ಉಪ್ಪಿನಂಗಡಿ; ನೇತ್ರಾವತಿ ಮತ್ತು ಕುಮಾರಧಾರಾ ನದಿಗಳು 2019ರ ಅಗಸ್ಟ್ 16, 17ರಂದು ಉಕ್ಕಿ ಹರಿದು ಸಂಗಮಿಸಿದ್ದವು. ಉಪ್ಪಿನಂಗಡಿಯ ದೇವಸ್ಥಾನ ಜಲಾವೃತವಾಗಿತ್ತು. ಆದರೆ ಈ ವರ್ಷ ನೇತ್ರಾವತಿ ಸೊರಗಿದೆ.

ಪಶ್ಚಿಮಘಟ್ಟ ಪ್ರದೇಶದಲ್ಲಿ ಮಳೆಯ ಪ್ರಮಾಣ ಗಣನೀಯ ಕಡಿಮೆಯಾಗಿರುವುದು ನೇತ್ರಾವತಿಯಲ್ಲಿ ನೀರಿನ ಕುಸಿತಕ್ಕೆ ಕಾರಣವಾಗಿದೆ.

ಕೆಲವು ದಿನಗಳಿಂದ ಸುಡುಬಿಸಿಲ ವಾತಾವರಣ ಇದ್ದು, ತೋಡುಗಳೂ ಬರಿದಾಗುತ್ತಿವೆ. ಮಳೆ ನೀರನ್ನೇ ನಂಬಿ ಗದ್ದೆ ಬೇಸಾಯ ಮಾಡಿರುವ ರೈತರು ಒಣಗುತ್ತಿರುವ ಗದ್ದೆಯನ್ನು ನೋಡುತ್ತ ತಲೆಮೇಲೆ ಕೈ ಇಟ್ಟು ಕಂಗಲಾಗಿ ಕುಳಿತ್ತಿದ್ದಾರೆ.



