ಸೌಜನ್ಯ ಹತ್ಯೆ ಪ್ರಕರಣಕ್ಕೆ ನ್ಯಾಯ ಒದಗಿಸಬೇಕು ಮತ್ತು ಪ್ರಕರಣದ ಮರು ತನಿಖೆ ಮಾಡಬೇಕೆಂದು ಒತ್ತಾಯಿಸಿ
ಇಂದು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪ್ರತಿಭಟನೆ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಹೋರಾಟಗಾರ
ಮಹೇಶ್ ಶೆಟ್ಟಿ ತಿಮರೋಡಿಯವರು, ಹಾವಿನ ದ್ವೇಷ 12 ವರ್ಷ ಇರ್ತದೆ. ಸೌಜನ್ಯ ಪ್ರಕರಣಕ್ಕೂ 12 ನೇ
ವರ್ಷ ಇನ್ನು ಮೂರೇ ತಿಂಗಳಲ್ಲಿ ತುಂಬಲಿದೆ. ಕುಕ್ಕೆ ಸುಬ್ರಹ್ಮಣ್ಯನಾಗನ ಕ್ಷೇತ್ರದಲ್ಲಿ ನಾವೆಲ್ಲಾ ಇದ್ದು ಪ್ರಾರ್ಥನೆ
ಮಾಡಿದ್ದೇವೆ. ಈ ಬಾರಿ ನ್ಯಾಯ ಸಿಗಲಿದೆ. ಆ ದಿನ ದೂರ ಇಲ್ಲ ಎಂದರು.




