ಮೊಬೈಲ್‌ಗಳನ್ನು ಚಾರ್ಜಿಂಗ್ ಹಾಕಿ, ಅದರ ಪಕ್ಕವೇ ಮಲಗಿ ನಿದ್ರಿಸುವ ಬಳಕೆದಾರರಿಗೆ. ಖ್ಯಾತ ಮೊಬೈಲ್ ತಯಾರಿಕಾ ಸಂಸ್ಥೆ ‘ಆ್ಯಪಲ್’ ಎಚ್ಚರಿಕೆ ನೀಡಿದೆ.
ಇಂಥ ಅಭ್ಯಾಸಗಳು ಪ್ರಾಣಕ್ಕೆ ಸಂಚಕಾರ ತರಬಹುದು ಎಂದು ಸಂಸ್ಥೆ ಹೇಳಿದ್ದು, ಸರಿಯಾಗಿ ಫೋನ್ ಚಾರ್ಜಿಂಗ್ ಹಾಕುವುದರ ಕುರಿತು ಸಂಸ್ಥೆ ಮಾಹಿತಿ ನೀಡಿದೆ.

ಹೆಚ್ಚಾಗಿ ಜನರು ಚಾರ್ಜಿಂಗ್ ಹಾಕಿರುವ ಸಂದರ್ಭದಲ್ಲಿ ವಿದ್ಯುತ್ ಪ್ರವಹಿಸುವ ತೀವ್ರತೆಗೆ ಬೆಂಕಿ ಹೊತ್ತಿಕೊಳ್ಳುವ, ಫೋನ್‌ಗಳು ಸ್ಫೋಟಗೊಳ್ಳುವ ಸಾಧ್ಯತೆ ಇರುತ್ತದೆ.
ಇದರಿಂದ ಪಕ್ಕದಲ್ಲಿ ಮಲಗಿದ್ದವರಿಗೂ ಗಾಯಗಳಾಗುವ ಸಾಧ್ಯತೆ ಇದ್ದು, ಈ ಹಿನ್ನೆಲೆಯಲ್ಲಿ ಅದಷ್ಟು ಗಾಳಿಗೆ ತೆರೆದುಕೊಳ್ಳುವ ಪ್ರದೇಶದಲ್ಲಿ ಮೊಬೈಲ್ ಚಾರ್ಜಿಂಗ್ ಹಾಕುವುದನ್ನು ಖಚಿತಪಡಿಸಿಕೊಳ್ಳಿ ಹಾಗೂ ದಿಂಬಿನ ಕೆಳಗೆ, ಹೊದಿಕೆಯ ಒಳಗೆ ಮೊಬೈಲ್‌ಗಳನ್ನು ಇಟ್ಟು ಮಲಗುವುದನ್ನೂ ನಿಗ್ರಹಿಸುವಂತೆ ಸಲಹೆ ನೀಡಿದೆ.




