ಪರಕೀಯರ ಸ್ವಾಧೀನದಿಂದ ಮುಕ್ತವಾದ ಬಳಿಕ ನಮ್ಮ ಭಾರತ ಸ್ವಾತಂತ್ರೋತ್ಸವವನ್ನುಅತ್ಯಂತ ನಿಷ್ಠೆಯಿಂದ ಆಚರಿಸುತ್ತೇವೆ.

ಸ್ವಾತಂತ್ರೋತ್ಸವವನ್ನು ಇನ್ನೂ ಅರ್ಥಪೂರ್ಣ ವಾಗಿಸುವ ನಿಟ್ಟಿನಲ್ಲಿ ಮೂರು ದಿನಗಳ ಕಾಲ ಮನೆ ಮನೆಯಲ್ಲಿ ತ್ರಿವರ್ಣ ಧ್ವಜ ಹಾರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಕಳೆದ ವರ್ಷ ಕರೆ ನೀಡಿದ್ರು.
ಇದಕ್ಕೆ ಇಡೀ ದೇಶವೇ ಸ್ಪಂದಿಸಿತ್ತು. ಅದನ್ನೇ ಪ್ರೇರಣೆಯಾಗಿ ಸ್ವೀಕರಿಸಿದ ಮಂಗಳೂರಿನ ಸಮುದಾಯವೊಂದು ತಮ್ಮ ದೇವಸ್ಥಾನ ಆವರಣದಲ್ಲಿ ಕಳೆದ ಆ. 15 ರಿಂದ ನಾಡಿದ್ದು ಆ. 15ರ ವರೆಗೆ ಪ್ರತೀ ದಿನ ಧ್ವಜಾರೋಹಣ ನೆರವೇರಿಸುವ ಮೂಲಕ ಅಮೃತ ಮಹೋತ್ಸವವನ್ನು ವಿಭಿನ್ನವಾಗಿ ಆಚರಿಸುತ್ತಿದೆ.

ಹೌದು, ಉರ್ವಸ್ಟೋರ್ ಬಳಿಯ ಅಶೋಕ ನಗರದ ದೇವಾಂಗ ಸಮುದಾಯಕ್ಕೆ ಸೇರಿದ ಶ್ರೀ ಭಗವತೀ ದೇವಸ್ಥಾನ ಮತ್ತು ಕುಕ್ಕಾಡಿ ಶ್ರೀ ಅರಸು ಮುಂಡತ್ತಾಯ ಧೃವಸ್ಥಾನದ ಆವರಣದಲ್ಲಿ 1 ವರ್ಷದಿಂದ ಧ್ವಜಾರೋಹಣ ಮಾಡುತ್ತಿದ್ದಾರೆ.
ಶರಣಪ್ಪ ಎಂಬವರು ಈ ಕಾಯಕವನ್ನು ಮಾಡುತ್ತಿದ್ದು, ಅವರ ನಿಷ್ಠೆ , ದೇಶ ಪ್ರೇಮ ಎಲ್ಲರಿಗೂ ಮಾದರಿಯಾಂತಾಗಿದೆ.
ಕ್ಷೇತ್ರದ ಆವರಣದಲ್ಲಿ ಧ್ವಜಾ ರೋಹಣದ ಯೋಜನೆ ಆ ಕ್ಷಣಕ್ಕೆ ಬಂದ ಯೋಚನೆಯಾಗಿದ್ದು, ಅನುಷ್ಠಾನಗೊಳಿಸುವಲ್ಲಿ ಒಳ್ಳೆಯ ವ್ಯಕ್ತಿಯೊಬ್ಬರು ಸಿಕ್ಕ ಕಾರಣ ವರ್ಷ ಕಾಲ ನಿರ್ವಿಘ್ನವಾಗಿ ನೆರವೇರಿತು, ಮುಂದಕ್ಕೆ ರಾಷ್ಟ್ರ ಪ್ರೇಮ ಉದ್ದೀಪನಗೊಳಿಸುವ ಇನ್ನೊಂದು ಉತ್ತಮ ಕಾರ್ಯಕ್ರಮವನ್ನು ಆಯೋಜಿಸುವ ಚಿಂತನೆ ಇದೆ ಎಂಬುವುದು ಸ್ಥಿತಿ ಮರ್ಮೂರು, ಕ್ಷೇತ್ರದ ಆಡಳಿತ ಮೊಕೇಸ್ತರರ ಮಾತು.



