾಕೃಷ್ಣ ಕಲ್ಚಾರ್ ಅವರ ಲೇಖನಗಳ ಕೃತಿ ತಲ್ಲಣಿಸದಿರು ಮನವೆ, 170ನೆಯ ಕೃತಿ ಕಲ್ಚಾರ್ ಅವರ ಕಾದಂಬರಿ ಕೂಡುಮನೆ ಹಾಗೂ 171ನೆಯ ಕೃತಿ ಟಿ.ಎಂ. ರಮೇಶ್ ಅವರ ಲಲಿತಪ್ರಬಂಧಗಳ ಸಂಕಲನ ನಗುಬಿಗು ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.ಡಾ. ಭಾಸ್ಕರನಾಂದ ಕುಮಾರ್ ಮಾತನಾಡಿ ಸಾಹಿತ್ಯದ ಬರವಣಿಗೆ, ಓದು ಹಾಗೂ ಕೇಳುವಿಕೆಗಳು ಮನಸ್ಸಿನ ಆನಂದವನ್ನು ಹೆಚ್ಚಿಸುತ್ತವೆ, ಕಿನ್ನಿಗೋಳಿಯ ಅನಂತ ಪ್ರಕಾಶ ಸಂಸ್ಥೆ ನಡೆಸಿಕೊಂಡು ಬರುತ್ತಿರುವ ಸಾಹಿತ್ಯ ಚಟುವಟಿಕೆಗಳು ಅಭಿನಂದನೀಯ.

ಕಲ್ಚಾರ್ ಅವರ ಕೃತಿಯ ಓದು ಪುರಾಣದ ಜ್ಞಾನದಾಹಿಗೆ ಉತ್ತಮ ಕೃತಿ ಎಂದರು. ಉಡುಪಿಯ ಮುರಳಿ ಕಡೆಕಾರ್ ಮಾತನಾಡಿ, ತಾಳಮದ್ದಲೆ ಕ್ಷೇತ್ರದಲ್ಲಿ ಹೆಸರು ಮಾಡಿರುವ ಕಲ್ಚಾರ್ ಅವರ ಕಾದಂಬರಿ ಕೂಡುಮನೆ ಸರಾಗ ಓದಿಸಿಕೊಂಡು ಹೋಗುವ ಉತ್ತಮ ಕೃತಿ. ಹಿಂದಿನ ಕೂಡುಕುಟುಂಬದ ಬಾಂಧವ್ಯದ ಸೊಗಸು ಇಂದಿಲ್ಲ. ಸ್ವಾರ್ಥದ ಬದುಕಿನ ಮನಸ್ಥಿತಿಯಿಂದಾಗಿ ಮನೆಗಳು ಒಡೆದುಹೋಗುತ್ತಿವೆ ಎಂದರು.

ಅನಂತ ಪ್ರಕಾಶ ಸಂಸ್ಥೆಯ ಕೊಡೆತ್ತೂರು ಸಚ್ಚಿದಾನಂದ ಉಡುಪ, ಕೃತಿಕಾರ ರಾಧಾಕೃಷ್ಣ ಕಲ್ಚಾರ್ ಕೊಡೆತ್ತೂರು ವೇದವ್ಯಾಸ ಉಡುಪ ಪ್ರಕಾಶ್ ಆಚಾರ್ ಉಪಸ್ಥಿತರಿದ್ದರು..

Leave a Reply

Your email address will not be published. Required fields are marked *

ಮಂಗಳೂರು: ಮಾಧ್ಯಮ ಮಿತ್ರ ನಾಗರಾಜ್ ಅನಾರೋಗ್ಯದಿಂದ ನಿಧನ

ಆಂಬ್ಯುಲೆನ್ಸ್ ವಾಹನವೊಂದಕ್ಕೆ ಸೈಡ್ ಬಿಡದ ಸ್ಕೂಟರ್ ಸವಾರನ ಬಂಧನ

ಮಂಗಳೂರು: ಝಕರಿಯಾ ಜೋಕಟ್ಟೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ

ಮಂಗಳೂರು: ಸೇತುವೆ ಬಳಿ ನಾಪತ್ತೆಯಾದ ಆಟೋ ಚಾಲಕನ ಶವ ಪತ್ತೆ….!

ಮಂಗಳೂರು: ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ದಂಪತಿಯ ಬಂಧನ..!

ಕಡಬ: ಮದುವೆಯ ವಾಹನ ಪಲ್ಟಿ; 20ಕ್ಕೂ ಅಧಿಕ ಮಂದಿಗೆ ಗಾಯ..!

ಹುಣಸೂರು: ಜಮೀನಿನಲ್ಲಿ ಬಿದ್ದಿದ್ದ ಕರೆಂಟ್ ತಂತಿ ಸ್ಪರ್ಶ, ತಾಯಿ- ಮಗ ಬಲಿ…!

ಬಂಟ್ವಾಳ: ಬಿ.ಸಿ.ರೋಡ್ ನಲ್ಲಿರುವ ಮೆಸ್ಕಾಂ ಭವನದಲ್ಲಿ ಜನಸಂಪರ್ಕ ಸಭೆ..!

ಬಂಟ್ವಾಳ: ಮಂಚಿಯ ವ್ಯಕ್ತಿ ಮಕ್ಕಾದಲ್ಲಿ ಹೃದಯಾಘಾತದಿಂದ ಮೃ*ತ್ಯು….!

error: Content is protected !!