ಹಿಂದು ಜಾಗರಣ ವೇದಿಕೆ ಬಂಟ್ವಾಳ ತಾಲೂಕು ಕಾರ್ಯಕಾರಿಣಿ ಸದಸ್ಯರಾದ ಶರತ್ ಕುಮಾರ್ ಎಂಬವರ ಮೇಲೆ ಸಮಾಜದ ದ್ವನಿ ಎಂಬ ಫೇಸ್ಬುಕ್ ಪೇಜ್ ನಲ್ಲಿ ಮಾನಹಾನಿ ಬರಹ ಹಾಕಲಾಗಿದ್ದು, ಇದನ್ನು ಖಂಡಿಸಿ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಶರತ್ ಕುಮಾರ್ ಕೇಸು ದಾಖಲಿಸಿದ್ದಾರೆ.

ಶಾಮಿಯಾನ ವ್ಯವಹಾರ ನಡೆಸುತ್ತಿರುವ ಶರತ್ ಅವರು ಕೆಲವು ಧಾರ್ಮಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದು, ಇವರ ಬಗ್ಗೆ ಸಮಾಜದ ಧ್ವನಿ ಫೇಸ್ಬುಕ್ ಪುಟದಲ್ಲಿ ಅಪಪ್ರಚಾರ ಮಾಡಿದ್ದಾರೆ, ಇದರಿಂದ ತನ್ನ ಮಾನಹಾನಿಯಾಗಿದೆ ಎಂದು ಶರತ್ ಕೇಸು ದಾಖಲಿಸಿದ್ದಾರೆ.

ತಾರೀಕು 5-8-2023 ಸಮಯ ಸುಮಾರು ಮಧ್ಯಾಹ್ನ 1:00ಗೆ ನಾನು ಫೇಸ್ಬುಕ್ ಪುಟಗಳನ್ನುವೀಕ್ಷಿಸುತ್ತಿರುವ ಸಂದರ್ಭದಲ್ಲಿ ಸಮಾಜದ ಧ್ವನಿ ಎಂಬ ಫೇಸ್ ಬುಕ್ ಪುಟದಲ್ಲಿ ನಿನ್ನೆ ನಡೆದ ಕೊಡ್ಯಮಲೆ ಅರಣ್ಯದಲ್ಲಿ ನಡೆದ ದಾಳಿಯನ್ನು ಉದ್ದೇಶಿಸಿ ನಾನು ಈ ದಾಳಿಯನ್ನು ಮಾಡುವ ಮುಂಚೆ ಎರಡು ಲಕ್ಷ ರೂಪಾಯಿಯನ್ನು ಬೇಡಿಕೆ ಇಟ್ಟಿದ್ದೆ ಹಾಗೂ ನಾನು ಅಕ್ರಮ ಗೋಸಾಗಣೆಗೆ ಹಣಕೊಸ್ಕರ ಸಹಕಾರ ನೀಡುತ್ತಿದ್ದೇನೆ ಹಾಗೂ ಇನ್ನೂ ಇತರರ ಹೆಸರನ್ನು ನಮೂದಿಸಿ ಅವರ ಹಾಗೆ ನಾನು ಕೂಡ ಅಕ್ರಮ ಚಟುವಟಿಕೆ ಚಟುವಟಿಕೆಗಳಲ್ಲಿ ತೊಡಗಿದ್ದೇನೆ ಎಂದು ಅಪಪ್ರಚಾರ ಮಾಡಿರುತ್ತಾರೆ ಹಾಗೂ ಈ ವಿಚಾರವನ್ನು ಬೆಳ್ತಂಗಡಿ ಕಾಂಗ್ರೆಸ್ ಮತ್ತು ಇನ್ನೂ ಇತರ ಮೂರು ಜನಗಳಿಗೆ ಫೇಸ್ಬುಕ್ ಪುಟದಲ್ಲಿ ಹಂಚಿಕೊಂಡಿರುತ್ತಾರೆ. ಈ ಅಪಪ್ರಚಾರದಿಂದ ನನ್ನ ಗೌರವಕ್ಕೆ ಧಕ್ಕೆಯಾಗಿದ್ದು ನನಗೆ ಮಾನಹಾನಿಯಾಗಿರುತ್ತದೆ. ಈ ಬಗ್ಗೆ ಸೂಕ್ತ ತನಿಖೆಯನ್ನು ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಶರತ್ ಕೋರಿದ್ದಾರೆ.




