ಕಾಡಾನೆ ದಾಳಿಗೆ ಮೇಯಲು ಕಟ್ಟಿದ್ದ ಹಸುವೊಂದು ಸಾವನ್ನಪ್ಪಿದ ಘಟನೆ ಬೆಳ್ತಂಗಡಿ ತಾಲೂಕಿನ ಶಿಬಾಜೆ ಉಲಹನ್ನನ್ ಟಿಎ ಅವರ ಮನೆಯ ತೋಟದಲ್ಲಿ ಮೇಯಲು ಕಟ್ಟಿದ ಹಸುವನ್ನು ಕಾಡಾನೆ ದಾಳಿ ನಡೆಸಿ ಕೊಂದ ಘಟನೆ ಸಂಭವಿಸಿದೆ.

ತೋಟಕ್ಕೆ ನುಗ್ಗಿ ಬಾಳೆ ಗಿಡಗಳನ್ನು ಹಾನಿ ಮಾಡಿದ ಕಾಡಾನೆಯನ್ನು ಓಡಿಸುವ ಸಂದರ್ಭದಲ್ಲಿ ಅಲ್ಲೆ ಪಕ್ಕದಲ್ಲಿ ಮೇಯಲು ಕಟ್ಟಿದ ಹಸುವನ್ನು ರಭಸದಿಂದ ಗುದ್ದಿದೆ ಆ ಹೊಡೆತಕ್ಕೆ ಹಸುವು ಸಾವನ್ನಪ್ಪಿದೆ. ಘಟನಾ ಸ್ಥಳಕ್ಕೆ ಉಪ್ಪಿನಂಗಡಿ ವಲಯಾರಣ್ಯಧಿಕಾರಿ ಆಗಮಿಸಿ ಸ್ಥಳ ಪರೀಕ್ಷಿಸಿ ಸರಕಾರದ ವತಿಯಿಂದ ಅನುದಾನ ದೊರಕಿಸಿ ಕೊಡುವುದಾಗಿ ಭರವಸೆ ನೀಡಿದ್ದಾರೆ. ಇನ್ನೂ ಕಾಡಾನೆಗಳು ನಾಡಿಗೆ ಬರುತ್ತಿರುವ ಹಿನ್ನಲೆ ಅರಣ್ಯ ಪ್ರದೇಶದ ಹತ್ತಿರದ ಸ್ಥಳಗಳಲ್ಲಿ ವಾಸಿಸುವ ಜನರು ಜಾಗ್ರತರಾಗಿರಬೇಕು ಎಂದು ಮನವಿ.



