ಜನ ಮನದ ನಾಡಿ ಮಿಡಿತ

Advertisement

ಶಾಂಭ ಶಿವರಾವ್‌ರವರ ‘ಇಶ್ವ ಮೋಟರ್ಸ್’ ಕಡಲನಗರಿಗೆ ಪಾದಾರ್ಪಣೆ; ಬಿಜೈ ಕಾಪಿಕಾಡ್‌ನಲ್ಲಿ ‘ಶೋರೂಂ’ ಲೋಕಾರ್ಪಣೆ

ಮಂಗಳೂರು : ಸನ್ ಪ್ರೀಮಿಯಂ ರಿಫೈಂಡ್ ಸನ್ ಫ್ಲವರ್ ಆಯಿಲ್.. ಇದು ಭಾರತದ ಅಡುಗೆ ಎಣ್ಣೆಗಳ ಪೈಕಿ ಅತೀ ಮುಂಚೂಣಿಯಲ್ಲಿರುವ ಹಾಗೂ ಮಾರುಕಟ್ಟೆಯಲ್ಲಿ ಅತೀ ಬೇಡಿಕೆ ಇರುವ ಅಡುಗೆ ಎಣ್ಣೆ.. ಹೆಂಗೆಳೆಯರ ಆಪ್ತ ಮಿತ್ರ…


ಅನಘ ರಿಫೈನರೀಸ್ ಇದರ ಆಡಳಿತ ನಿರ್ದೇಶಕ ಶಾಂಭಶಿವ ರಾವ್ ಅವರ ಮಹಾ ದೊಡ್ಡ ಕೊಡುಗೆ. ಈಗಾಗಲೇ ಹಲವಾರು ಉದ್ಯಮಗಳನ್ನು ಮಂಗಗಳೂರಿಗೆ ಪರಿಚಯಿಸಿದ ಕೀರ್ತಿ ಇವರದು.. ಮಂಗಳೂರಿನ ಅಭಿವೃದ್ಧಿವಲ್ಲಿ ಶಾಂಭ ಶಿವ ರಾವ್ ಅವರ ಪಾತ್ರ ಮಹತ್ತರವಾದದ್ದು. ಹಲವಾರು ಜನರಿಗೆ ಉದ್ಯೋಗವನ್ನು ಕಲ್ಪಿಸಿ, ಮಾನವೀಯತೆ ಮೆರೆದವರು ಶಾಂಭ ಶಿವ ರಾವ್ ಅವರದ್ದು.


ಇದೀಗ ಶಾಂಭ ಶಿವರಾವ್ ಅವರು, ಮತ್ತೊಂದು ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಹೌದು, ಪ್ರಕೃತಿಯ ಹಿತ ದೃಷ್ಠಿಯಿಂದ, ಮಾಲಿನ್ಯರಹಿತವಾದ ಎಲೆಕ್ಟ್ರಿಕ್ ಮೊಟಾರ್‍ ಗ್ರಾಹಕರಿಗೆ ಪರಿಚಯಿಸಲು ‘ಇಶ್ವ ಮೋಟರ್ಸ್’ ಸಜ್ಜಾಗಿ ನಿಂತಿದೆ. ಅಷ್ಟಕ್ಕೂ ಈ ಶೋ ರೂಂ ಎಲ್ಲಿದೆ ಅಂತೀರಾ ಹೇಳ್ತೀವಿ ಕೇಳಿ..


ಮಂಗಳೂರಿನ ಬಿಜೈ ಕಾಪಿಕಾಡ್‍ನ ಒಶಿಯನ್ ಪರ್ಲ್ ಮುಂಭಾಗದಲ್ಲಿ ಈಶ್ವ ಮೊಟರ್ಸ್ ಶುಭಾರಂಭಗೊಂಡಿದೆ. ಈ ಶೋ ರೂಂನ್ನು ಎನ್.ಎಂ.ಪಿ.ಎ ಚಾಯರ್‌ಮ್ಯಾನ್ ಡಾ. ವೆಂಕಟರಮಣ ಅಕ್ಕರಾಜು ರಿಬ್ಬನ್ ಕಟ್ ಮಾಡುವ ಮೂಲಕ ಲೋಕಾರ್ಪಣೆ ಮಾಡಿದರು. ಬಳಿಕ ಶಾಂಭ ಶಿವ ರಾವ್ ಅವರ ಧರ್ಮಪತ್ನಿ ಸತ್ಯ ವಾಣಿ ಅವರು ದೀಪ ಬೆಳಗುವ ಮೂಲಕ ಸರಳ ಸಮಾರಂಭಕ್ಕೆ ಚಾಲನೆ ನೀಡಿದರು..


ಈ ಸಂದರ್ಭ ಶಾಸಕ ವೇದವ್ಯಾಸ ಕಾಮತ್, ಎನ್.ಎಂ.ಪಿ.ಎ ಇದರ ಚೇರ್ ಮ್ಯಾನ್ ಡಾ. ವೆಂಕಟರಮಣ ಅಕ್ಕರಾಜು, ದಕ್ಷಿಣ ಭಾರತದ ಖ್ಯಾತ ಚಿತ್ರನಟ ತನಿಕೆಲಾ ಭರಣಿ, ಡೀಲರ್ ಡೆವಲಪ್ಮೆಂಟ್ ಇದರ ಮುಖ್ಯಸ್ಥ ಅನಿಂದ್ಯಾ ಮಿತ್ರ ಇವರುಗಳು ಸಮಾರಂಭಕ್ಕೆ ಆಗಮಿಸಿ ಶುಭ ಹಾರೈಸಿದರು.


ಬಳಿಕ ಅನಘ ರಿಪೈನರೀಸ್ ಇದರ ಆಡಳಿತ ನಿರ್ದೇಶಕ ಶಾಂಭ ಶಿವರಾವ್ ಮಾತಾನಾಡುತ್ತಾ..ವೇದವ್ಯಾಸ್ ಕಾಮತ್ ರವರು ನನ್ನ ಎಲ್ಲಾ ಯೋಜನೆಗಳಿಗೆ ಬೆನ್ನೆಲುಬಾಗಿ ನಿಲ್ಲುತ್ತಾರೆ ಎಂದ ಅವರು ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು.

ಈ ಸಂದರ್ಭ ಝೋನಲ್ ಸೇಲ್ಸ್ ಮ್ಯಾನೇಜರ್ ಪ್ರಾಣೇಶ್ ಎಸ್, ರೀಜನಲ್ ಸೇಲ್ಸ್ ಮ್ಯಾನೇಜರ್ ಇಂದ್ರಾನಿಲ್ ದತ್ತ, ಶಾಂಭಶಿವ ರಾವ್ ಅವರ ಕುಟುಂಬಸ್ಥರು ಜೊತೆಗಿದ್ದರು. ಇದೇ ವೇಳೆ ಶೋ ರೂಂನಲ್ಲಿ ಸಾಂಕೇತಿಕವಾಗಿ ಮೊದಲ ಗ್ರಾಹಕರಿಗೆ ವಾಹನಗಳನ್ನು ವಿತರಿಸಿಲಾಯಿತು.

Leave a Reply

Your email address will not be published. Required fields are marked *

ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭೇಟಿ….!

ಬಂಟ್ವಾಳ: ಬಡಗಬೆಳ್ಳೂರಿನಲ್ಲಿ ಕುಸಿದು ಬಿದ್ದ ಸೇತುವೆ; ಜನ ಸಂಚಾರಕ್ಕೆ ಭಾರೀ ಸಂಕಷ್ಟ…..!

ಬಂಟ್ವಾಳ: ಜ್ವರದಿಂದ ಬಳಲುತ್ತಿದ್ದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ನಿಧನ….!

ಬಂಟ್ವಾಳ: ಮಿನಿ ವಿಧಾನಸೌಧ ಮುಂಭಾಗದ ಕ್ಯಾಂಟೀನ್‌ನಲ್ಲಿ ಅನಿಲ ಸೋರಿಕೆ ಆತಂಕ….!

ಕಾಸರಗೋಡು: ಸಮುದ್ರದಲ್ಲಿ ಕೊಚ್ಚಿಹೋದ ಇಬ್ಬರು ಕಾಲೇಜು ವಿದ್ಯಾರ್ಥಿಗಳು..!

ಕಡಬ: ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಪಿಕಪ್ ಪಲ್ಟಿ..!

ಕಡಬ: ಗೋಳಿತ್ತಡಿ-ಏಣಿತ್ತಡ್ಕ-ಕುದುಲೂರು ಸಂಪರ್ಕಿತ ರಸ್ತೆ; ರಸ್ತೆಯುದ್ದಕ್ಕೂ ಹೊಂಡಮಯ..!

ಬಂಟ್ವಾಳ: ಪಾಣೆಮಂಗಳೂರು ಕಲ್ಲುರ್ಟಿ ದೈವಸ್ಥಾನದ ಮುಂಭಾಗದ ಸರ್ವೀಸ್ ರಸ್ತೆಯಲ್ಲಿ ಹೊಂಡಗುಂಡಿ…!

ಉಡುಪಿ: ಮಾದಕ ದ್ರವ್ಯ ಸಾಗಾಟ- ಮಾರಾಟ ಪ್ರಕರಣ: ಪಿಐಟಿ- ಎನ್‌ಡಿಪಿಎಸ್ ಕಾಯ್ದೆಯಡಿ ಆರೋಪಿಯ ಬಂಧನ…!

error: Content is protected !!