ಜನ ಮನದ ನಾಡಿ ಮಿಡಿತ

Advertisement

ಚಂದ್ರನ ಅಂಗಳಕ್ಕೆ ಚಂದ್ರಯಾನ-3 ತಲುಪಲು ಕ್ಷಣಗಣನೆ…!

ಚಂದ್ರನ ಅಂಗಳದಲ್ಲಿ ಭಾರತದ ಮಹತ್ವಾಕಾಂಕ್ಷಿಯ ಚಂದ್ರಯಾನ-3 ಲ್ಯಾಂಡ್ ಆಗಲು ಇನ್ನು ಕೆಲವೇ ದಿನಗಳು ಬಾಕಿ ಉಳಿದಿದೆ.
ಇಸ್ರೋ ತನ್ನ ಚಂದ್ರಯಾನ-3 ಸ್ಯಾಟಲೈಟ್ ಅನ್ನು ಚಂದ್ರನ ಮೇಲೆ ಯಶಸ್ವಿಯಾಗಿ ಲ್ಯಾಂಡ್ ಮಾಡಲು ಮುಂದಾಗಿದೆ. ಪ್ರತಿಯೊಂದು ಹಂತದಲ್ಲೂ ಯಶಸ್ವಿಯಾಗಿರುವ ಇಸ್ರೋ ಇವತ್ತು ಮತ್ತೊಂದು ಮೈಲಿಗಲ್ಲು ಸಾಧಿಸಿದೆ.


ಚಂದ್ರಯಾನ-3 ಇವತ್ತು ಯಶಸ್ವಿಯಾಗಿ ಚಂದ್ರನ ಅಂತಿಮ ಕಕ್ಷೆಯನ್ನು ತಲುಪಿದ್ದು, ಇಸ್ರೋ ಲೇಟೆಸ್ಟ್ ಮಾಹಿತಿಯನ್ನು ಇಸ್ರೋದ ಮಾಹಿತಿ ಪ್ರಕಾರ ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-3 ಇಂದು ಚಂದ್ರನ 5ನೇ ಹಾಗೂ ಅಂತಿಮ ಕಕ್ಷೆಯನ್ನು ಯಶಸ್ವಿಯಾಗಿ ಪ್ರವೇಶಿಸಿದೆ. ಈ ಮೂಲಕ ಚಂದ್ರಯಾನ-3 ಚಂದ್ರನಿಗೆ ಮತ್ತಷ್ಟು ಹತ್ತಿರವಾಗಿದೆ. ಅಂದ್ರೆ ಇಸ್ರೋದ ಚಂದ್ರಯಾನ-3 ಚಂದ್ರನಿಗೆ ಇನ್ನು ಕೇವಲ 153 km x 163 km ಅಂತರದಲ್ಲಿದೆ. ನಾಳೆ ಅಂದ್ರೆ ಆಗಸ್ಟ್ 17ರಂದು ಮತ್ತೊಂದು ಮಹತ್ವದ ಕಾರ್ಯಾಚರಣೆ ನಡೆಯಲಿದೆ. ಲ್ಯಾಂಡರ್ ಮಾಡ್ಯೂಲ್‌ನಿಂದ ಪ್ರೊಪಲ್ಟನ್ ಮಾಡ್ಯೂಲ್ ಅನ್ನು ಪ್ರತ್ಯೇಕಿಸುವ ಮುಹೂರ್ತವೂ ನಿಗದಿಯಾಗಿದೆ.


ಕಳೆದ ಜುಲೈ 14ರಂದು ಉಡಾವಣೆಯಾಗಿದ್ದ ಚಂದ್ರಯಾನ-3 ತನ್ನ ಯಶಸ್ವಿ ಪ್ರಯಾಣವನ್ನು ಮುಂದುವರಿಸಿದೆ. ಆಗಸ್ಟ್ 5ರಂದು ಚಂದ್ರನ ಕಕ್ಷೆಯನ್ನು ಪ್ರವೇಶಿಸಿದ ಚಂದ್ರಯಾನ 3 ಇಂದು ಚಂದ್ರನ 5ನೇ ಹಾಗೂ ಅಂತಿಮ ಕಕ್ಷೆಯನ್ನು ಪ್ರವೇಶಿಸಿದೆ. ನಾಳೆ ಲ್ಯಾಂಡಲ್ ಮಾಡ್ಯೂಲ್‌ನಿಂದ ಪ್ರೊಪಲ್ಟನ್ ಮಾಡ್ಯೂಲ್ ಅನ್ನು ಪ್ರತ್ಯೇಕಿಸಲಾಗುತ್ತಿದೆ. ಎಲ್ಲಾ ಅಂದುಕೊAಡತೆ ಆದರೆ ಇದೇ ಆಗಸ್ಟ್ 23ರಂದು ಚಂದ್ರಯಾನ-3 ಸಾಫ್ಟ್ ಲ್ಯಾಂಡಿAಗ್ ಆಗಲಿದೆ. ಅಂದು ಚಂದ್ರನ ಮೇಲ್ಮಯಲ್ಲಿ ಲ್ಯಾಂಡರ್ ಅನ್ನು ಸುರಕ್ಷಿತವಾಗಿ ಇಳಿಸಲು ಯೋಜನೆ ತಯಾರಾಗಿದೆ.

ಆಗಸ್ಟ್ 23ರಂದು ಚಂದ್ರಯಾನ-3ನಲ್ಲಿ ಲ್ಯಾಂಡರ್ ಅನ್ನು ಸುರಕ್ಷಿತವಾಗಿ ಇಳಿಸಿದ್ರೆ ಇಸ್ರೋ ಹೊಸದೊಂದು ಇತಿಹಾಸ ಬರೆಯಲಿದೆ. ಅಮೆರಿಕಾ, ರಷ್ಯಾ, ಚೀನಾದ ಈ ಸಾಧನೆ ಮಾಡಿದ 4ನೇ ದೇಶ ಭಾರತ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಲಿದೆ.

Leave a Reply

Your email address will not be published. Required fields are marked *

ಉಡುಪಿ : ಕಾಪುವಿನಲ್ಲಿ ಭೀಕರ ಅಪಘಾತ…!

ಬಂಟ್ವಾಳ : ಸಜಿಪದಲ್ಲಿ ಭೀಕರ ಅಪಘಾತ…!

ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭೇಟಿ….!

ಬಂಟ್ವಾಳ: ಬಡಗಬೆಳ್ಳೂರಿನಲ್ಲಿ ಕುಸಿದು ಬಿದ್ದ ಸೇತುವೆ; ಜನ ಸಂಚಾರಕ್ಕೆ ಭಾರೀ ಸಂಕಷ್ಟ…..!

ಬಂಟ್ವಾಳ: ಜ್ವರದಿಂದ ಬಳಲುತ್ತಿದ್ದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ನಿಧನ….!

ಬಂಟ್ವಾಳ: ಮಿನಿ ವಿಧಾನಸೌಧ ಮುಂಭಾಗದ ಕ್ಯಾಂಟೀನ್‌ನಲ್ಲಿ ಅನಿಲ ಸೋರಿಕೆ ಆತಂಕ….!

ಕಾಸರಗೋಡು: ಸಮುದ್ರದಲ್ಲಿ ಕೊಚ್ಚಿಹೋದ ಇಬ್ಬರು ಕಾಲೇಜು ವಿದ್ಯಾರ್ಥಿಗಳು..!

ಕಡಬ: ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಪಿಕಪ್ ಪಲ್ಟಿ..!

ಕಡಬ: ಗೋಳಿತ್ತಡಿ-ಏಣಿತ್ತಡ್ಕ-ಕುದುಲೂರು ಸಂಪರ್ಕಿತ ರಸ್ತೆ; ರಸ್ತೆಯುದ್ದಕ್ಕೂ ಹೊಂಡಮಯ..!

error: Content is protected !!