ಹಿಟ್ ಅಂಡ್ ರನ್. ಹಿಟ್ ಅಂಡ್ ಡ್ರ್ಯಾಗ್ ಅಂತಹ ಎಷ್ಟೋ ಪ್ರಕರಣಗಳನ್ನ ನಾವು ನೀವೆಲ್ಲಾ ನೋಡಿದ್ದೇವೆ. ಇದು ಕೂಡ ಅಂತದ್ದೇ ಒಂದು ಭಯಂಕರ ಘಟನೆ. ನೂರು ಮಿಟರ್ ಅಲ್ಲ, ಇನ್ನೂರು ಮೀಟರ್ ಅಲ್ಲ, ಬರೋಬ್ಬರಿ ಅರ್ಧ ಕಿಲೋಮೀಟರ್ ನಷ್ಟು ದೂರ ಕಾರಿನ ಬ್ಯಾನೆಟ್ ಮೇಲೆ ಮಹಿಳೆಯೊಬ್ಬರನ್ನ ಎಳೆದುಕೊಂಡು ಹೋಗಲಾಗಿದೆ.
ಮಹಿಳೆ ಕಾಪಾಡಿ ಎಂದು ಮಹಿಳೆ ಒಂದೆಡೆ ಕೂಗಿಕೊಳ್ತಿದ್ರು, ಇತ್ತ ನೂರಾರು ಜನ ಸಾರ್ವಜನಿಕರು ಅದನ್ನ ನೋಡಿ, ಕಾರು ನಿಲ್ಲಿಸಿ ನಿಲ್ಲಿಸಿ ಅಂತ ಹಿಂದೆ ಓಡಿದ್ರು. ಆದ್ರೆ ಏನೂ ಮಾಡಲಾಗದ ಪರಿಸ್ಥಿತಿ ಇದಾಗಿತ್ತು. ಹೀಗೆ ಕಾರಿನ ಬ್ಯಾನೆಟ್ ಮೇಲೆ ಮಹಿಳೆಯನ್ನ ಹೊತ್ತೊಯ್ದ ಘಟನೆ ನಡೆದಿರೋದು ರಾಜಸ್ಥಾನದಲ್ಲಿ.

ರಾಜಸ್ಥಾನದ ಹನುಮಾನಘಡ್ ನಲ್ಲಿ ಕಾರು ಚಾಲಕನೋರ್ವ ಅರ್ಧ ಕಿಲೋಮೀಟರ್ನಷ್ಟು ದೂರ ಮಹಿಳೆಯನ್ನ ಹೊತ್ತೋಯ್ದಿದ್ದಾನೆ. ಹತ್ತಾರು ಜನ ಕಾರು ನಿಲ್ಲಿಸಿ ಕಾರು ನಿಲ್ಲಿಸಿ ಅಂತ ಕೂಗಿಕೊಳ್ತಿದ್ರೂ ಕೂಡ ಆತ ಕಾರು ನಿಲ್ಲಿಸದೇ ಹಾಗೇ ಮುಂದೆ ಸಾಗಿದ್ದಾನೆ. ಸ್ವಲ್ಪ ಹೆಚ್ಚು ಕಮ್ಮಿ ಆಗಿದ್ರೂ ಕೂಡ ಮಹಿಳೆ ಕಾರಿನ ಚಕ್ರದಡಿ ಸಿಲುಕ್ತಿದ್ದಂತೂ ನಿಜ.



