ಮೊನ್ನೆ ಮೊನ್ನೆಯಷ್ಟೇ ಭಾರತದ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಚಂದ್ರಯಾನ-3 ಯೋಜನೆಯಲ್ಲಿ ಯಶಸ್ಸು ಕಂಡಿದೆ. ಇದರ ಬೆನ್ನಲ್ಲೇ ಇಸ್ರೋ ಮತ್ತೊಂದು ವಿಶೇಷ ಸಾಧನೆ ಮಾಡುತ್ತಿದ್ದು ಈ ಬಾರಿ ನೇರ ಸೂರ್ಯನನ್ನೇ ಟಾರ್ಗೆಟ್ ಮಾಡಿದೆ.

ಈಗಾಗಲೇ ಈ ಯೋಜನೆಯು ಕೊನೆ ಹಂತ ತಲುಪಿದ್ದು ಸೂರ್ಯನನ್ನ ಅಧ್ಯಯನ ಮಾಡುವ ಆದಿತ್ಯ-L1 ಮಿಷನ್ನ ಪೂರ್ವಾಭ್ಯಾಸ (ರಿಹರ್ಸಲ್)ವನ್ನು ಸದ್ಯ ಇಸ್ರೋ ಮುಗಿಸಿದೆ ಎಂದು ತಿಳಿದು ಬಂದಿದೆ.

ಆದಿತ್ಯ-L1 ಮಿಷನ್ನ ಉಡಾವಣೆಗೆ ಸಿದ್ಧತೆಗಳು ಭರದಿಂದ ಸಾಗಿವೆ. ಈ ಮಿಷನ್ ಅನ್ನು ಲಾಂಚ್ ಮಾಡುವ ಕಾರ್ಯಕ್ಕಾಗಿ ಇಂದು ಪೂರ್ವಾಭ್ಯಾಸ ನಡೆಸಿ ರಾಕೆಟ್ ವೆಹಿಕಲ್ ಅಂತರಿಕ ಪರೀಕ್ಷೆಯನ್ನು ಶ್ರೀಹರಿಕೋಟಾದಲ್ಲಿ ಮುಗಿಸಲಾಗಿದೆ. ಪರೀಕ್ಷೆಯಲ್ಲಿ ಯಾವುದೇ ಸಮಸ್ಯೆ ಕಾಣದಿದ್ದರಿಂದ ಇಸ್ರೋ ಯಶಸ್ವಿಯಾಗಿ ರಿಹರ್ಸಲ್ ಮುಗಿಸಿದೆ.

ಈ ಬಗ್ಗೆ ಇಸ್ರೋ ತನ್ನ ಅಧೀಕೃತ ಎಕ್ಸ್ನಲ್ಲಿ ಮಾಹಿತಿ ನೀಡಿದ್ದು ಸೆಪ್ಟೆಂಬರ್ 2 ರಂದು ಆಂಧ್ರ ಪ್ರದೇಶದ ಶ್ರೀಹರಿಕೋಟಾದಿಂದ ಮಿಷನ್ ಅನ್ನು ಲಾಂಚ್ ಮಾಡಲಾಗುವುದು. ಇದಕ್ಕಾಗಿ ಈಗಾಗಲೇ ಸಿದ್ಧತೆ ನಡೆದಿವೆ ಎಂದು ಇಸ್ರೋ ಮಾಹಿತಿ ನೀಡಿದೆ.




