ಮಂಗಳೂರು : ಉದ್ಯೋಗಕ್ಕೆಂದು ಬಂದಿದ್ದ ಯುವತಿ ನಾಪತ್ತೆಯಾಗಿರುವ ಘಟನೆ ಮಂಗಳೂರಿನ ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಹೊನ್ನಾವರದ ಸೋನಿಯಾ ರೋಡ್ರಿಗಸ್ (23) ನಾಪತ್ತೆಯಾಗಿರುವ ಯುವತಿಯಾಗಿದ್ದು, ಈಕೆ ಸುಮಾರು 8 ತಿಂಗಳ ಹಿಂದೆ ಉದ್ಯೋಗಕ್ಕಾಗಿ ಮಂಗಳೂರಿಗೆ ಬಂದಿದ್ದರು.

ಸೋನಿಯಾ ಬೆಂದೂರಿನ ಅಪಾರ್ಟ್ಮೆಂಟ್ ಒಂದರಲ್ಲಿ ವಾಸವಿರುವುದಾಗಿ ತಿಳಿಸಿದ್ದು, ಇತ್ತೀಚೆಗೆ ಕರೆಗಳನ್ನು ಸ್ವೀಕರಿಸದ ಹಿನ್ನೆಲೆಯಲ್ಲಿ ಅಪಾರ್ಟ್ಮೆಂಟ್‌ಗೆ ಬಂದು ವಿಚಾರಿಸಿದಾಗ ಆಕೆಯ ಬಗ್ಗೆ ಯಾವುದೇ ಮಾಹಿತಿ ಇಲ್ಲವೆಂದು ಅಪಾರ್ಟ್ ಮೆಂಟ್‌ನ ನಿವಾಸಿಗಳು ಹೇಳಿದ್ದಾರೆ.
ಇನ್ನೂ ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



