ಜನ ಮನದ ನಾಡಿ ಮಿಡಿತ

Advertisement

ಸೆ.10 ರಂದು ಮೂಡುಬಿದಿರೆಯಲ್ಲಿ ಜಿಲ್ಲಾ ಕಂಬಳ ಸಮಿತಿಯ ಮಹಾಸಭೆ

ಮೂಡುಬಿದಿರೆ: ಅವಿಭಜಿತ ದ.ಕ. ಜಿಲ್ಲಾ ಕಂಬಳ ಸಮಿತಿಯ ಮಹಾಸಭೆಯು ಸೆ.10 ಆದಿತ್ಯವಾರದಂದು ಮೂಡುಬಿದಿರೆಯ ಒಂಟಿಕಟ್ಟೆಯಲ್ಲಿರುವ ಕೋಟಿ-ಚೆನ್ನಯ ಕಂಬಳ ವಠಾರದಲ್ಲಿರುವ ಸೃಷ್ಠಿ ಗಾರ್ಡನ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಕಂಬಳ ಸಮಿತಿ ಅಧ್ಯಕ್ಷ ಎರ್ಮಾಳ್ ರೋಹಿತ್‌ ಹೆಗ್ಡ ಅವರು ತಿಳಿಸಿದ್ದಾರೆ.


ಕಂಬಳ ವ್ಯವಸ್ಥಾಪಕರು, ಕೋಣಗಳ ಯಜಮಾನರು, ತೀರ್ಪುಗಾರರು, ಓಟಗಾರರು, ಕಂಬಳ ಸಹಕಾರಿ ವರ್ಗದವರು ಭಾಗವಹಿಸುವಂತೆ ವಿನಂತಿಸಿದ್ದಾರೆ.

ನೂತನ ಕಂಬಳ ಜಿಲ್ಲಾ ಸಮಿತಿ ರಚನೆ ಹಾಗೂ 2023-24 ನೇ ಋತುವಿನ ವಿವಿಧ ಕಂಬಳದ ದಿನಾಂಕಗಳನ್ನು ಅದೇ ದಿನ ನಿರ್ಧರಿಸಲಾಗುವುದು. ಆದ್ದರಿಂದ ಕಂಬಳ ವ್ಯವಸ್ಥಾಪಕರೆಲ್ಲರೂ ತಪ್ಪದೆ ಆ ದಿನ ಹಾಜರಿರುವಂತೆ ಜಿಲ್ಲಾ ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಜೈನ್ ನಾರಾವಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

ಮೂಡಬಿದ್ರೆ: ಮಿಜಾರ್‌ನಲ್ಲಿ ಸಿಲಿಂಡರ್ ಸ್ಫೋಟ; ಮೂವರಿಗೆ ಸುಟ್ಟ ಗಾಯ…!

ಮಂಗಳೂರು: ತಂಗಿಯ ಸಾವಿನ ಬೆನ್ನಲ್ಲೇ ಸಹೋದರನೂ ಶವವಾಗಿ ಪತ್ತೆ; ಮಂಗಳೂರಿನ ಲಾಡ್ಜ್‌ನಲ್ಲಿ ದುರಂತ

ಕೊಲಂಬಿಯಾ: ಕೊಲಂಬಿಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ; 111 ಮಂದಿ ಸಾವು

ವಿಟ್ಲ: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಶಾಲಾ ಬಸ್; ತಪ್ಪಿದ ಭಾರೀ ಅನಾಹುತ

ಮಂಗಳೂರು: ತಲಪಾಡಿಯಲ್ಲಿ ಪಾದಚಾರಿಗೆ ಕಾರು ಡಿಕ್ಕಿ; ಗಂಭೀರ ಗಾಯ

ಪರ್ಕಳ: ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬುಲೆಟ್; ಯುವಕ ಸಾವು

ಬಂಟ್ವಾಳ: ಬಂಟ್ವಾಳ ಪುರಸಭೆಯ ಹೊಸ ಜೆಸಿಬಿಗೆ ತ್ಯಾಜ್ಯ ವಿಲೇವಾರಿ ಕಾರ್ಯಕ್ಕೆ ಚಾಲನೆ

ವಾಮದಪದವು: ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಪಂಜಿನ ಮೆರವಣಿಗೆ…!

ಮಂಗಳೂರು: ಪುದು ಗ್ರಾಮ ಪಂಚಾಯಿತಿಯಲ್ಲಿ ವಿಶಿಷ್ಟ ‘ಆಟಿಡೊಂಜಿ ದಿನ’ ಆಚರಣೆ

error: Content is protected !!