ಈಜುಗಾರ್ತಿ ಸುಚೇತಾ ದೇಬ್ ಬರ್ಮನ್ ವರ್ಲಿ ಸಮುದ್ರದ ಲಿಂಕ್‌ನಿ0ದ ಮುಂಬಯಿಯ ಗೇಟ್ ವೇ ಆಫ್ ಇಂಡಿಯಾ ತನಕ ಈಜಿ ಗಮನ ಸೆಳೆದಿದ್ದಾರೆ.

ಅವರು ಸುಮಾರು 36 ಕಿ.ಮೀ. ಈಜಿದ ವಿಡೀಯೋ ಸುಚೇತಾ ತಮ್ಮ ಇನ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊ0ಡಿದ್ದಾರೆ.
ಸುಚೇತಾ ಶೇರ್ ಮಾಡಿಕೊಂಡಿರುವ ವೀಡಿಯೋವನ್ನು ಈಗಾಗಲೇ 6 ಲಕ್ಷಕ್ಕಿಂತ ಅಧಿಕ ಮಂದಿ ವೀಕ್ಷಿಸಿದ್ದು, ಸುಮಾರು 62 ಸಾವಿರ ಮಂದಿ ಲೈಕ್ ಮಾಡಿದ್ದಾರೆ. ಇನ್ನೂ ಇವರ ಸಾಹಸಕ್ಕೆ ನೆಟ್ಟಿಗರಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.



