ದಕ್ಷಿಣ ಕನ್ನಡ : ಕರ್ನಾಟಕ ಸರ್ಕಾರವು ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ, ಕರ್ನಾಟಕದ ಯಾವ ಯಾವ ತಾಲೂಕುಗಳು ಬರ ಘೋಷಣೆಗೆ ಅರ್ಹವಾಗುತ್ತವೆ ಎನ್ನುವುದನ್ನು ಸರ್ವೇ ಮಾಡಿ , ಸೆಪ್ಟೆಂಬರ್ 4ರಂದು ಬರಪೀಡಿತ ತಾಲೂಕುಗಳನ್ನು ಘೋಷಣೆ ಮಾಡಲಾಗುತ್ತದೆ ಎಂಬುದಾಗಿ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೆಪ್ಟೆಂಬರ್ 4ರಂದು ಸಚಿವ ಸಂಪುಟ ಉಪ ಸಮಿತಿಯ ಸಭೆಯನ್ನು ನಡೆಸಲಾಗುತ್ತಿದೆ. ಆ ಸಭೆಯಲ್ಲಿ ಎಷ್ಟು ತಾಲೂಕುಗಳು ಬರಪೀಡಿತ ಎನ್ನುವುದನ್ನು ಅಂತಿಮಗೊಳಿಸಿ, ಘೋಷಿಸಲಾಗುವುದು ಎಂದರು.

ಬರಪೀಡಿತ ತಾಲೂಕುಗಳ ಘೋಷಣೆಯ ನಂತರ, ಕೈಗೊಳ್ಳಬೇಕಾದ ಪರಿಹಾರ ಕ್ರಮಗಳ ಬಗ್ಗೆಯೂ ಸೆ. 4ರ ನಂತರ ತಿಳಿಸಲಾಗುವುದು. ಆ ಬಗ್ಗೆ ವಾರದೊಳಗೆ ಕೇಂದ್ರಕ್ಕೆ ಮನವಿಯನ್ನೂ ಸಲ್ಲಿಸಲಾಗುತ್ತದೆ ಎಂದು ಅವರು ಹೇಳಿದರು.
ಮಳೆಯ ಕೊರತೆ, ಬೆಳೆ ಸಮೀಕ್ಷೆ ಆಧರಿಸಿ ಮುಂದಿನ ಹಂತದಲ್ಲಿ ಬರ ಪೀಡಿತ ತಾಲೂಕ್ಕೂಗಳ ಹೊಸ ಪಟ್ಟಿ ತಯಾರಿಸಲಾಗುವುದು. ಬರ ಘೋಷಣೆ ವಿಚಾರದಲ್ಲಿ ರಾಜ್ಯ ಸರ್ಕಾರದ ವಿವೇಚನೆ ಬಳಸುವಂತೆ ಇಲ್ಲ. ಕೇಂದ್ರ ಮಾರ್ಗಸೂಚಿಯೇ ಅಂತಿಮ. ಈ ಮಾರ್ಗಸೂಚಿಯನ್ನು ಸರಳೀಕರಣಗೊಳಿಸುವಂತೆ ಕೇಂದ್ರಕ್ಕೆ ಈಗಾಗಲೇ ಪತ್ರ ಬರೆಯಲಾಗಿದೆ ಎಂದರು.

ಅಂದಹಾಗೇ ರಾಜ್ಯದಲ್ಲಿ ತೀವ್ರ ಮಳೆ ಕೊರತೆ ಎದುರಿಸುತ್ತಿರುವ ರಾಜ್ಯದ 113 ತಾಲ್ಲೂಕುಗಳನ್ನು ಬರಪೀಡಿತ ಎಂದು ಈಗಾಗಲೇ ಗುರಿತಿಸಲಾಗಿದೆ. ಈ ಬಗ್ಗೆ ಖಚಿತ ವರದಿಯನ್ನು ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಆ ವರದಿಯನ್ನು ಆಧರಿಸಿ ಸೆ.4ರಂದು ರಾಜ್ಯದ 113 ತಾಲ್ಲೂಕುಗಳ ಬರ ಪೀಡಿತ ಎಂಬುದಾಗಿ ಘೋಷಿಸೋ ಸಾಧ್ಯತೆ ಇದೆ.



