ಮೂಡಬಿದಿರೆಯಲ್ಲಿ ಕರ್ಮಜೀವನ ಆರಂಭಿಸಿ 50 ವರ್ಷ ತುಂಬಿರುವ ಈ ಸುಸಂದರ್ಭದಲ್ಲಿ ತನ್ನ ಅಧ್ಯಾಪನ, ಆಡಳಿತ, ಕಂಬಳ, ಕೃಷಿ, ಧಾರ್ಮಿಕ ಸೇವಾನುಭವವನ್ನು ಗುರುತಿಸಿ ನೀಡಿರುವ ಗೌರವವನ್ನು ಸಂತೋಷದಿಂದ ಸ್ವೀಕರಿಸಿದ್ದೇನೆ ಎಂದು ಜೈನ ಪ.ಪೂ. ಕಾಲೇಜಿನ ನಿವೃತ್ತ ಪ್ರಾಚಾರ್ಯ, ಕಂಬಳ ವಿದ್ವಾಂಸ, ಸಂಶೋಧನಶೀಲ ಕೃಷಿಕರಾದ ಕೆ. ಗುಣಪಾಲ ಕಡಂಬ ಹೇಳಿದ್ದಾರೆ.

ಇವರು ಶ್ರೀ ಕೃಷ್ಣ ಫ್ರೆಂಡ್ಸ್ ಸರ್ಕಲ್ ವತಿಯಿಂದ ನಡೆದ 37ನೇ ವರ್ಷದ ಮೊಸರು ಕುಡಿಕೆ ಉತ್ಸವದಲ್ಲಿ `ಶ್ರೀ ಕೃಷ್ಣ ಪ್ರಶಸ್ತಿ’ ಸ್ವೀಕರಿಸಿ ಮಾತಾನಾಡಿ, ಎಲ್ಲ ರಂಗಗಳಲ್ಲೂ ಪ್ರಾಮಾಣಿಕ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟವರೆಲ್ಲರನ್ನೂ ಈ ಸಂದರ್ಭದಲ್ಲಿ ನೆನಪಿಸಿಕೊಳ್ಳುತ್ತೇನೆ ಎಂದ್ರು.



