ಜನ ಮನದ ನಾಡಿ ಮಿಡಿತ

Advertisement

ಬಂಟ್ವಾಳ ತಾಲೂಕಿನ ಕೊರಗ ಸಮುದಾಯದ ಕುಂದುಕೊರತೆಗಳ ಸಭೆ ಬಿಸಿರೋಡಿನ ತಾ.ಪಂ.ನ ಎಸ್.ಜಿ.ಎಸ್.ವೈ ಸಭಾಂಗಣದಲ್ಲಿ ತಾ.ಪಂ. ಪ್ರಭಾರ ಇ.ಒ.ರಾಜಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದಿದೆ

2007 ರಲ್ಲಿ ಸಾಗುವಳಿ ಚೀಟಿ ನೀಡಿದ ಭೂಮಿಗಳ ಗಡಿಗುರುತು ಮಾಡಬೇಕು. ಭೂಮಿ ನೀಡಿದ ಇಲಾಖೆ ಪುನರ್ವಸತಿ ನೀಡುವ ಕಾರ್ಯಗಳು ಬಾಕಿಯಿದೆ. ಶೀಘ್ರವಾಗಿ ಪುನರ್ವಸತಿ ಕಾರ್ಯ ಆಗಬೇಕು. ಎಲ್ಲಾ ಮೂಲಭೂತ ಸೌಕರ್ಯಗಳನ್ನು ನೀಡಿದರೆ ಮಾತ್ರ ಸಮುದಾಯಕ್ಕೆ ಜೀವನ ಮಾಡಲು ಸಾಧ್ಯವಿದೆ ಎಂದು ಅವರು ತಿಳಿಸಿದರು.

ಭೂಮಿಯ ಮಾಲೀಕತ್ವವನ್ನು ನೀಡದೆ ನಮಗೆ ಯಾವುದೇ ‌ಸವಲತ್ತುಗಳನ್ನು ಪಡೆಯಲು ಸಾಧ್ಯವಿಲ್ಲ.
ಹಿರಿಯರು ಮರಣಹೊಂದಿರುವ ಅನೇಕ ಕೊರಗ ಕುಟುಂಬಗಳ ಭೂಮಿಯನ್ನು ಮನೆಯ ಇತರರ ಹೆಸರಿಗೆ ಖಾತೆ ಪರಿವರ್ತನೆ ಮಾಡುವ ಕಾರ್ಯ ಇಲಾಖೆಗಳಿಂದ ನಡೆದಿಲ್ಲ. ಇದರಿಂದ ಸರಕಾರದ ಯಾವುದೇ ಸವಲತ್ತುಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಸುಂದರ ಬೆಳುವಾಯಿ ಅಧಿಕಾರಿಗಳ ಗಮನಕ್ಕೆ ತಂದರು.

ಮೆಸ್ಕಾಂ ಮೀಟರ್ ರೀಡ್ ಮಾಡುವವರು ಮನೆಗೆ ಬರುವುದಿಲ್ಲ,ಬಿಲ್ ಕೂಡ ನೀಡುವುದಿಲ್ಲ, ಕೇಳಿದರೆ ನಾಯಿ ಇದೆ ಎಂದು ಹೇಳುತ್ತಾರೆ.ಆದರೆ ನಮ್ಮ ಮನೆಯಲ್ಲಿ ನಾಯಿಯೇ ಇಲ್ಲ ಎಂದು ಸುಂದರ ಅವರು ಮೆಸ್ಕಾಂ ಅಧಿಕಾರಿಯವರಲ್ಲಿ ದೂರಿದರು.ಈ ಸಮಸ್ಯೆಯನ್ನು ಬಗೆಹರಿಸಲು ಕ್ರಮ ಕೈಗೊಳ್ಳುವುದಾಗಿ ಮೆಸ್ಕಾಂ ಅವರು ಭರವಸೆ ನೀಡಿದರು.

ಹಿರಿಯರ ಜಮೀನನ್ನು ಬಲಾಢ್ಯರು ವಶಪಡಿಸಿಕೊಂಡಿರುವ ಬಗ್ಗೆ ಕಂದಾಯ ಇಲಾಖೆಗೆ ದೂರು ನೀಡಿದ್ದು, ಅ ಜಮೀನನ್ನು ನಮಗೆ ವಾಪಸು ತೆಗೆಸಿಕೊಡಿ ಎಂದು ಕಂದಾಯ ಇಲಾಖೆಗೆ ಅನೇಕ ಬಾರಿ ಮನವಿ ನೀಡುತ್ತಾ ಬಂದಿದ್ದೇನೆ,ಆದರೆ ಇಲಾಖೆ ಯಾವುದೇ ಸ್ಪಂದನೆ ನೀಡುತ್ತಿಲ್ಲ. ಇದು ಅಧಿಕಾರಿಗಳ ಯಾವ ನ್ಯಾಯ , ಅಳಿವಿನಂಚಿಗೆ ಸರಿದಿರುವ ಸಮುದಾಯದ ಉಳಿಸುವುದಕ್ಕೆ ಅಧಿಕಾರಿಗಳು ನೀಡುವ ಕಾರ್ಯ ಇದೇನಾ? ಎಂದು ಪ್ರಶ್ನಿಸಿದರು.

ಕೇರಳ ಗಡಿಭಾಗದಿಂದ ಕರ್ನಾಟಕಕ್ಕೆ ಮದುವೆ ಆಗಿ ಬಂದ ವ್ಯಕ್ತಿಗಳಿಗೆ ಜಾತಿ ಸರ್ಟಿಫಿಕೇಟ್ ನೀಡಲು ಸಾಧ್ಯವಿದೆಯಾ? ಯಾವೆಲ್ಲಾ ದಾಖಲೆಗಳನ್ನು ನೀಡಬೇಕು ಎಂದು ಸುಂದರ ಕನ್ಯಾನ ಅಧಿಕಾರಿಗಳಲ್ಲಿ ಪ್ರಶ್ನಿಸಿದರು.

ಕೇರಳ ಗಡಿಭಾಗದ ಜಾತಿ ಸರ್ಟಿಫಿಕೇಟ್ ಹೊರತು ಪಡಿಸಿ ಉಳಿದ ಎಲ್ಲಾ ಸೌಕರ್ಯಗಳನ್ನು ನೀಡಲಾಗುತ್ತದೆ ಆದರೆ ಕರ್ನಾಟಕ ಮತ್ತು ಕೇರಳ ರಾಜ್ಯದ ಕೆಲವೊಂದು ನಿಯಮಗಳಿಗೆ ಅನುಸಾರವಾಗಿ ಜಾತಿ ಪ್ರಮಾಣ ಪತ್ರ ನೀಡಲು ಅಸಾಧ್ಯ ಎಂದು ಕಂದಾಯ ಅಧಿಕಾರಿ ನವೀನ್ ಬೆಂಜನಪದವು ತಿಳಿಸಿದರು

ಆದ್ಯತೆಯಲ್ಲಿ ಕೊರಗ ಸಮುದಾಯವನ್ನು ಅಧಿಕಾರಿಗಳು ಪರಿಗಣನೆ ಮಾಡಬೇಕು ,ಅಳಿವಿನಂಚಿಗೆ ಸಾಗುತ್ತಿರುವ ಪೀಳಿಗೆಯನ್ನು ಉಳಿಸುವ ನಿಟ್ಟಿನಲ್ಲಿ ಸಹಕಾರ ನೀಡಬೇಕು ಎಂದು ಸಭೆಯಲ್ಲಿ ತಿಳಿಸಿದರು.

ಬಿಸಿರೋಡಿನ ತಾ.ಪ‌ಂ.ಸಭಾಂಗಣದಲ್ಲಿ ತುಳು ಭಾಷೆ ಮೇಳೈಸಿತು .ಹೌದು ಕೊರಗರ ಕುಂದುಕೊರತೆಗಳ ಸಭೆಯಲ್ಲಿ ಬಹುಪಾಲು ಚರ್ಚೆ ತುಳುವಿನಲ್ಲಿ ನಡೆಯಿತು.
ಕೊರಗ ಜನಾಂಗದ ಬಹುತೇಕರು ತುಳುವಿನಲ್ಲಿ ಸಮಸ್ಯೆಯನ್ನು ಹೇಳಿಕೊಂಡಾಗ ಸ್ಪಂದಿಸಿದ ಅಧಿಕಾರಿಗಳು ಕೂಡ ಅವರಿಗೆ ಸರಿಯಾಗಿ ಮಾಹಿತಿ ಲಭ್ಯವಾಗಬೇಕು ಎಂಬ ನಿಟ್ಟಿನಲ್ಲಿ ತುಳುವಿನಲ್ಲಿಯೇ ಉತ್ತರಿಸಿದರು .
ಆರಂಭದಲ್ಲಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಅವರು ಕನ್ನಡ ದಲ್ಲಿ ಇಲಾಖೆಯ ಮಾಹಿತಿ ನೀಡಿದರು. ಅ ಬಳಿಕ ಸಮುದಾಯದವರು ತುಳುವಿನಲ್ಲಿ ಸಮಸ್ಯೆಗಳನ್ನು ಹೇಳಿಕೊಂಡಾಗ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಅವರು ಸಮಸ್ಯೆಗಳಿಗೆ ತುಳುವಿನಲ್ಲಿಯೇ ಸ್ಪಂದಿಸಿದರು.

ಕಂದಾಯ ಇಲಾಖೆಯ ಸಮಸ್ಯೆಗಳಿಗೂ ನವೀನ್ ಬೆಂಜನಪದವು ಅವರು ತುಳು ಭಾಷೆಯಲ್ಲಿ ಉತ್ತರಿಸಿ ತುಳು ಭಾಷೆಗೆ ಹೆಚ್ಚು ಒತ್ತು ನೀಡಿದರು.
ವೇದಿಕೆಯಲ್ಲಿ ಕಂದಾಯ ಇಲಾಖೆಯ ಅಧಿಕಾರಿ ರಾಜೇಶ್, ಸಮಾಜ ಕಲ್ಯಾಣ ಸುನೀತಾ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಬಂಟ್ವಾಳ: ಪಾಣೆಮಂಗಳೂರು ಹಳೆಯ ಸೇತುವೆ ಮೇಲೆ ರಿಕ್ಷಾ ನಿಲ್ಲಿಸಿ ಚಾಲಕ ಕಾಣೆ..!

ಬಂಟ್ವಾಳ: ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ಚೆನ್ನಕೇಶವ ನಾಪತ್ತೆ

ಬಂಟ್ವಾಳ: ಕಾಮಗಾರಿಯ ಪ್ರಗತಿಯ ಕುರಿತು ಪುರಸಭಾ ಜನಪ್ರತಿನಿಧಿಗಳ ಸಭೆ….!

ಬಂಟ್ವಾಳ: ಬಂಟ್ವಾಳ ತಾಲೂಕಿನ ಕೇಪು ಗ್ರಾಮ ಪಂಚಾಯಿತಿಗೆ ಕಿಶೋರ್ ಕುಮಾರ್ ಭೇಟಿ…!

ಬಂಟ್ವಾಳ: ಕಾರು ಮೇಲ್ಸೇತುವೆಗೆ ಡಿ*ಕ್ಕಿ; ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಚಾಲಕ…!

ಮಂಗಳೂರು: ಆಟವಾಡುತ್ತಾ 15 ಅಡಿ ಆಳದ ನೀರಿದ್ದ ಬಾವಿಗೆ ಬಿದ್ದ ಹೆಣ್ಣು ಮಗು….!

ಮಂಗಳೂರು: ಕಲ್ಲಡ್ಕ ಪ್ರಭಾಕರ್ ಭಟ್ ಅವರ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ..!

ಬಂಟ್ವಾಳ: ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ “ಶ್ರೀರಾಮನ ಚರಿತ್ರೆಯ” ಯಕ್ಷಗಾನ….!

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

error: Content is protected !!