ಬಂಟ್ವಾಳ: ಸ್ವಾತಂತ್ರ್ಯ ವೀರ ವಿನಾಯಕ ದಾಮೋದರ ಸಾವರ್ಕರ್ ಅವಮಾನವನ್ನು ಖಂಡಿಸಿ ವಿಶ್ವಹಿಂದೂ ಪರಿಷತ್ ಬಜರಂಗದಳ ಮಂಚಿ ಘಟಕದ ವತಿಯಿಂದ ಸೆ.3 ರಂದು ಮಂಚಿ ಗೋಪಾಲಕೃಷ್ಣ ದೇವಾಸ್ಥಾನದ ವಠಾರದಲ್ಲಿ ಹಿಂದೂ ಜನಜಾಗೃತಿ ಸಮಾವೇಶ ನಡೆಯಲಿದೆ ಎಂದು ವಿಶ್ವಹಿಂದೂ ಪರಿಷತ್ ಬಜರಂಗದಳ ಬಂಟ್ವಾಳ ಪ್ರಖಂಡ ಅಧ್ಯಕ್ಷ ಪ್ರಸಾದ್ ಕುಮಾರ್ ರೈ ಬಿಸಿರೋಡಿನ ಪ್ರೆಸ್ ಕ್ಲಬ್ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಮಂಚಿ ಸರಕಾರಿ ಶಾಲೆಯೊಂದರಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ವಿದ್ಯಾರ್ಥಿಗಳು ರಾಷ್ಟ್ರಭಕ್ತ ಸಾವರ್ಕರ್ ಘೋಷಣೆ ಕೂಗಿದ ವಿಚಾರಕ್ಕೆ ಸಂಬಂಧಿಸಿದಂತೆ ಶಾಲೆಗೆ ಸಂಬಂಧ ಪಡದ ವ್ಯಕ್ತಿಯೋರ್ವ ಅಲ್ಲಿನ ಮುಖ್ಯ ಶಿಕ್ಷಕಿಗೆ ಬೆದರಿಕೆ ಹಾಕಿದ್ದಲ್ಲದೆ ಕ್ಷಮೆ ಕೇಳುವಂತೆ ಮಾಡಿ ಕ್ಷಮೆ ಕೇಳುವ ವಿಡಿಯೋ ವನ್ನು ಬಳಿಕ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ ಘಟನೆ ನಡೆದಿದ್ದು ಇದು ಖಂಡನೀವಾಗಿದ್ದು, ಪೋಲೀಸರು ಆತನ ಮೇಲೆ ಕಾನೂನು ಕ್ರಮಕೈಗೊಳ್ಳಬೇಕು ಎಂದು ಒತ್ತಾಯ ಮಾಡುತ್ತೇವೆ ಎಂದರು.
ದೇಶಕ್ಕೋಸ್ಕರ ಇಡೀ ಕುಟುಂಬವೇ ಮುಡಿಪಾಗಿಟ್ಟ ಸಾವರ್ಕರ್ ಅವರ ನ್ನು ತುಚ್ಚವಾಗಿ ಮಾತನಾಡಿದರೆ ಅದನ್ನು ಸಹಿಸಲು ಸಾಧ್ಯವೇ ಇಲ್ಲ ಎಂದು ಎಚ್ಚರಿಕೆ ನೀಡಿದರು.
ಸಾವರ್ಕರ್ ಅವರಿಗೆ ಮಾಡಿದ ಅವಮಾನವನ್ನು ಖಂಡಿಸಿ ಮನೆಮನೆಗೆ ಹೋಗಿ ವೀರ ಸಾವರ್ಕರ್ ಭಾವಚಿತ್ರವನ್ನು ಪ್ರತಿ ಮನೆಗೆ ಅಂಟಿಸುವ ಜೊತೆಗೆ ಚರಿತ್ರೆ ಯ ಪುಸ್ತಕವನ್ನು ನೀಡುವ ಕಾರ್ಯ ಕ್ರಮ ಆಯೋಜನೆ ಮಾಡಿದ್ದೇವೆ.ಇದರ ಜೊತೆ ಬೈಕ್ ಚಲೋ ಕಾರ್ಯಕ್ರಮ ಕೂಡ ಹಮ್ಮಿಕೊಂಡಿದ್ದು, ಬಳಿಕ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಸೈನಿಕ ರಮೇಶ್ ರಾವ್ ನೂಜಿಪ್ಪಾಡಿ ವಹಿಸಲಿದ್ದಾರೆ.
ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ್ ಭಟ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.
ವಿಶ್ವಹಿಂದೂ ಪರಿಷತ್ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪುವೆಲ್, ವಿಹಿಂಪ ಜಿಲ್ಲಾಧ್ಯಕ್ಷ ಡಾ.ಕೃಷ್ಣ ಪ್ರಸನ್ನ ಪುತ್ತೂರು ಮುಖ್ಯ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಲಿದ್ದಾರೆ ಎಂದು ತಿಳಿಸಿದರು.
ವಿಶ್ವಹಿಂದೂ ಪರಿಷದ್ ಭಜರಂಗದಳ ಜಿಲ್ಲಾ ಸಂಯೋಜಕ ಭರತ್ ಕುಮ್ಡೆಲು ಮಾತನಾಡಿ, 2024 ರ ವೇಳೆಗೆ ಭಾರತವನ್ನು ಮುಸ್ಲಿಂ ರಾಷ್ಟ್ರಮಾಡಬೇಕು ಎಂಬುದೇ ಇವರ ಉದ್ದೇಶ ವಾಗಿದ್ದು ಅದರ ಮುಂದುವರಿದ ಭಾಗವಾಗಿ ಮಂಚಿಯಲ್ಲಿ ಸಾವರ್ಕರ್ ಅವಮಾನ ಮಾಡಲಾಗಿದೆ ಎಂದು ಅಕ್ರೋಶ ವ್ಯಕ್ತಪಡಿಸಿದ ಅವರು ಈಗಾಗಲೇ ಸರಕಾರ ದುರುದ್ದೇಶಪೂರಿತವಾಗಿ ಶಾಲಾ ಪಾಠ ಪುಸ್ತಕ ದಲ್ಲಿರುವ ಸ್ವಾತಂತ್ರ್ಯ ಹೋರಾಟಗಾರ ವೀರಸಾವರ್ಕರ್ ಅವರ ಪಾಠವನ್ನು ತೆಗೆಯಲು ಹೊರಟಿದ್ದು,ಇದನ್ನು ನಾವು ಬಿಡುವುದಿಲ್ಲ,ಮಂಚಿಯಲ್ಲಿ ನಡೆಯುವ ಸಮಾವೇಶ ಇದಕ್ಕೆ ನಾಂದಿಯಾಗಲಿದೆ ಎಂದು ಹೋರಾಟದ ಮುನ್ಸೂಚನೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಕಲ್ಲಡ್ಕ ಪ್ರಖಂಡ ಅಧ್ಯಕ್ಷ ಸಚಿನ್ ಮೆಲ್ಕಾರ್, ಜಿಲ್ಲಾ ಉಪಾಧ್ಯಕ್ಷ ಕೃಷ್ಣಪ್ಪ ಕಲ್ಲಡ್ಕ, ವಿಟ್ಲ ಪ್ರಖಂಡ ಸಂಯೋಜಕ ಚೇತನ್ ಕಡಂಬು, ಪ್ರಖಂಡದ ಸಹಸಂಚಾಲಕ ವಿಜಿತ್ ಉಪಸ್ಥಿತರಿದ್ದರು.



