ಜನ ಮನದ ನಾಡಿ ಮಿಡಿತ

Advertisement

ಜಮ್ಮು- ಕಾಶ್ಮೀರದಲ್ಲಿ ಮುಂದುವರೆದ ಗುಂಡಿನ ಚಕಮಕಿ; ಇಬ್ಬರಿಗೆ ಗಾಯ, ಒರ್ವ ಯೋಧ ನಾಪತ್ತೆ..!!

ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ 48 ಗಂಟೆಗಳ ಕಾಲ ನಡೆಯುತ್ತಿರುವ ಭಯೋತ್ಪಾದಕರ ಎನ್‌ಕೌಂಟರ್‌ನಲ್ಲಿ ಇದೀಗ ಯೋಧನೊಬ್ಬ ನಾಪತ್ತೆಯಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆ.

ಕೋಕರ್‌ನಾಗ್‌ನ ದಟ್ಟ ಅರಣ್ಯದಲ್ಲಿ ಭಯೋತ್ಪಾದಕರನ್ನು ಬೇಟೆಯಾಡಲು ಭಾರತೀಯ ಸೇನೆ ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ ನಂತರ ಬುಧವಾರ ಮುಂಜಾನೆ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ಭಾರತೀಯ ಸೇನೆಯ ಕರ್ನಲ್ ಸೇರಿದಂತೆ ಭದ್ರತಾ ಪಡೆಯ ಮೂವರು ಅಧಿಕಾರಿಗಳು ಹುತಾತ್ಮರಾಗಿದ್ದಾರೆ. ಇನ್ನು ಈ ದಾಳಿಯಲ್ಲಿ ಭಯೋತ್ಪಾದಕರ ಕಡೆಯಿಂದ ಗಾಯಗೊಂಡಿರುವ ಅಂಕಿ ಅಂಶಗಳ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಸೇನೆಯ ಭದ್ರತಾ ಪಡೆಗಳು ತಮ್ಮ ತೀವ್ರವಾದ ಭಯೋತ್ಪಾದನಾ-ವಿರೋಧಿ ಕಾರ್ಯಾಚರಣೆಗಳಲ್ಲಿ ಹೆರಾನ್ ಡ್ರೋನ್‌ಗಳು ಸೇರಿದಂತೆ ಹೊಸ ಹೊಸ ಮಾದರಿಯ ಶಸ್ತ್ರಾಸ್ತ್ರಗಳು ಮತ್ತು ಸಾಧನಗಳನ್ನು ಬಳಸುತ್ತಿದೆ.


ಸೇನೆ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಸೇರಿಕೊಂಡು ತಮ್ಮ ಜಂಟಿ ಶೋಧ ಕಾರ್ಯಾಚರಣೆಯನ್ನು ಸೆಪ್ಟೆಂಬರ್ 12-13 ರ ರಾತ್ರಿ ಪ್ರಾರಂಭಿಸಿದ್ರು. ಇವರು ಗರೋಲ್ ಗ್ರಾಮದಲ್ಲಿ ಕೆಲವು ಅಡಗಿಕೊಂಡಿರುವ ಭಯೋತ್ಪಾದಕರ ಹುಡುಕಾಟದಲ್ಲಿ ಸುತ್ತುವರಿದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಿನ್ನೆ ನಡೆದ ಎನ್‌ಕೌಂಟರ್‌ನಲ್ಲಿ 19 ರಾಷ್ಟ್ರೀಯ ರೈಫಲ್ಸ್ ಘಟಕದ ಕಮಾಂಡರ್‌ಗಳಾದ ಕರ್ನಲ್ ಮನ್‌ಪ್ರೀತ್ ಸಿಂಗ್, ಮೇಜರ್ ಆಶಿಶ್ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಉಪ ಅಧೀಕ್ಷಕ ಹುಮಾಯೂನ್ ಭಟ್ ಹುತಾತ್ಮರಾಗಿದ್ದರು. ಮಂಗಳವಾರ ಸಂಜೆ ಆನಂದ್ ನಾಗ್‌ನ ಗಾಡೋಲ್ ಪ್ರದೇಶದಲ್ಲಿ ಆರಂಭವಾದ ಎನ್‌ಕೌಂಟರ್ ರಾತ್ರಿಯ ವೇಳೆಗೆ ಕೊನೆಗೊಂಡಿತು. ಭಯೋತ್ಪಾದಕರ ಅಡಗುತಾಣ ಪತ್ತೆಯಾದ ಬಳಿಕ ಬುಧವಾರ ಬೆಳಗ್ಗೆ ಮತ್ತೆ ಶೋಧ ಕಾರ್ಯ ಆರಂಭವಾಯಿತು. ಇದೇ ವೇಳೆ ಉಗ್ರರು ಸೇನೆಯ ಅಧಿಕಾರಿಗಳ ಮೇಲೆ ಗುಂಡಿನ ದಾಳಿ ನಡೆಸಿದರು. ಗಂಭೀರ ಗಾಯಗೊಂಡ ಮೂವರೂ ಸಾವನ್ನಪ್ಪಿದ್ದಾರೆ.


ಈ ಎನ್​ಕೌಂಟರ್​ನಲ್ಲಿ ಮನ್​ಪ್ರೀತ್ ಸಿಂಗ್, ಮೇಜರ್ ಅಶಿಶ್ ಧೋಂಚಕ್​, ಡಿಎಸ್​ಪಿ ಜಮ್ಮು ಮತ್ತು ಕಾಶ್ಮೀರ್​ ಪೊಲೀಸ್​ ಹಿಮಾಯಯನ್ ಭಟ್​ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಭಟ್​ ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾರೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.


ಈ ಎನ್​ಕೌಂಟರ್​ಗೂ ಮುನ್ನ ಮಂಗಳವಾರ ಜಮ್ಮು ಕಾಶ್ಮೀರದ ರಜೌರಿಯಲ್ಲೂ ಭಯೋತ್ಪಾಧಕರು ಮತ್ತು ಸೇನೆ ನಡುವೆ ಎನ್​ಕೌಂಟರ್ ನಡೆದಿತ್ತು.
ಇದರಲ್ಲಿ ತನ್ನ ಹ್ಯಾಂಡ್ಲರ್ ರಕ್ಷಿಸಿದ್ದ 6 ವರ್ಷದ ಕೆಂಟ್ ಎಂಬ ಶ್ವಾನ ತನ್ನ ಪ್ರಾಣ ಬಿಟ್ಟಿತ್ತು. ಮೂರು ದಿನಗಳ ಕಾಲ ನಡೆದ ಎನ್​ಕೌಂಟರ್​ನಲ್ಲಿ ಒಬ್ಬ ಯೋಧ ಹುತಾತ್ಮರಾದರೆ, 3 ಉಗ್ರರನ್ನು ಸೇನೆ ಹೊಡೆದುರುಳಿಸಿದೆ.

Leave a Reply

Your email address will not be published. Required fields are marked *

ಬಂಟ್ವಾಳ: ಪಾಣೆಮಂಗಳೂರು ಹಳೆಯ ಸೇತುವೆ ಮೇಲೆ ರಿಕ್ಷಾ ನಿಲ್ಲಿಸಿ ಚಾಲಕ ಕಾಣೆ..!

ಬಂಟ್ವಾಳ: ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ಚೆನ್ನಕೇಶವ ನಾಪತ್ತೆ

ಬಂಟ್ವಾಳ: ಕಾಮಗಾರಿಯ ಪ್ರಗತಿಯ ಕುರಿತು ಪುರಸಭಾ ಜನಪ್ರತಿನಿಧಿಗಳ ಸಭೆ….!

ಬಂಟ್ವಾಳ: ಬಂಟ್ವಾಳ ತಾಲೂಕಿನ ಕೇಪು ಗ್ರಾಮ ಪಂಚಾಯಿತಿಗೆ ಕಿಶೋರ್ ಕುಮಾರ್ ಭೇಟಿ…!

ಬಂಟ್ವಾಳ: ಕಾರು ಮೇಲ್ಸೇತುವೆಗೆ ಡಿ*ಕ್ಕಿ; ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಚಾಲಕ…!

ಮಂಗಳೂರು: ಆಟವಾಡುತ್ತಾ 15 ಅಡಿ ಆಳದ ನೀರಿದ್ದ ಬಾವಿಗೆ ಬಿದ್ದ ಹೆಣ್ಣು ಮಗು….!

ಮಂಗಳೂರು: ಕಲ್ಲಡ್ಕ ಪ್ರಭಾಕರ್ ಭಟ್ ಅವರ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ..!

ಬಂಟ್ವಾಳ: ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ “ಶ್ರೀರಾಮನ ಚರಿತ್ರೆಯ” ಯಕ್ಷಗಾನ….!

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

error: Content is protected !!