ಖಾಸಗಿ ಬಸ್ಸುಗಳೆರಡು ಮುಖಾಮುಖಿ ಡಿಕ್ಕಿಯಾಗಿ ಆರು ಮಂದಿ ಸಾವಿಗೀಡಾಗಿದ್ದಾರೆ.
ಮಹಾರಾಷ್ಟ್ರದ ಬುಲ್ಧಾನಾ ಜಿಲ್ಲೆಯಲ್ಲಿ ಎರಡು ಖಾಸಗಿ ಬಸ್‌ಗಳು ಡಿಕ್ಕಿಯಾಗಿ ಮಹಿಳೆ ಸೇರಿದಂತೆ ಆರು ಮಂದಿ ಸಾವನ್ನಪ್ಪಿದ್ದು, ಸುಮಾರು 25 ರಿಂದ 30 ಜನರು ಗಾಯಗೊಂಡ ಘಟನೆ ನಡೆದಿದೆ. ಜಿಲ್ಲೆಯ ಮಲ್ಕಾಪುರ್ ನಗರದ ಬಳಿ ರಾಷ್ಟ್ರೀಯ ಹೆದ್ದಾರಿ-6ರಲ್ಲಿ ಅಪಘಾತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಎರಡೂ ಬಸ್‌ಗಳ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.

ಅಪಘಾತಕ್ಕೀಡಾದ ಬಸ್‌ಗಳಲ್ಲಿ ಪ್ರಯಾಣಿಕರು ಅಮರನಾಥ ಯಾತ್ರೆಯಿಂದ ಹಿಂಗೋಲಿಗೆ ಮರಳುತ್ತಿದ್ದರೆ, ಇನ್ನೊಂದು ಬಸ್ ನಾಗ್ಪುರದಿಂದ ನಾಸಿಕ್‌ಗೆ ಹೋಗುತ್ತಿತ್ತು. ವರದಿಗಳ ಪ್ರಕಾರ ಗಾಯಗೊಂಡವರಲ್ಲಿ ಐವರ ಸ್ಥಿತಿ ಚಿಂತಾಜನಕವಾಗಿದೆ.



