ತುಳುನಾಡಿನ ಆಚಾರ- ವಿಚಾರ, ಸಂಸ್ಕೃತಿ, ಜೀವನ ಪದ್ಧತಿ, ಇವೆಲ್ಲವುಗಳನ್ನು ಒಳಗೊಂಡ ತುಳು ಸಿನೆಮಾ “ಕೊರಮ್ಮ”, ಪಡುಬಿದ್ರೆಯ ಭಾರತ್ ಸಿನಿಮಾಸ್ ನಲ್ಲಿ ಬಿಡುಗಡೆಗೊಂಡಿತು. ಕಾರ್ಯಕ್ರಮವನ್ನು ಹೇರಂಭ ಇಂಡಸ್ಟ್ರಿಸ್ ಲಿಮಿಟೆಡ್, ಕೆಮಿನೋ ಫಾರ್ಮಾ ಲಿಮಿಟೆಡ್ ಮುಂಬೈ ಇದರ ಚೆರ್ಮೆನ್ ಕನ್ಯಾನ ಸದಾಶಿವ ಶೆಟ್ಟಿ ಅವರು ದೀಪ ಬೆಳಗಿ ಉದ್ಘಾಟಿಸಿದರು.

ತುಳುನಾಡಿನ ಪೂರ್ವಜರ ಬದುಕು ಮಾರ್ಮಿಕವಾಗಿ ಪ್ರತಿಬಿಂಬಿತವಾಗಿದೆ. ತುಳುವರ ಹಿರಿಯರ ಕಾಲದ ಪರಿಕರಗಳನ್ನು ಸಮರ್ಥವಾಗಿ ಬಳಸಿಕೊಂಡು ಮಾಡಿರುವ ಈ ಸಿನೆಮಾ, ಕಾರ್ಕಳದ ಬೈಲೂರಿನ ಸುಂದರ ತಾಣದಲ್ಲಿ ಒಂದೇ ಹಂತದಲ್ಲಿ ಚಿತ್ರೀಕಣವಾಗಿದೆ.
ಪಡುಬಿದ್ರೆಯ ಭಾರತ್ ಸಿನೆಮಾಸ್ ನಲ್ಲಿ ಮೊದಲ ಶೋ ವೀಕ್ಷಣೆ ಮಾಡಿದ ಸಿನಿ ಪ್ರಿಯರು ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.
ತುಳು ಚಿತ್ರರಂಗಕ್ಕೆ ಬದಲಾವಣೆ ಕೊಡಬಲ್ಲ ಮೌಲ್ಯಯುತವಾದ ಕಥಾವಸ್ತುವನ್ನು “ಕೊರಮ್ಮ” ಚಲನಚಿತ್ರ ಹೊಂದಿದ್ದು, ಮಂಗಳೂರು, ಸುರತ್ಕಲ್, ಪುತ್ತೂರು, ಪಡುಬಿದ್ರೆ, ಮುಂತಾದ ಕಡೆಗಳಲ್ಲಿ ಸಿನಿಮಾ ರಿಲೀಸ್ ಆಗಿದೆ.



ತುಳುವರ ಹಿರಿಯರ ಕಾಲದ ಪರಿಕರಗಳನ್ನು ಸಮರ್ಥವಾಗಿ ಬಳಸಿಕೊಂಡು ಮಾಡಿರುವ ಈ ಸಿನೆಮಾದ ಕಥೆ-ಚಿತ್ರಕಥೆ-ನಿರ್ದೇಶನ ರಾಷ್ಟ್ರ ಪ್ರಶಸ್ತಿ ಚಿತ್ರ ನಿರ್ದೇಶಕ ಶಿವಧ್ವಜ್ ಶೆಟ್ಟಿ. ನಿರ್ಮಾಪಕರು ಅಡ್ಯಾರ್ ಮಾಧವ ನಾಯ್ಕ್, ಈಶ್ಚರಿದಾಸ್ ಶೆಟ್ಟಿ ಮತ್ತು ರಾಜೇಶ್ವರ ರೈ, ಸಂಗೀತ ಶಿನೋಯ್ ಎ. ಜೋಸೆಫ್, ಛಾಯಾಗ್ರಹಣ ಸುರೇಶ್ ಬೈರಸಂದ್ರ, ಸಂಕಲನ ಗಣೇಶ್ ನೀರ್ಚಾಲ್, ಸಂಭಾಷಣೆ ಶ್ರೀನಿಧಿ ಭಟ್, ಅನುವಾದ ಮತ್ತು ಸಾಹಿತ್ಯ ಕೆ. ಮಹೇಂದ್ರನಾಥ್ ಸಾಲೆತ್ತೂರು, ಕಲೆ ಸಂತೋಷ ಪೂಜಾರಿ ವೇಣೂರು, ಸಹ ನಿರ್ದೇಶನ ಹರ್ಷೀವ ಭಗೀರ, ಪ್ರಸಾಧನ ಕುಮಾರ್ ನೋಣವಿನಕೆರೆ, ನಿರ್ಮಾಣ-ನಿರ್ವಹಣೆ ವೀರೇಶ್ ಎಸ್. ಪಿ. ಕಾರ್ಕಳದ ಬೈಲೂರಿನ ಸುಂದರ ತಾಣದಲ್ಲಿ ಒಂದೇ ಹಂತದಲ್ಲಿ ಚಿತ್ರೀಕಣವಾಗಿರುವ “ಕೊರಮ್ಮ” ಚಿತ್ರದ ತಾರಾಗಣದಲ್ಲಿ – ಗುರುಹೆಗ್ಡೆ, ರೂಪ ಶ್ರೀ ವರ್ಕಾಡಿ, ಮೋಹನ್ ಶೇಣಿ, ಬಿಂದುರಕ್ಷಿದಿ, ಜಿನಪ್ರಸಾದ್, ದಿವ್ಯಶ್ರೀ, ನಾಯಕ್, ಲಕ್ಷ್ಮಣ್ ಕುಮಾರ್ ಮಲ್ಲೂರು, ನಮಿತಾ ಕೂಳೂರು, ಸುಮನ ಮಂಗಳೂರು, ಹರೀಶ್ ಜೋಡು ರಸ್ತೆ, ಮತ್ತಿರರು ನಟಿಸಿರುತ್ತಾರೆ.







