ಜನ ಮನದ ನಾಡಿ ಮಿಡಿತ

Advertisement

ಬಂಟ್ವಾಳ: ಕಂಬಳದಲ್ಲಿ ಗೆದ್ದ ಚಿನ್ನದ ಪದಕ ಅನಾರೋಗ್ಯಪೀಡಿತ ಸಹಾಯಕನಿಗೆ ಸಮರ್ಪಣೆ

ಕಂಬಳದ ಕರೆಯಲ್ಲಿ ಗೆಲುವು ಸಾಧಿಸಿ ಚಿನ್ನದ ಪದಕ ಪಡೆಯುವುದು ಕೋಣಗಳ ಯಜಮಾನರಿಗೆ ಹೆಮ್ಮೆಯ ಗೌರವ. ಆದರೆ ಆ ಗೆಲುವಿನ ಹಿಂದೆ ಬೆವರಿಳಿಸಿ ದುಡಿದವರ ಸೇವೆಯನ್ನು ಗುರುತಿಸಿ, ಅವರ ಸಂಕಷ್ಟಕ್ಕೆ ಸ್ಪಂದಿಸುವ ಮೂಲಕ ಪದಕದ ಮೌಲ್ಯವನ್ನು ಹೆಚ್ಚಿಸಿದ ಅಪರೂಪದ ಘಟನೆ ನಡೆದಿದೆ.

ತಮ್ಮ ತಂಡದೊಂದಿಗೆ ಸುದೀರ್ಘ ಕಾಲ ದುಡಿದ ಅನಾರೋಗ್ಯಪೀಡಿತ ಸಹಾಯಕನಿಗೆ ಗೆದ್ದ ಚಿನ್ನದ ಪದಕವನ್ನು ನೀಡುವ ಮೂಲಕ ಮಂಗಳೂರಿನ ಶಕ್ತಿನಗರ ಪದವು ಕಾನಡ್ಕ ತಂಡ ಮಾನವೀಯತೆ ಮೆರೆದಿದೆ.

ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಕಂಬಳ ಸ್ಪರ್ಧೆಯಲ್ಲಿ ಫ್ಲೇವಿ ಡಿಸೋಜಾ ಅವರ ಪದವು ಕಾನಡ್ಕ ತಂಡದ ಕೋಣಗಳು ಹಗ್ಗ ಕಿರಿಯ ವಿಭಾಗದಲ್ಲಿ ಪ್ರಥಮ ಬಹುಮಾನ ಗಳಿಸಿದ್ದವು. ಈ ಸಾಧನೆಗೆ ಲಭಿಸಿದ ಚಿನ್ನದ ಪದಕವನ್ನು ತಂಡದಲ್ಲಿ ದೀರ್ಘಕಾಲ ಕೋಣಗಳ ಆರೈಕೆಯಲ್ಲಿ ತೊಡಗಿಸಿಕೊಂಡಿದ್ದ ಬಂಟ್ವಾಳ ತಾಲೂಕಿನ ಕೊಳತ್ತಮಜಲು ನಿವಾಸಿ ವೀರಪ್ಪ ಅವರಿಗೆ ಸಮರ್ಪಿಸಲಾಗಿದೆ.

ಅನಾರೋಗ್ಯದ ಕಾರಣ ವೀರಪ್ಪ ಅವರು ಕಳೆದ ವರ್ಷದಿಂದ ಕಂಬಳದಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಆದರೂ ತಂಡದ ಯಶಸ್ಸಿನಲ್ಲಿ ಅವರ ಕೊಡುಗೆಯನ್ನು ಮರೆಯದ ಪದವು ಕಾನಡ್ಕ ತಂಡ, ಗೆದ್ದ ಪದಕವನ್ನು ಅವರಿಗೆ ನೀಡುವ ಮೂಲಕ ತಮ್ಮ ಕೃತಜ್ಞತೆ ಹಾಗೂ ಗೌರವವನ್ನು ವ್ಯಕ್ತಪಡಿಸಿದೆ. ಈ ಮಾನವೀಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *

ಉಡುಪಿ: ಸುಪ್ರೀಂ ಕೋರ್ಟ್‌ಗೆ ಮುತ್ತಿಗೆ ಹಾಕುವ ಪ್ರಯತ್ನಕ್ಕೆ ರಾಹುಲ್ ಗಾಂಧಿ ಪ್ರಚೋದನೆ: ಕೆ.ಎಸ್. ನವೀನ್ ಆರೋಪ

ಉಡುಪಿ: ನ.15ರೊಳಗೆ ಉಡುಪಿ ಜಿಲ್ಲಾಸ್ಪತ್ರೆಗೆ ಆರೋಗ್ಯ ಸಚಿವರು ಭೇಟಿ ನೀಡಿ ಪರಿಶೀಲಿಸಲಿ: ಯಶ್ಪಾಲ್ ಸುವರ್ಣ ಆಗ್ರಹ

ಮಂಗಳೂರು: ವಾಮಂಜೂರು ಶಾಲೆಯಲ್ಲಿ ಹಣಕಾಸು ಅವ್ಯವಹಾರದ ಆರೋಪ: 11 ವರ್ಷಗಳ ಲೆಕ್ಕಪತ್ರ ಬಹಿರಂಗಪಡಿಸಲು ಆಗ್ರಹ..!

ಮಂಗಳೂರು: ಪ್ರೀತಿ ವಿಚಾರವಾಗಿ ರಾಕೇಶ್ ಕೊಲೆ ಪ್ರಕರಣ: ನಾಲ್ವರು ಆರೋಪಿಗಳು ದೋಷಿಗಳು ಎಂದು ನ್ಯಾಯಾಲಯ ತೀರ್ಪು

ಬೆಂಗಳೂರು: ನಂದಿನಿ ಹಾಲಿನ ದರ ಲೀಟರ್‌ಗೆ ₹8 ಏರಿಕೆ: ನವೆಂಬರ್ 1ರಿಂದಲೇ ಹೊಸ ದರ ಜಾರಿ

ಉಡುಪಿ: ಸಮಾಜಮುಖಿ ಕಾರ್ಯಗಳ ಮೂಲಕ ಹುಟ್ಟುಹಬ್ಬ ಆಚರಣೆ ಅಭಿನಂದನೀಯ: ವಿನಯಕುಮಾರ್ ಸೊರಕೆ

ಉಡುಪಿ: ಬಾಡಿಗೆ ಮುಂಗಡ ಹಣದ ವಿವಾದ; ಅಂಗಡಿ ಮಾಲೀಕನ ಮೇಲೆ ಆ್ಯಸಿಡ್ ದಾಳಿ, ಆರೋಪಿ ಬಂಧನ

ಉಡುಪಿ: ರೌಡಿಶೀಟರ್ ಸುಜಿತ್ ಪಿಂಟೊ ಕೊಲೆ ಪ್ರಕರಣ; ಮತ್ತೋರ್ವ ಆರೋಪಿ ಬಂಧನ….!

ಉಡುಪಿ: ಪ್ರವಾಸಿಗರಿಗೆ ಗಾಂಜಾ ಮಾರಾಟ ಆರೋಪ; ಇಬ್ಬರ ಬಂಧನ, 5.710 ಕೆ.ಜಿ. ಗಾಂಜಾ ವಶ

error: Content is protected !!