ಜನ ಮನದ ನಾಡಿ ಮಿಡಿತ

Advertisement

‘ನೀಲಿ ಸಮುದ್ರದಾಚೆ’ಗೆ ತನ್ನ ಪ್ರೀತಿಯನ್ನು ಹೇಳಲು ಹೊರಟ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ರು..

‘777 ಚಾರ್ಲಿ’ ಸಿನಿಮಾ ಮೂಲಕ ಮನುಷ್ಯ ಮತ್ತು ಶ್ವಾನ ಭಾಂದವ್ಯವನ್ನು ಪರದೆ ಮೇಲೆ ತಂದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಇದೀಗ ತನ್ನ ಪ್ರೀತಿಯನ್ನು ನೀಲಿ ಸಮುದ್ರದಾಚೆಗೆ ಹೇಳಲು ಹೊರಟಿದ್ದಾರೆ.
‘ಪ್ರೇಕ್ಷಕರಿಗೆ ‘ಸಪ್ತ ಸಾಗರದಾಚೆಗೆ ಎಲ್ಲೋ’ ಸಿನಿಮಾ ಮೂಲಕ ಮನು ಮತ್ತು ಪ್ರಿಯಾಳ ಅದ್ಭುತವಾದ ಪ್ರೇಮವನ್ನು ತೋರ್ಪಡಿಸಲು ಮುಂದಾಗಿದ್ದಾರೆ. ಹಾಗಾಗಿ ಸಿನಿಮಾದ ಟ್ರೈಲರ್ ಅನ್ನು ಚಿತ್ರತಂಡ ನಿನ್ನೆ ರಿಲೀಸ್ ಮಾಡಿದೆ.

ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಕವಲುದಾರಿ ಸಿನಿಮಾವನ್ನ ಪ್ರೇಕ್ಷಕರ ಮನದಾಳಕ್ಕೆ ತಂದುಬಿಟ್ಟಿದ್ದ ಹೇಮಂತ್ ರಾವ್ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ‘ಕತ್ತೆ ನಂಗೆ ಮೊನ್ನೆ ಎಷ್ಟು ಒಳ್ಳೆ ಕನಸು ಬಿತ್ತು ಗೊತ್ತಾ’ ಎಂದು ಹೇಳುವ ಪ್ರಿಯಾಳ ಮಾತಿನಿಂದ ಆರಂಭವಾಗುವ ಟ್ರೈಲರ್, ಮನುವಿನ ಪ್ರೀತಿಯ ಬುತ್ತಿಯನ್ನು ಪರದೆಯ ಮೇಲೆ ಬಿತ್ತರಿಸುವಲ್ಲಿ ಹೇಮಂತ್ ರಾವ್ ಕೆಲಸ ಮಾಡಿದ್ದಾರೆ. ಸದ್ಯ ಮಾಡಿರುವ 2 ಸಿನಿಮಾಗಳಿಂತ ಭಿನ್ನ ಸಿನಿಮಾವನ್ನು ಪ್ರೇಕ್ಷಕರ ಮುಂದಿರಿಸುವ ಕನಸನ್ನ ಹೇಮಂತ್ ಕಟ್ಟಿಕೊಂಡಿದ್ದಾರೆ. ಅಂದಹಾಗೆಯೇ ಈ ಸಿನಿಮಾ ಸೆಪ್ಟೆಂಬರ್ 1 ರಂದು ರಿಲೀಸ್ ಆಗಲಿದೆ.

ಚಿತ್ರತಂಡ 2 ಅವತರಣಿಕೆಯಲ್ಲಿ ಸಿನಿಮಾ ರಿಲೀಸ್ ಮಾಡಲಿದೆ. ಹಾಗಾಗಿ ಮೊದಲ ಪಾರ್ಟ್ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗಲಿದೆ. ಈ ಬಾರಿ ರಕ್ಷಿತ್‌ಗೆ ನಾಯಕಿಯಾಗಿ ರುಕ್ಮಿಣಿ ವಸಂತ್ ಅವರು ಪ್ರಿಯ ಪಾತ್ರದಲ್ಲಿ ನಟಿಸಿದ್ದಾರೆ. ಮಾತ್ರವಲ್ಲದೆ ಟೋಬಿ ಚಿತ್ರದ ನಾಯಕಿ ಚೈತ್ರಾ ಆಚಾರ್ ಕೂಡ ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ.ಅದ್ಬೈತ ಗುರುಮೂರ್ತಿ ಕ್ಯಾಮೆರಾ ಕೈಚಳದಲ್ಲಿ ‘ಸಪ್ತ ಸಾದರದಾಚೆ ಎಲ್ಲೋ’ ಸಿನಿಮಾ ಮೂಡಿ ಬಂದಿದೆ. ಚರಣ್ ರಾಜ್ ಸಂಗೀತ ಸಂಯೋಜನೆಯೊAದಿಗೆ ಸಮುದ್ರದ ಅಲೆಗಳು ಕೇಳಲಾರಂಭಿಸುತ್ತದೆ.

Leave a Reply

Your email address will not be published. Required fields are marked *

ಬಂಟ್ವಾಳ: ಕಾರಿಂಜ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ಆಟಿ ಅಮಾವಾಸ್ಯೆ ಸಂಭ್ರಮ

ಮೂಡಬಿದ್ರೆ: ಮಿಜಾರ್‌ನಲ್ಲಿ ಸಿಲಿಂಡರ್ ಸ್ಫೋಟ; ಮೂವರಿಗೆ ಸುಟ್ಟ ಗಾಯ…!

ಮಂಗಳೂರು: ತಂಗಿಯ ಸಾವಿನ ಬೆನ್ನಲ್ಲೇ ಸಹೋದರನೂ ಶವವಾಗಿ ಪತ್ತೆ; ಮಂಗಳೂರಿನ ಲಾಡ್ಜ್‌ನಲ್ಲಿ ದುರಂತ

ಕೊಲಂಬಿಯಾ: ಕೊಲಂಬಿಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ; 111 ಮಂದಿ ಸಾವು

ವಿಟ್ಲ: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಶಾಲಾ ಬಸ್; ತಪ್ಪಿದ ಭಾರೀ ಅನಾಹುತ

ಮಂಗಳೂರು: ತಲಪಾಡಿಯಲ್ಲಿ ಪಾದಚಾರಿಗೆ ಕಾರು ಡಿಕ್ಕಿ; ಗಂಭೀರ ಗಾಯ

ಪರ್ಕಳ: ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬುಲೆಟ್; ಯುವಕ ಸಾವು

ಬಂಟ್ವಾಳ: ಬಂಟ್ವಾಳ ಪುರಸಭೆಯ ಹೊಸ ಜೆಸಿಬಿಗೆ ತ್ಯಾಜ್ಯ ವಿಲೇವಾರಿ ಕಾರ್ಯಕ್ಕೆ ಚಾಲನೆ

ವಾಮದಪದವು: ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಪಂಜಿನ ಮೆರವಣಿಗೆ…!

error: Content is protected !!