ಮುಲ್ಕಿ: ಭಾರತ ಸರಕಾರದ ಯುವ ಕಾರ್ಯ ಮತ್ತು ನೆಹರು ಯುವ ಕೇಂದ್ರ ಮಂಗಳೂರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಂಗಳೂರು, ರೋಟರಿ ಕ್ಲಬ್ ಬೈಕಂಪಾಡಿ, ಇವರ ಆಶ್ರಯದಲ್ಲಿ ಫೇಮಸ್ ಯೂತ್ ಕ್ಲಬ್ (ರಿ) ಮತ್ತು ಮಹಿಳಾ ಮಂಡಲ10ನೇ ತೋಕೂರು ಮತ್ತು ಇಂಟರಾಕ್ಟ್ ಕ್ಲಬ್, ಡಾ. ರಾಮಣ್ಣ ಶೆಟ್ಟಿ ಮೆಮೋರಿಯಲ್ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ ತೋಕೂರು ಜಂಟಿ ಆಶ್ರಯದಲ್ಲಿ ಫೇಮಸ್ ಯೂತ್ ಕ್ಲಬ್ ರೋಟರಿ ಸಮುದಾಯದಳದ ಪದಗ್ರಹಣ ಕಾರ್ಯಕ್ರಮವು ಭಾನುವಾರ ಬೆಳಿಗ್ಗೆ ಗಂಟೆ 11:00ಕ್ಕೆ ರೋಟರಿ ಸಮುದಾಯದಳದ ಅಧ್ಯಕ್ಷರಾದ ಭಾಸ್ಕರ್ ಅಮೀನ್ ತೋಕೂರುರವರ ಅಧ್ಯಕ್ಷತೆಯಲ್ಲಿ ನೆರವೇರಿತು.

ನೂತನ ಅಧ್ಯಕ್ಷರಾಗಿ ಮೋಹನ್ ದಾಸ್ ದೇವಾಡಿಗ ಮತ್ತು ಕಾರ್ಯದರ್ಶಿಯಾಗಿ ಭೋಜಕೋಟ್ಯಾನ್ ಮತ್ತು ಸದಸ್ಯರಾಗಿ ವಿಶ್ವಜಿತ್ ಆಚಾರ್ಯ ಮಹಮ್ಮದ್ ಶರೀಫ್ ಮತ್ತು ಮನೋಹರ ಆಚಾರ್ಯ ಇವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಫೇಮಸ್ ಯೂತ್ ಕ್ಲಬ್ಬಿನ ಗೌರವಾಧ್ಯಕ್ಷರಾದ ಗುರುರಾಜ ಎಸ್ ಪೂಜಾರಿ, ಮಹಿಳಾ ಅಧ್ಯಕ್ಷೆ ಪ್ರೇಮಲತಾ ಯೋಗೀಶ್, ರೋಟರಿ ಕ್ಲಬ್ ಬೈಕಂಪಾಡಿಯ ಅಧ್ಯಕ್ಷರಾದ ರೊ. ಸುಧಾಕರ ಸಾಲ್ಯಾನ್, ಅಸಿಸ್ಟೆಂಟ್ ಗವರ್ನರ್ ರೊ. ಸುಬೋಧ್ ಕುಮಾರ್ ದಾಸ್, ರಾಮಣ್ಣ ಶೆಟ್ಟಿ ಆಂಗ್ಲ ಮಾಧ್ಯಮ ಶಾಲೆ, ತೋಕೂರು ಇಲ್ಲಿನ ಇಂಟರಾಕ್ಟ್ ಕ್ಲಬ್ಬಿನ ಕೋ ಆರ್ಡಿನೇಟರ್ ಉಷಾ ನರೇಂದ್ರ ಕೆರೆಕಾಡು ಮತ್ತು ವಿದ್ಯಾರ್ಥಿಗಳು, ಈಶ್ವರಿ ಆಯುರ್ ಕೇರ್ ಹಳೆಯಂಗಡಿ ವೈದ್ಯರಾದ ಡಾ. ಎಚ್. ಹರಿಹರ ಪ್ರಸಾದ್ ರಾವ್, ರೋಟರಿ ಕ್ಲಬ್ ಬೈಕಂಪಾಡಿಯ ಪದಾಧಿಕಾರಿಗಳು ಮತ್ತು ಸದಸ್ಯರು, ಫೇಮಸ್ ಯೂತ್ ಕ್ಲಬ್ಬಿನ ಮತ್ತು ಮಹಿಳಾ ಮಂಡಲದ ಸದಸ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಫೇಮಸ್ ಯೂತ್ ಕ್ಲಬ್ಬಿನ ಅಧ್ಯಕ್ಷರಾದ ಭಾಸ್ಕರ್ ಅಮೀನ್ ತೋಕೂರುರವರು ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿ ರೋಟರಿ ಕ್ಲಬ್ ಬೈಕಂಪಾಡಿಯ ಅಧ್ಯಕ್ಷರಾದ ರೊ. ಸುಧಾಕರ್ ಸಾಲ್ಯಾನ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು.








