ಜನ ಮನದ ನಾಡಿ ಮಿಡಿತ

Advertisement

ಮಮತಾ ಶೆಟ್ಟರಿಗೆ ಗೌರವ ಡಾಕ್ಟರೇಟ್…

ದಕ್ಷಿಣ ಕನ್ನಡ : ಏಷ್ಯಾ ಅಂತರಾಷ್ಟ್ರೀಯ ಸಾಂಸ್ಕೃತಿಕ ಅಕಾಡೆಮಿ ಕೊಡ ಮಾಡುವ ಗೌರವ ಡಾಕ್ಟರೇಟ್ ಪದವಿಯು ಅಭಿಮತ ವಾಹಿನಿಯ ಮುಖ್ಯಸ್ಥರಾದ ಮಮತಾ ಪ್ರವೀಣ್ ಶೆಟ್ಟಿ ಇವರಿಗೆ ತಮಿಳುನಾಡಿನ ಕ್ಲಾರೆಷ್ಟ ಹೋಟೆಲ್ ನ  ಸಭಾಂಗಣದಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಮಮತಾ ಶೆಟ್ಟರ ಮಾಧ್ಯಮ ಕ್ಷೇತ್ರದ ಅಪ್ರತಿಮ ಸಾಧನೆಯನ್ನ ಗುರುತಿಸಿ ಗೌರವ ಡಾಕ್ಟರೇಟ್  ಪದವಿ ನೀಡಿ   ಗೌರವಿಸಲಾಯಿತು.

    ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ  ನಿವಾಸಿಯಾಗಿರುವ ಮಮತಾ ಪ್ರವೀಣ್ ಶೆಟ್ಟರು ತನ್ನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಬಂಟ್ವಾಳ ತಾಲೂಕಿನ ಮಂಚಿಯಲ್ಲಿ ಪೂರೈಸಿದವರಾಗಿದ್ದು ಪದವಿ ಶಿಕ್ಷಣವನ್ನು ಮಂಗಳೂರು ವಿಶ್ವವಿದ್ಯಾಲಯದಿಂದ ಪಡೆದಿರುತ್ತಾರೆ.

    ಬಾಲ್ಯದಿಂದಲೇ ನೃತ್ಯ, ನಿರೂಪಣೆ, ನಾಟಕ, ಹಾಗೂ ಕ್ರೀಡೆಯಲ್ಲಿ ಆಸಕ್ತಿ ಹೊಂದಿದವರಾಗಿದ್ದು ಇದುವರೆಗೆ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

     ಮಮತಾರವರಿಗೆ   ಕ್ರೀಡಾ ಕ್ಷೇತ್ರಕ್ಕೆ ಸಂಬಂಧಿಸಿ ಲಾಂಗ್ ಜಂಪ್, ಹೈ ಜಂಪ್, ಓಟ, ಕಬಡ್ಡಿ, ವಾಲಿಬಾಲ್,ಖೋ ಖೋ, ಹಾಗೂ ಇನ್ನಿತರ ಕ್ರೀಡೆಗಳಿಗೆ ಸಂಬಂಧಿಸಿ ಕ್ರೀಡಾ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಹಲವು ಪ್ರಶಸ್ತಿಗಳು ಅರಸಿ ಬಂದಿವೆ.

     ಭಾರತೀಯ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯಲ್ಲಿ ಮಾಡಿದ ಸಾಧನೆಗಾಗಿ ಮಮತಾ ಪ್ರವೀಣ್ ಶೆಟ್ಟರಿಗೆ ಅಂದಿನ ರಾಜ್ಯಪಾಲರಾದ ರಮಾದೇವಿಯವರು ರಾಜ್ಯ ಪುರಸ್ಕಾರವನ್ನುತ್ತು ಸನ್ಮಾನಿಸಿದ್ದರು, ಅಲ್ಲದೆ ಮೂಡಬಿದಿರೆ ಸರ್ವಿಸ್ ಕೋ ಆಪರೇಟಿವ್ ಬ್ಯಾಂಕ್ ನ   ಉತ್ತಮ ಮಾಧ್ಯಮ ಕ್ಷೇತ್ರದ ಗೌರವಕ್ಕೂ ಪಾತ್ರರಾಗಿದ್ದರು.

   

ಹಲವು ವರ್ಷಗಳ ಕಾಲ ಕರ್ನಾಟಕದ ಖಾಸಗಿ ಸುದ್ದಿ ವಾಹಿನಿಗಳಲ್ಲಿ ಕೆಲಸ ನಿರ್ವಹಿಸಿ ಅನುಭವ ಗಳಿಸಿದ ಮಮತಾ ರವರು ನಂತರದಲ್ಲಿ ತನ್ನದೇ ಮಾಲಕತ್ವದ ಅಭಿಮತ ದೃಶ್ಯ ಮಾಧ್ಯಮ ಸಂಸ್ಥೆಯನ್ನು ಸ್ಥಾಪಿಸಿ ಯಶಸ್ಸುಗಳಿಸಿದವರಾಗಿದ್ದು, ಕರ್ನಾಟಕ ರಾಜ್ಯದಲ್ಲಿ ಸುದ್ದಿ ವಾಹಿನಿಯೊಂದನ್ನು ನಡೆಸುತ್ತಿರುವ ಮೊದಲ ಹಾಗೂ ಏಕೈಕ ಮಹಿಳೆಯಾಗಿದ್ದು, ನೇರ ನಡೆನುಡಿಯ ಶೆಟ್ಟರು ಬೆದರಿಕೆಗೆ ಅಂಜದೆ, ನೈಜ್ಯ ಸುದ್ದಿಯನ್ನು ಪ್ರಕಟಿಸಿ  ಹಲವು ಬಲಿಷ್ಠರ ಕೆಂಗಣ್ಣಿಗೆ ಗುರಿಯಾಗಿದ್ದು ಉಂಟು, ಸಾಧಕರ ಬದುಕು, ಕೃಷಿ ಮಾಹಿತಿ, ರಾಜಕೀಯ,ಜಾನಪದ,ಕಂಬಳ, ಹೀಗೆ ಎಲ್ಲಾ ವಿಚಾರಗಳ ಬಗ್ಗೆ ಮಾಧ್ಯಮದಲ್ಲಿ ಪ್ರಕಟಿಸಿ ಜನರಿಂದ ಭೇಷ್ ಎಂದು ಕರೆಸಿಕೊಂಡ ಮಹಿಳೆಯಾಗಿದ್ದು,  ದೃಶ್ಯಮಾಧ್ಯಮದ  ಜೊತೆಗೆ ಸೋಶಿಯಲ್ ಮೀಡಿಯಾಗಳಲ್ಲೂ ಸುದ್ದಿ ಪ್ರಕಟಿಸುವ ಇವರು ಮುಂದಿನ ದಿನಗಳಲ್ಲಿ ಕರಾವಳಿ ಕರ್ನಾಟಕದ ಎಲ್ಲ ಕಡೆಗಳಿಗೆ ದೃಶ್ಯಮಾಧ್ಯಮವನ್ನು ವಿಸ್ತರಿಸುವ ಯೋಚನೆಯುಳ್ಳವರಾಗಿದ್ದು ಇವರ ಈ ಎಲ್ಲಾ ಸಾಧನೆಯನ್ನು ಗುರುತಿಸಿ ಅಂತರರಾಷ್ಟ್ರೀಯ ಸಾಂಸ್ಕೃತಿಕ ಅಕಾಡೆಮಿ ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಿದೆ.

     ಮೀನಾಕ್ಷಿ ಮತ್ತು ಮೋಹನ ಶೆಟ್ಟರ ಮಗಳಾದ ಮಮತಾ ರವರು ಪತಿ ಪ್ರವೀಣ್ ಹಾಗೂ ಎರಡು ಮಕ್ಕಳ ತುಂಬು ಸಂಸಾರದ ಜೀವನ  ನಡೆಸುತ್ತಿದ್ದು, ಮಮತಾ ಶೆಟ್ಟರಿಂದ ಇನ್ನಷ್ಟು ಸಮಾಜ ಸೇವೆ, ವಸ್ತುನಿಷ್ಠ  ಮಾಧ್ಯಮ ಸೇವೆ ಸಿಗಲಿ ಎಂದು ಆಶಿಸೋಣ, ಹಾರೈಸೋಣ.

Leave a Reply

Your email address will not be published. Required fields are marked *

ಮಂಗಳೂರು: ಆಟವಾಡುತ್ತಾ 15 ಅಡಿ ಆಳದ ನೀರಿದ್ದ ಬಾವಿಗೆ ಬಿದ್ದ ಹೆಣ್ಣು ಮಗು….!

ಮಂಗಳೂರು: ಕಲ್ಲಡ್ಕ ಪ್ರಭಾಕರ್ ಭಟ್ ಅವರ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ..!

ಬಂಟ್ವಾಳ: ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ “ಶ್ರೀರಾಮನ ಚರಿತ್ರೆಯ” ಯಕ್ಷಗಾನ….!

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

ಬಂಟ್ವಾಳ: ಜೋರಾದ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿ..!

ಉಡುಪಿ: ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಮೋಸ ಮಾಡಿದ ಮಹಿಳೆ..!

ದುಬೈ: ಅಕ್ಟೋಬರ್ 25 ರಂದು ದುಬೈನಲ್ಲಿ ದುಬೈ ಗಡಿನಾಡ ಉತ್ಸವ

ಮಂಗಳೂರು: ಅಶೋಕ ಜನಮನ ಕಾರ್ಯಕ್ರಮ ಆಯೋಜನೆ; ನೂಕು ನುಗ್ಗಲು ಉಂಟಾಗಿ ಅಸ್ವಸ್ಥರಾದ 11ಕ್ಕೂ ಹೆಚ್ಚು ಜನ…!

ಬಂಟ್ವಾಳ: ದ.ಕ.ಜಿಲ್ಲಾ ತುಳು ನಾಟಕ ಕಲಾವಿದರ ಒಕ್ಕೂಟ ವಾರ್ಷಿಕ ಮಹಾಸಭೆ; ನೂತನ ಅಧ್ಯಕ್ಷರಾಗಿ ಕಿಶೋರ್ ಡಿ.ಶೆಟ್ಟಿ ಪುನರಾಯ್ಕೆ….!

error: Content is protected !!