ಜನ ಮನದ ನಾಡಿ ಮಿಡಿತ

Advertisement

ಕುಜ ದೋಷದಿಂದ ಲೂನಾ 25 ವಿಫಲ; ಚಂದ್ರಯಾನ-3ರ ಬಗ್ಗೆ ಭವಿಷ್ಯ ನುಡಿದ ಉಡುಪಿ ಮೂಲದ ಜ್ಯೋತಿಷಿ!

ಭಾರತದ ಕನಸಿನ ನೌಕೆ ಚಂದ್ರಯಾನ-3 ಯಶಸ್ವಿಯಾಗಲು ಒಂದೇ ದಿನ ಬಾಕಿ ಇದೆ. ನಾಳೆ ಸಂಜೆ ವಿಕ್ರಂ ನೌಕೆ ಚಂದ್ರನ ಮೇಲೆ ಲ್ಯಾಂಡ್ ಆಗುವ ನಿರೀಕ್ಷೆ ಇದೆ. ಹೀಗಿರುವಾಗ ಚಂದ್ರಯಾನ-3 ಯಶಸ್ವಿಯಾಗಲೆಂದು ಹಲವರು ಹರಕೆ ಕಟ್ಟಿಕೊಳ್ಳುತ್ತಿದ್ದಾರೆ. ದೇವರ ಮೊರೆ ಹೋಗಿ ಪೂಜೆ ಸಲ್ಲಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ಉಡುಪಿ ಮೂಲದ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ವಿಕ್ರಂ ಲ್ಯಾಂಡ್​ ಆಗುವ ಬಗ್ಗೆ ಭವಿಷ್ಯ ನುಡಿದಿದ್ದಾರೆ.

ಭಾರತ ಹಾಗೂ ರಷ್ಯಾ ಎರಡೂ ದೇಶಗಳು ವಾಯುತತ್ವ ರಾಶಿ ಪ್ರಕಾರ ಉಪಗ್ರಹ ಉಡಾಯಿಸಿದೆ. ರಷ್ಯಾ ಮಿಥುನ ಹಾಗೂ ಭಾರತ ತುಲಾ ಲಗ್ನ ದ ಪ್ರಕಾರ ಉಪಗ್ರಹ ಉಡಾವಣೆಯಾಗಿದೆ. ಕುಜದ ಪರಿಣಾಮ ಯಾಂತ್ರೀಕೃತ ದೋಷದಿಂದ ರಷ್ಯಾ ಉಪಗ್ರಹ ವಿಫಲವಾಗಿದೆ ಎಂದು ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಭವಿಷ್ಯ ನುಡಿದಿದ್ದಾರೆ.

ನಂತರ ಮಾತು ಮುಂದುವರಿಸಿದ ಅವರು, ಜ್ಯೋತಿಷ್ಯ ಹಾಗೂ ವಿಜ್ಞಾನ ಲೆಕ್ಕಾಚಾರ ಎರಡೂ ಒಂದೇ. ಇದಕ್ಕೆ ನನ್ನ ಬಳಿಯೂ ಸರಿಯಾದ ಲೆಕ್ಕಾಚಾರ ಇದೆ. ತುಲಾ‌ ಲಘ್ನ ದಲ್ಲಿ ಕಳುಹಿಸಿದ ನೌಕೆ ಕುಂಭ ಲಗ್ನದಲ್ಲಿ ಲ್ಯಾಂಡ್ ಆಗಬೇಕು. ಆಗಸ್ಟ್​ 23ರ ಸಂಜೆ 6:30ರ ನಂತರ ಚಂದ್ರನಲ್ಲಿ ಇಳಿದರೆ ನನ್ನ ಜ್ಯೋತಿಷ್ಯ ಹಾಗೂ ವಿಜ್ಞಾನ ಅಧ್ಯಯನ ಸಾರ್ಥಕ ಎಂದು ಹೇಳಿದ್ದಾರೆ.

ರಷ್ಯಾ ದ ಉಪಗ್ರಹ ಮಿಥುನ ಲಗ್ನ ದಲ್ಲಿ ಹೊರಟಿರುವುದೇ ತಾಂತ್ರಿಕ ವೈಫಲ್ಯಕ್ಕೆ ಕಾರಣವಾಗಿದೆ. ಭಾರತದ ಚಂದ್ರಯಾನ 3 ಕ್ಕೆ ದೈವಬಲ ಪೂರ್ಣವಾಗಿದೆ. ಭಾರತೀಯ ವಿಜ್ಞಾನಿಗಳು ತಿರುಪತಿ ವೆಂಕಟರಮಣ ದೇವರ ಆಶೀರ್ವಾದ ಪಡೆದಿದ್ದಾರೆ. ದೇವರ ಆಶೀರ್ವಾದ ಪಡೆದ ಹಿನ್ನಲೆ ಚಂದ್ರಯಾನ 3 ಎಂದೂ ನಿಧಾನಗತಿ ಪಡೆಯಲಿಲ್ಲ. ಚಂದ್ರಯಾನ- 3 ಆಗಸ್ಟ್​ 23 ರ ಸಂಜೆ ಕುಂಭ ಲಗ್ನ 6:30 ರ ನಂತರ ಚಂದ್ರನ ಮೇಲೆ ಇಳಿಯಬೇಕು ಎಂದು ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಹೇಳಿದ್ದಾರೆ.

Leave a Reply

Your email address will not be published. Required fields are marked *

ಮಂಗಳೂರು: ಆಟವಾಡುತ್ತಾ 15 ಅಡಿ ಆಳದ ನೀರಿದ್ದ ಬಾವಿಗೆ ಬಿದ್ದ ಹೆಣ್ಣು ಮಗು….!

ಮಂಗಳೂರು: ಕಲ್ಲಡ್ಕ ಪ್ರಭಾಕರ್ ಭಟ್ ಅವರ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ..!

ಬಂಟ್ವಾಳ: ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ “ಶ್ರೀರಾಮನ ಚರಿತ್ರೆಯ” ಯಕ್ಷಗಾನ….!

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

ಬಂಟ್ವಾಳ: ಜೋರಾದ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿ..!

ಉಡುಪಿ: ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಮೋಸ ಮಾಡಿದ ಮಹಿಳೆ..!

ದುಬೈ: ಅಕ್ಟೋಬರ್ 25 ರಂದು ದುಬೈನಲ್ಲಿ ದುಬೈ ಗಡಿನಾಡ ಉತ್ಸವ

ಮಂಗಳೂರು: ಅಶೋಕ ಜನಮನ ಕಾರ್ಯಕ್ರಮ ಆಯೋಜನೆ; ನೂಕು ನುಗ್ಗಲು ಉಂಟಾಗಿ ಅಸ್ವಸ್ಥರಾದ 11ಕ್ಕೂ ಹೆಚ್ಚು ಜನ…!

ಬಂಟ್ವಾಳ: ದ.ಕ.ಜಿಲ್ಲಾ ತುಳು ನಾಟಕ ಕಲಾವಿದರ ಒಕ್ಕೂಟ ವಾರ್ಷಿಕ ಮಹಾಸಭೆ; ನೂತನ ಅಧ್ಯಕ್ಷರಾಗಿ ಕಿಶೋರ್ ಡಿ.ಶೆಟ್ಟಿ ಪುನರಾಯ್ಕೆ….!

error: Content is protected !!