ಪುತ್ತೂರು ತಾಲೂಕು ಮಾಡೂರು ಗ್ರಾಮದ ಅಮ್ಮಿನಡ್ಕ ಎಂಬಲ್ಲಿರುವ ವಿಷ್ಣು ಕಲ್ಲೂರಾಯ ರವರು ತಮ್ಮ ಮನೆಯ ಉಗ್ರಾಣದಲ್ಲಿ ಶೇಖರಿಸಿದ 10 ಪ್ಲಾಸ್ಟಿಕ್ ಗೋಣಿಚೀಲದಲ್ಲಿ ತುಂಬಿಸಿದ್ದ ಸುಮಾರು ಎರಡು ಕ್ವಿಂಟಾಲ್ ಸುಲಿಯದ ಒಣ ಅಡಿಕೆಯನ್ನು ಮತ್ತು ಹುಲ್ಲು ತೆಗೆಯುವ ಮೆಷಿನ್ 19-07-2023 ಬೆಳಿಗ್ಗೆ 10.00 ಗಂಟೆಯಿಂದ 3-೦8-2023 ಬೆಳಿಗ್ಗೆ 9.00 ಗಂಟೆಯ ಮಧ್ಯ ಕಳವಾಗಿದ್ದು, ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದ ಆರೋಪಿಗಳನ್ನು ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಪತ್ತೆ ಹಚ್ಚಿದ್ದು ಆರೋಪಿಗಳಾದ ಕಿರಣ್ ಕುಮಾರ್ (27), ಸಂತೋಷ್. ಯು (30) ಎಂಬುವರನ್ನು ಬಂಧಿಸಿದ್ದಾರೆ.

ಸುಮಾರು ರೂಪಾಯಿ 51 ಸಾವಿರ ಮೌಲ್ಯದ ಒಂದು ಕ್ವಿಂಟಲ್ 20 ಕೆಜಿ ಸುಲಿದ ಅಡಿಕೆ ಮತ್ತು ಸುಮಾರು 5000/- ಮೌಲ್ಯದ ಹುಲ್ಲು ತೆಗೆಯುವ ಮಷೀನ್ ಹಾಗೂ ಕಳವು ಮಾಡಲು ಉಪಯೋಗಿಸಿದ ಸುಮಾರು ಒಂದು ಲಕ್ಷ ಮೌಲ್ಯದ ಓಮಿನಿ ಕಾರನ್ನು ವಶಪಡಿಸಿಕೊಂಡಿರುತ್ತಾರೆ. ಈ ಪ್ರಕರಣದ ಪ್ರಮುಖ ಆರೋಪಿ ನೆಕ್ಕಿಲಾಡಿ ನಿವಾಸಿ ಸಿನಾನ್ ಪರಾರಿ ಆಗಿರುತ್ತಾನೆ.

ಈ ಪ್ರಕರಣವನ್ನು ಬೇದಿಸುವಲ್ಲಿ ಪುತ್ತೂರು ಉಪಾಧೀಕ್ಷಕರಾದ ಡಾ ಗಾನ ಪಿ. ಕುಮಾರ್ ರವರ ಮಾರ್ಗದರ್ಶನದಲ್ಲಿ, ಪುತ್ತೂರು ಗ್ರಾಮಾಂತರ ಠಾಣಾ ಪ್ರಭಾರ ಪೊಲೀಸ್ ನಿರೀಕ್ಷಕರಾದ ರವಿ.ಬಿ.ಎಸ್, ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ಧನಂಜಯ ಬಿ.ಸಿ, ಎಎಸ್‌ಐ ಮುರುಗೇಶ್, ಸಿಬ್ಬಂದಿಗಳಾದ ಬಾಲಕೃಷ್ಣ, ಅದ್ರಾಮ ಪ್ರವೀಣ್ ರ, ಲೋಕೇಶ್, ಜಗದೀಶ್, ಮುನಿಯ ನಾಯ್ಕ ಚಾಲಕರಾದ ಯೋಗೀಶ್ ರವರು ಭಾಗವಹಿಸಿರುತ್ತಾರೆ.



