ಮಂಗಳೂರು; ಬಂದರ್‌ನ ಅಜೀಜುದ್ದೀನ್ ರಸ್ತೆಯಲ್ಲಿ ಮೊಹಮ್ಮದ್ ಮುದಸ್ಸಿರ್ ಅವರಿಗೆ ಸೇರಿದ ಟಿ.ವಿ.ಎಸ್. ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ಬಿಡಿಭಾಗಗಳ ದಾಸ್ತಾನು ಹಾಗೂ ವ್ಯಾಪಾರ ಮಳಿಗೆಯಿಂದ 39,370 ರೂ. ನಗದು, 4 ಮೊಬೈಲ್ ಫೋನ್ ಮತ್ತು ಚಾರ್ಜರ್ ಹಾಗೂ ಇಂಟರ್‌ನೆಟ್ ಮೋಡೆಮ್ ಕಳವಾಗಿದೆ.

ಆ. 26ರಂದು ಸಂಜೆ 6.30ಕ್ಕೆ ಮಳಿಗೆಯನ್ನು ಮುಚ್ಚಿ ಹೋಗಿದ್ದು, 27ರಂದು ರವಿವಾರವಾದ್ದರಿಂದ ಮಳಿಗೆ ತೆರೆದಿರಲಿಲ್ಲ. 28ರಂದು 9ಗಂಟೆಗೆ ಮಳಿಗೆ ತೆರೆದು ನಗದು ಕೌಂಟರಿಗೆ ಹೋದಾಗ ಕೌಂಟರಿನ ಹಣ ಇಡುವ ಡ್ರಾವರ್ ಬೀಗ ತೆರೆದ ಸ್ಥಿತಿಯಲ್ಲಿತ್ತು. ಮ್ಯಾನೇಜರ್‌ಗೆ ಕರೆ ಮಾಡಿ ವಿಚಾರ ತಿಳಿಸಿದ್ದು, ಅವರು ಸ್ಥಳಕ್ಕೆ ಬಂದ ಅನಂತರ ಪರಿಶೀಲಿಸಿದಾಗ ನಗದು ಹಾಗೂ ಮೊಬೈಲ್ ಫೋನ್, ಚಾರ್ಜರ್ ಇಂಟರ್‌ನೆಟ್ ಮೋಡೆಮ್ ಕಳವಾಗಿದ್ದು ತಿಳಿದುಬಂದಿದೆ.ಅನ0ತರ ಸಂಪೂರ್ಣ ಮಳಿಗೆಯನ್ನು ಪರಿಶೀಲಿಸಿದಾಗ ಮಳಿಗೆಯ ಎಡಭಾಗದಲ್ಲಿದ್ದ ಬಾಗಿಲಿನ ಪಕ್ಕದ್ದಲ್ಲಿ ತಗಡು ಶೀಟನ್ನು ಕತ್ತರಿಸಿ ತೆಗೆದಿರುವುದು ಕಂಡುಬAದಿದೆ. ಅದರ ಮೂಲಕ ಯಾರೋ ಕಳ್ಳರು ಒಳ ಪ್ರವೇಶಿಸಿ ಕಳವು ಮಾಡಿದ್ದಾರೆ.
ಈ ಕುರಿತಂತೆ ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



