ತಮಿಳುನಾಡಿಗೆ ನೀರು ಬಿಟ್ಟಿರುವುದರಿಂದ ರಾಜ್ಯದ ರೈತರಿಗೆ ತೊಂದರೆಯಾಗಲಿದೆ. ರಾಜ್ಯ ಸರಕಾರ ನಮ್ಮ ನಾಡಿನ ರೈತರಿಗೆ ನ್ಯಾಯ ಕೊಡುತ್ತಿಲ್ಲ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿದ ಅವರು, ನೀರಿನ ಸಮಸ್ಯೆಯಿಂದಾಗಿ ರಾಜ್ಯದಲ್ಲಿ ಸದ್ಯ ಬರ ಪರಿಸ್ಥಿತಿ ಉಂಟಾಗಿದೆ. ರೈತರ ಪಂಪ್ ಸೆಟ್ ಗಳಿಗೂ ಸಮರ್ಪಕ ವಿದ್ಯುತ್ ನೀಡುತ್ತಿಲ್ಲ. ರಾಜ್ಯ ಸರಕಾರದ ಈ ನಡೆಯ ವಿರುದ್ಧ ಬಿಜೆಪಿ ಪ್ರತಿಭಟನೆ ನಡೆಸಲಿದೆ ಎಂದು ಹೇಳಿದರು. ಮಾನದಂಡವಿಲ್ಲದ ಗ್ಯಾರೆಂಟಿಯನ್ನು ಕಾಂಗ್ರೆಸ್ ಚುಣಾವಣೆ ಪೂರ್ವದಲ್ಲಿ ಘೋಷಿಸಿತ್ತು. ಇದೀಗ ಮಾನದಂಡವನ್ನು ಹಾಕಲಾಗಿದೆ. ಗೃಹಜ್ಯೋತಿ ಹೆಸರಿನಲ್ಲಿ ರಾಜ್ಯವನ್ನು ಕತ್ತಲಿನಲ್ಲಿ ಇಡಲಾಗಿದೆ ಎಂದು ಟೀಕಿಸಿದರು.



