ಜನ ಮನದ ನಾಡಿ ಮಿಡಿತ

Advertisement

ಮುರುಡೇಶ್ವರ-ಬೆಂಗಳೂರು ರೈಲು ಸೇವೆ ವಿಸ್ತರಣೆ; ಭಾರತೀಯ ರೈಲ್ವೇ ಆದೇಶ

ಕುಂದಾಪುರ; ಬೆಂಗಳೂರು ಮೈಸೂರು ಮಂಗಳೂರಿಗೆ ಬರುತಿದ್ದ ಗಾಡಿ‌ ಸಂಖ್ಯೆ 16585 ಎಕ್ಸ್‌ಪ್ರೆಸ್‌ ರೈಲನ್ನು ಮುರುಡೇಶ್ವರದವರೆಗೆ ವಿಸ್ತರಿಸುವಂತೆ ಭಾರತೀಯ ರೈಲ್ವೇ ಇಲಾಖೆ ಆದೇಶ ಹೊರಡಿಸಿದೆ.

ಈ ಆದೇಶದಿಂದಾಗಿ ಕುಂದಾಪುರ ಉಡುಪಿ ಸೇರಿದಂತೆ ಕರಾವಳಿ ಕರ್ನಾಟಕಕ್ಕೆ ರಾಜದಾನಿ ಬೆಂಗಳೂರು ಹಾಗೂ ಮೈಸೂರಿಗೆ ನಿತ್ಯ ರೈಲೊಂದು ಸಿಕ್ಕಂತಾಗಿದೆ. ಕೆಲ ವರ್ಷದಿಂದ ಸತತವಾಗಿ ಈ ಹೋರಾಟ ಕೈಗೆತ್ತಿಕೊಂಡಿದ್ದ ಕುಂದಾಪುರ ರೈಲ್ವೇ ಸಮಿತಿ, ದೆಹಲಿ ಮಟ್ಟದಲ್ಲಿ ನಿರಂತರ ಕೆಲಸ ಮಾಡಿದ್ದ ಮೈಸೂರು ಸಂಸದ ಪ್ರತಾಪ್ ಸಿಂಹ ಪ್ರಯತ್ನಕ್ಕೆ ಕೊನೆಗೂ ಯಶಸ್ಸು ಲಭಿಸಿದೆ.

ಈಗಿರುವ ಕರಾವಳಿಯ ಜೀವನಾಡಿ ಪಂಚಗಂಗಾ ಎಕ್ಸ್‌ಪ್ರೆಸ್‌ ಬೆಂಗಳೂರಿನಿಂದ ಬೇಗನೆ ಹೊರಡುತ್ತದೆ ಹಾಗೂ ಅದರಲ್ಲಿ ಟಿಕೇಟು ಸಿಗುವುದಿಲ್ಲ ಎಂಬ ದೂರುಗಳಿಗೆ ಈಗ ಪರಿಹಾರ ಸಿಕ್ಕಂತಾಗಿದ್ದು, ಬೈಯಪ್ಪನ ಹಳ್ಳಿಯಿಂದ ಹೊರಟು ರಾತ್ರಿ ಒಂಬತ್ತು ಘಂಟೆಗೆ ಮೆಜೆಸ್ಟಿಕ್ ಬರುವ ರೈಲು ಮೈಸೂರು ಮಾರ್ಗವಾಗಿ ಮಂಗಳೂರು ಉಡುಪಿ ಕುಂದಾಪುರ ಮೂಲಕ ಸಂಚರಿಸಲಿದೆ.

ಮದ್ಯಾಹ್ನ ಮೂರುವರೆ ಸುಮಾರಿಗೆ ಕರಾವಳಿಯಿಂದ ಹೊರಡುವ ರೈಲು ಬೆಳಿಗ್ಗೆ ಆರಕ್ಕೆ ಬೆಂಗಳೂರು ತಲುಪಲಿದೆ. ವಾರಕ್ಕೆ ಮೂರು ದಿನ ಮಂಗಳೂರಿನವರೆಗೆ ಮಾತ್ರ ಓಡುತಿದ್ದ ಈ ರೈಲನ್ನು ಆರೂದಿನ ಓಡುವಂತೆ ಮಾಡಿ ಕುಂದಾಪುರ ಕಾರವಾರಕ್ಕೆ ವಿಸ್ತರಣೆ ಮಾಡಬೇಕು ಎಂದು ಸಂಸದ ಪ್ರತಾಪ್ ಸಿಂಹ ಸತತವಾಗಿ ಪ್ರಯತ್ನಿಸಿದ್ದು , ಅವರ ಬೇಡಿಕೆಯಂತೆ ವಾರಕ್ಕೆ ಮೂರು ದಿನದ ಬದಲು ಆರು ದಿನ ಓಡುವಂತೆ ಭಾರತೀಯ ರೈಲ್ವೇ ಕಳೆದ ವರ್ಷವೇ ಆದೇಶ ಮಾಡಿತ್ತು .ಆದರೆ ರೈಲಿನ ಉಡುಪಿ ಕುಂದಾಪುರ ಕಾರವಾರ ವಿಸ್ತರಣೆ ಮಾತ್ರ ವಿಳಂಭವಾಗುತ್ತಲೇ ಇದ್ದ ಕಾರಣ ,ಕುಂದಾಪುರ ರೈಲ್ವೇ ಸಮಿತಿ ನಿರಂತರವಾಗಿ ಕೊಂಕಣ ರೈಲ್ವೆ, ದಕ್ಷಿಣ ರೈಲ್ವೇ ಹಾಗು ನೈರುತ್ಯ ರೈಲ್ವೇ ಜತೆ ಬೆಂಗಳೂರಿಗೆ ಹೆಚ್ಚುವರಿ ರೈಲು ಸೇವೆಯ ಹೋರಾಟ ನಡೆಸಿತ್ತು .

ಸಂಸದರ ಯತ್ನದಿಂದ ಎಲ್ಲಾ ಸಮಸ್ಯೆಗಳನ್ನೂ ಮೀರಿ ರೈಲ್ವೇ ಸಚಿವರ ಒಪ್ಪಿಗೆ ಪಡೆದುದಲ್ಲದೇ ರೈಲ್ವೇ ಅದಿಕಾರಿಗಳ ಸಭೆ ಕರೆದು ದಸರಾ ಒಳಗೆ ರೈಲು ಓಡಲೇ ಬೇಕೆಂದು ಕಟ್ಟು ನಿಟ್ಟಿನ ಸೂಚನೆ ರವಾನಿಸಿದ ಪರಿಣಾಮ ಇಲಾಖೆ ಈ ರೈಲಿನ ವಿಸ್ತರಣೆಗೆ ಆದೇಶ ನೀಡಿದೆ.

Leave a Reply

Your email address will not be published. Required fields are marked *

ಬಂಟ್ವಾಳ: ಪಾಣೆಮಂಗಳೂರು ಹಳೆಯ ಸೇತುವೆ ಮೇಲೆ ರಿಕ್ಷಾ ನಿಲ್ಲಿಸಿ ಚಾಲಕ ಕಾಣೆ..!

ಬಂಟ್ವಾಳ: ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ಚೆನ್ನಕೇಶವ ನಾಪತ್ತೆ

ಬಂಟ್ವಾಳ: ಕಾಮಗಾರಿಯ ಪ್ರಗತಿಯ ಕುರಿತು ಪುರಸಭಾ ಜನಪ್ರತಿನಿಧಿಗಳ ಸಭೆ….!

ಬಂಟ್ವಾಳ: ಬಂಟ್ವಾಳ ತಾಲೂಕಿನ ಕೇಪು ಗ್ರಾಮ ಪಂಚಾಯಿತಿಗೆ ಕಿಶೋರ್ ಕುಮಾರ್ ಭೇಟಿ…!

ಬಂಟ್ವಾಳ: ಕಾರು ಮೇಲ್ಸೇತುವೆಗೆ ಡಿ*ಕ್ಕಿ; ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಚಾಲಕ…!

ಮಂಗಳೂರು: ಆಟವಾಡುತ್ತಾ 15 ಅಡಿ ಆಳದ ನೀರಿದ್ದ ಬಾವಿಗೆ ಬಿದ್ದ ಹೆಣ್ಣು ಮಗು….!

ಮಂಗಳೂರು: ಕಲ್ಲಡ್ಕ ಪ್ರಭಾಕರ್ ಭಟ್ ಅವರ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ..!

ಬಂಟ್ವಾಳ: ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ “ಶ್ರೀರಾಮನ ಚರಿತ್ರೆಯ” ಯಕ್ಷಗಾನ….!

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

error: Content is protected !!