ಜನ ಮನದ ನಾಡಿ ಮಿಡಿತ

Advertisement

ತೋಕೂರಿನಲ್ಲಿ ಆಟಿದ ನೆಂಪು ಕಾರ್ಯಕ್ರಮ

ಮುಲ್ಕಿ,: ನೆಹರು ಯುವ ಕೇಂದ್ರ ಮಂಗಳೂರು ,ರಜತ ಮಹೋತ್ಸವ ಸಮಿತಿ ಮಹಿಳಾ ಮಂಡಲ (ರಿ.) ತೋಕೂರು , ಜಿಲ್ಲಾ ಮತ್ತು ರಾಜ್ಯ ಪ್ರಶಸ್ತಿಗೆ ವಿಜೇತ ಯುವಕ ಸಂಘ(ರಿ.) ತೋಕೂರು, ರೋಟರಿ ಸಮುದಾಯದಳ ತೋಕೂರು ಇವರ ಜಂಟಿ ಸಹಯೋಗದಲ್ಲಿ ತೋಕೂರಿನ ಯುವಕ ಸಂಘದ ಸ್ವರ್ಣ ಸಭಾಂಗಣದಲ್ಲಿ ಆಟಿದ ನೆಂಪು ಕಾರ್ಯಕ್ರಮ ನೆರವೇರಿತು.

ನಮ್ಮ ತುಳುನಾಡಿನ ವಿಶಿಷ್ಟ ಆಚರಣೆಯ ಮಹತ್ವವನ್ನು ನಮ್ಮ ಮಕ್ಕಳಿಗೆ ವೈಜ್ಞಾನಿಕ ರೀತಿಯಲ್ಲಿ ತಿಳಿಯಪಡಿಸಿ ಅದನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಗೋವಿಂದ ದಾಸ್ ಕಾಲೇಜಿನ ಉಪನ್ಯಾಸಕಿಯಾದ ಶ್ರೀಮತಿ ಪಲ್ಲವಿ ರಾಜೇಶ್ ಇವರು ಈ ಸಂದರ್ಭದಲ್ಲಿ ಹೇಳಿದರು. ಶ್ರೀಮತಿ ರತ್ನ ಭಂಡಾರಿ ಆಟಿಕಳೆಂಜದ ಹಾಡು ಹೇಳಿ ಎಲ್ಲರನ್ನು ರಂಜಿಸಿದರು. ರಜತ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷೆ ಶ್ರೀಮತಿ ಯಶೋಧ ಪಿ ರಾವ್ ಪ್ರಸ್ತಾವನೆ ಗೈದರು. ಮಹಿಳಾಮಂಡಲದ ಅಧ್ಯಕ್ಷೆ ಶ್ರೀಮತಿ ಅನುಪಮಾ ಎ ರಾವ್ ಸ್ವಾಗತಿಸಿ ಯುವಕ ಸಂಘದ ಅಧ್ಯಕ್ಷರಾದ ಶ್ರೀ ಶೇಖರ್ ಶೆಟ್ಟಿಗಾರ್ ವಂದಿಸಿದರು. ಮಹಿಳಾಮಂಡಲದ ಹಿರಿಯ ಸದಸ್ಯೆ ವಿನೋದ ಭಟ್ ಕಾರ್ಯಕ್ರಮ ನಿರೂಪಿಸಿದರು. ನೂರಕ್ಕೂ ಹೆಚ್ಚು ಮಂದಿ ಆಟಿದ ನೆಂಪು ಕಾರ್ಯಕ್ರಮದಲ್ಲಿ ಭಾಗವಹಿಸಿ ಭೋಜನವನ್ನು ಸವಿದರು.

Leave a Reply

Your email address will not be published. Required fields are marked *

ಮಂಗಳೂರು: ಮಂಗಳೂರಿನಲ್ಲಿ ಸಾರ್ವಜನಿಕ ಭೇಟಿ ನಡೆಸಿದ ಚೌಟ…!

ಬಂಟ್ವಾಳ: ಕಚೇರಿ ಪ್ರವೇಶ ದಾರಿಯಲ್ಲಿ ತ್ಯಾಜ್ಯ: ಅಧಿಕಾರಿಗಳ ಮೌನಕ್ಕೆ ಟೀಕೆ…!

ಬಂಟ್ವಾಳ: ಸಂಚರಿಸುತ್ತಿದ್ದ ಲಾರಿಯಲ್ಲಿ ಆಕಸ್ಮಿಕವಾಗಿ ಕಾಣಿಸಿಕೊಂಡ ಬೆ*ಂಕಿ…!

ಬಂಟ್ವಾಳ: ಹಗ್ಗ ಕಡಿದು ಬಾವಿಗೆ ಬಿದ್ದ ಇಬ್ಬರು ಕಾರ್ಮಿಕರು ಪಾರು….!

ಕಡೇಶಿವಾಲಯ: ನೆತ್ತರ ಬಾಬು ಪೂಜಾರಿಯವರ ಮನೆಗೆ ಸಿಡಿಲು ಬಡಿದು ಹಾನಿ….!

ಬಂಟ್ವಾಳ: ಸಿಡಿಲು ಬಡಿದ ಇಳಿಯೂರು ಶ್ರೀ ಮಹಾವಿಷ್ಣು ದೇವಸ್ಥಾನಕ್ಕೆ ಭೇಟಿ ನೀಡಿದ ಬಿಜೆಪಿ ಮುಖಂಡ ಸಂದೇಶ್ ಶೆಟ್ಟಿ ಅರೆಬೆಟ್ಟು..!

ಬಂಟ್ವಾಳ: ಕರಾವಳಿಯ ಕಾರಣೀಕ ದೈವ ಕೊರಗಜ್ಜನಿಗೆ ಕೋಲ ಸೇವೆ ಸಲ್ಲಿಸಿದ ಖ್ಯಾತ ಚಲನಚಿತ್ರ ನಟಿಯಾಗಿರುವ ರಚಿತರಾಮ್..!

ಬಂಟ್ವಾಳ: ಬಂಟ್ವಾಳ ತಾಲೂಕಿನ ಮಹತೋಬಾರ ಶ್ರೀ ಕಾರಿಂಜೇಶ್ವರ ದೇವಸ್ಥಾನಕ್ಕೆ ಬಡಿದ ಸಿಡಿಲು..!

ಬಂಟ್ವಾಳ: ಬಂಟ್ವಾಳ ತಾಲೂಕಿನಲ್ಲಿ ಕೆಲ ಮನೆಗಳಿಗೆ ಸಿಡಿಲು ಬಡಿದು ಹಾನಿ..!

error: Content is protected !!