ಜನ ಮನದ ನಾಡಿ ಮಿಡಿತ

Advertisement

ವಿಟ್ಲ: ರಸ್ತೆ ಬದಿಯ ಮರಕ್ಕೆ ಡಿಕ್ಕಿಹೊಡೆದ ಟಿಪ್ಪರ್ ಲಾರಿ – ಇಬ್ಬರಿಗೆ ಗಾಯ..!

ನಿಯಂತ್ರಣ ತಪ್ಪಿದ ಟಿಪ್ಪರ್ ಲಾರಿಯೊಂದು ರಸ್ತೆ ಬದಿಯ ಮರವೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಗಂಭೀರ ಗಾಯಗೊಂಡ ಘಟನೆ ವಿಟ್ಲ ಸಮೀಪದ ಉಕ್ಕುಡ ಬಳಿ ನಡೆದಿದೆ.

ಗಾಯಾಳುಗಳನ್ನು ಪುತ್ತೂರು ಮೂಲದ ದಿನೇಶ್ ಮತ್ತು ಅಂಕಿತ್ ಎಂದು ಗುರುತಿಸಲಾಗಿದೆ. ವಿಟ್ಲ-ಅಡ್ಯನಡ್ಕ ರಸ್ತೆಯ ಉಕ್ಕುಡ ದರ್ಬೆ ಎಂಬಲ್ಲಿನ ಅಪಾಯಕಾರಿ ರಸ್ತೆ ತಿರುವಿನಲ್ಲಿ ಈ ಅಪಘಾತ ಸಂಭವಿಸಿದೆ. ಉಕ್ಕುಡ ಕಡೆಯಿಂದ ಕುದ್ದುಪದವು ಕಡೆಗೆ ಸಂಚರಿಸುತ್ತಿದ್ದ ಟಿಪ್ಪರ್ ಲಾರಿ ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಟಿಪ್ಪರ್ ಲಾರಿಯ ಮುಂಭಾಗ ಜಖಂಗೊಂಡಿದ್ದು, ಲಾರಿಯಲ್ಲಿದ್ದ ಚಾಲಕ ಮತ್ತು ಕ್ಲೀನರ್ ಇಬ್ಬರೂ ಕ್ಯಾಬಿನ್‌ನಲ್ಲಿ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಸ್ಥಳಕ್ಕಾಗಮಿಸಿದ ಸ್ಥಳೀಯರು ಗಾಯಾಳುಗಳನ್ನು ಲಾರಿಯಿಂದ ಹೊರತೆಗೆದು ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾಗಿದ್ದಾರೆ. ಅಪಘಾತಕ್ಕೀಡಾದ ಲಾರಿ ಉಪ್ಪಿನಂಗಡಿ ನಿವಾಸಿಗೆ ಸೇರಿದ್ದಾಗಿದೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ವಿಟ್ಲ ಠಾಣಾ ಪೊಲೀಸರು ಆಗಮಿಸಿ ಮಾಹಿತಿ ಸಂಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

ನವದೆಹಲಿ: ಅರಬ್ಬಿ ಸಮುದ್ರದಲ್ಲಿ ಭರ್ಜರಿ ಡ್ರಗ್ಸ್ ಬೇಟೆ: ₹3 ಸಾವಿರ ಕೋಟಿ ಮೌಲ್ಯದ ಮಾದಕವಸ್ತು ವಶ..!

ಮಂಗಳೂರು: MRPL ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಭೇಟಿ; ಪರಿಸ್ಥಿತಿ ಪರಿಶೀಲನೆ..!

ಬಂಟ್ವಾಳ: ಮಂಗಳೂರು ರೈಲು ಪ್ರದೇಶ ಮೈಸೂರು ವಿಭಾಗಕ್ಕೆ: ಪ್ರಮುಖ ನಿಲ್ದಾಣಗಳಿಗೆ ಅಧಿಕಾರಿಗಳ ಭೇಟಿ.

ಬೆಂಗಳೂರು: ಬೆಂಗಳೂರಿನಲ್ಲಿ ಟ್ರಾಫಿಕ್ ನಿಯಂತ್ರಣಕ್ಕೆ ಶಾಲಾ ಸಮಯ ಬದಲಾವಣೆಗೆ ಚಿಂತನೆ.

ಉಡುಪಿ: ಶಂಕರಪುರ ಮಠದಲ್ಲಿ ಅ.3, 4ರಂದು ಸಾಯಿ ಈಶ್ವರ್ ಗುರೂಜಿ ಪಂಚಾಶತ್ ಜನ್ಮ ವೈಭವ…!

ಪುತ್ತೂರು: ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಅವಧಿ ಮೀರಿದ ಮಾತ್ರೆ ವಿತರಣೆ ಆರೋಪ; ಅಧಿಕಾರಿಗಳಿಂದ ವಿಚಾರಣೆ

ನವದೆಹಲಿ: ಮೋದಿ–ಟ್ರಂಪ್ ದೂರವಾಣಿ ಮಾತುಕತೆ: ವ್ಯಾಪಾರ, ರಕ್ಷಣೆ, ಇಂಧನ ಸಹಕಾರದ ಕುರಿತು ಚರ್ಚೆ

ಮಂಗಳೂರು: ಮಂಗಳೂರು ರೈಲು ಪ್ರದೇಶ ಇಂದಿನಿಂದ ಮೈಸೂರು ವಿಭಾಗದ ಅಧೀನಕ್ಕೆ…!

ದುಬೈ: ಫ್ಲೈದುಬೈ ವಿಮಾನದಲ್ಲಿ ಕಾಕ್‌ಪಿಟ್ ಘಟನೆ: ಸಹ ಪೈಲಟ್‌ನ ಯತ್ನ ತಡೆದ ಭಾರತೀಯ ಪೈಲಟ್…!

error: Content is protected !!