ಜನ ಮನದ ನಾಡಿ ಮಿಡಿತ

Advertisement

ಮೂಡುಬಿದಿರೆಯಲ್ಲಿ ಯಕ್ಷಗಾನೀಯ ಮೊಸರು ಕುಡಿಕೆ

ಮೂಡುಬಿದಿರೆ ಕರಾವಳಿ ಮಾತ್ರವಲ್ಲ ನಾಡಿನಲ್ಲೇ ವಿಶೇಷ ಎನ್ನಬಹುದಾದ ಯಕ್ಷಗಾನೀಯ ಹಿನ್ನೆಲೆಯ ಶ್ರೀ ಕೃಷ್ಣ ವೇಷಧಾರಿಯೇ ಮೊಸರ ಕುಡಿಕೆಗಳನ್ನು ಚಕ್ರಾಯುಧದಿಂದ ಒಡೆಯುವ ವಿಶೇಷ ಮೊಸರು ಕುಡಿಕೆ ಉತ್ಸವ ಗುರುವಾರ ಮೂಡುಬಿದಿರೆಯಲ್ಲಿ ನಡೆಯಲಿದೆ.

ಪೇಟೆಯ ರಾಜಬೀದಿಗೆ ಅಡ್ಡಲಾಗಿ ಕಟ್ಟುವ ಹಗ್ಗಗಳಲ್ಲಿ ತೂಗುವ ಮೊಸರ ಕುಡಿಕೆಗಳನ್ನು ಶ್ರೀಕೃಷ್ಣನೇ ಇಲ್ಲಿ ಯಕ್ಷಗಾನೀಯ ಚೆಂಡೆ ಮದ್ದಳೆ ಜಾಗಟೆಯ ಹಿಮ್ಮೇಳಕ್ಕೆ ಕುಣಿದು ಹಗ್ಗ ಜಗ್ಗಾಡುತ್ತಾ ಸತಾಯಿಸುವವರನ್ನೂ ಮಣಿಸಿ ಜಿಗಿದು ಮಡಿಕೆಗಳನ್ನು ಚಕ್ರಾಯುಧದಿಂದ ಒಡೆಯುವ ಸೊಬಗು ಬೇರೆಲ್ಲೂ ಕಾಣದ ವಿಶೇಷತೆ.

ಶತಮಾನ ಪೂರೈಸಿ ಮುನ್ನಡೆದಿರುವ ಈ ವಿಶಿಷ್ಟ ಉತ್ಸವ ಇಲ್ಲಿನ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವಕ್ಕೆ ಪೂರಕವಾಗಿ ನಡೆದು ಬಂದಿದೆ.

ಪೇಟೆಯಲ್ಲಿ ಉತ್ಸವಕ್ಕೆ ಪೂರಕವಾಗಿ ಸಾಂಸ್ಕೃತಿಕ ಕಲಾಪಗಳು ರಾಜಬೀದಿಯನ್ನು ರಂಗೇರಿಸಲು ಸಜ್ಜಾಗಿ ಶ್ರೀಕೃಷ್ಣ ಫ್ರೆಂಡ್ಸ್‌ ಸರ್ಕಲ್: ಪೇಟೆಯ ಕೆನರಾ ಬ್ಯಾಂಕ್‌ ಜಂಕ್ಷನ್ ಬಳಿ ತನ್ನ 37 ನೇ ವರ್ಷದ ಸಾಂಸ್ಕೃತಿಕ ಕಲಾಪಕ್ಕೆ ಮುಂದಾಗಿರುವ ಶ್ರೀ ಕೃಷ್ಣ ಫ್ರೆಂಡ್ಸ್‌ ಸರ್ಕಲ್ ಬೆಳಿಗ್ಗೆ ಭಜನಾ ಕಾರ್ಯಕ್ರಮ,ಸ್ಯಾಕ್ರೋಫೋನ್ ವಾದನ, ಸಂಗೀತ ಗಾನ ಸಂಭ್ರಮ ಹಮ್ಮಿಕೊಂಡಿದೆ. ಸಂಜೆ ವಿಶ್ರಾಂತ ಪ್ರಾಚಾರ್ಯ, ಕಂಬಳ ವಿದ್ವಾಂಸ ಕೆ. ಗುಣಪಾಲ ಕಡಂಬ ಅವರಿಗೆ ಶ್ರೀ ಕೃಷ್ಣ ಪ್ರಶಸ್ತಿ ಪ್ರದಾನ ದ ಸಭಾ ಕಾರ್ಯಕ್ರಮ, ಬಹುಮಾನ ವಿತರಣೆ ಗಣ್ಯರ ಕೂಡುವಿಕೆಯಲ್ಲಿ ನಡೆಯಲಿದೆ.

ನ್ಯೂಸೆಂಟ್ರಲ್ ಫ್ರೆಂಡ್ಸ್‌ ಸರ್ಕಲ್‌ ಪೇಟೆಯ ಶ್ರೀ ಹನುಮಂತ ದೇವಸ್ಥಾನದ ಬಳಿ ಅಪರಾಹ್ನ 3ರಿಂದ ಸಂಗೀತ ರಸಮ೦ಜರಿ ನೃತ್ಯ ಕಾರ್ಯಕ್ರಮ ಹಮ್ಮಿಕೊ೦ಡಿದೆ. ಶ್ರೀಕೃಷ್ಣ ಫ್ರೆಂಡ್ಸ್‌ ಸರ್ಕಲ್: ಕೃಷ್ಣತ್ಸವ: ಜವನೆರ್‌ಬೆದ್ರ ಸಂಘಟನೆ ಇಲ್ಲಿನ ನಿಶ್ಮಿತಾ ಸರ್ಕಲ್ ಬಳಿ ಕೃಷ್ಣತ್ಸವ ಹಮ್ಮಿಕೊಂಡಿದೆ. ಸಂಜೆ 5ರಿಂದ ಯಕ್ಷ-ಗಾನ ವೈಭವ, ಯಕ್ಷಗಾನ ಸಂಘಟಕ ಎಂ.ದೇವಾನಂದ ಭಟ್ ಅವರಿಗೆ ಸಮ್ಮಾನ, ಬಳಿಕ ಶ್ರೀಕೃಷ್ಣಾಂತರಂಗ ಯಕ್ಷಗಾನ ಪ್ರದರ್ಶನವಿದೆ

Leave a Reply

Your email address will not be published. Required fields are marked *

ಬಂಟ್ವಾಳ: ಪಾಣೆಮಂಗಳೂರು ಹಳೆಯ ಸೇತುವೆ ಮೇಲೆ ರಿಕ್ಷಾ ನಿಲ್ಲಿಸಿ ಚಾಲಕ ಕಾಣೆ..!

ಬಂಟ್ವಾಳ: ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ಚೆನ್ನಕೇಶವ ನಾಪತ್ತೆ

ಬಂಟ್ವಾಳ: ಕಾಮಗಾರಿಯ ಪ್ರಗತಿಯ ಕುರಿತು ಪುರಸಭಾ ಜನಪ್ರತಿನಿಧಿಗಳ ಸಭೆ….!

ಬಂಟ್ವಾಳ: ಬಂಟ್ವಾಳ ತಾಲೂಕಿನ ಕೇಪು ಗ್ರಾಮ ಪಂಚಾಯಿತಿಗೆ ಕಿಶೋರ್ ಕುಮಾರ್ ಭೇಟಿ…!

ಬಂಟ್ವಾಳ: ಕಾರು ಮೇಲ್ಸೇತುವೆಗೆ ಡಿ*ಕ್ಕಿ; ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಚಾಲಕ…!

ಮಂಗಳೂರು: ಆಟವಾಡುತ್ತಾ 15 ಅಡಿ ಆಳದ ನೀರಿದ್ದ ಬಾವಿಗೆ ಬಿದ್ದ ಹೆಣ್ಣು ಮಗು….!

ಮಂಗಳೂರು: ಕಲ್ಲಡ್ಕ ಪ್ರಭಾಕರ್ ಭಟ್ ಅವರ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ..!

ಬಂಟ್ವಾಳ: ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ “ಶ್ರೀರಾಮನ ಚರಿತ್ರೆಯ” ಯಕ್ಷಗಾನ….!

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

error: Content is protected !!