ಜನ ಮನದ ನಾಡಿ ಮಿಡಿತ

Advertisement

ಆಳ್ವಾಸ್‌ನಲ್ಲಿLEEE ಘಟಕ ಸ್ಥಾಪನೆ

ಮಿಜಾರು: ಆಳ್ವಾಸ್ ಎಂಜಿನಿಯರಿ0 ಗ್ ಮತ್ತು ತಂತ್ರಜ್ಞಾನ ಕಾಲೇಜಿನ ‘ಇನ್‌ಸ್ಟಿಟ್ಯೂಟ್ ಆಫ್ ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ಎಂಜಿನಿಯರಿ0ಗ್ (LEEE) ವಿದ್ಯಾರ್ಥಿ ಘಟಕವನ್ನುLEEE ಮಂಗಳೂರು ಘಟಕದ ಅಧ್ಯಕ್ಷರಾದ ಸುರತ್ಕಲ್ ಎನ್‌ಐಟಿಕೆ ಪ್ರಾಧ್ಯಾಪಕರಾದ ಡಾ. ಮೋಹಿತ್ ಪಿ. ತಹಿಲಿಯಾನಿ ಉದ್ಘಾಟಿಸಿದ್ರು.


ಬಳಿಕ ಮಾತನಾಡಿದ ಅವರು, ಐಇಇಇ ತಂಡ ಸ್ಥಾಪನೆಯಿಂದ ಎಂಜಿನಿಯರಿ0ಗ್‌ನ ಕಂಪ್ಯೂಟರ್ ಸೈನ್ಸ್, ಮಾಹಿತಿ ತಂತ್ರಜ್ಞಾನ, ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕಲ್, ಸಿವಿಲ್ ಎಂಜಿನಿಯರಿ0ಗ್ ವಿಭಾಗದ ವಿದ್ಯಾರ್ಥಿಗಳಿಗೆ ಸಹಾಯವಾಗಲಿದೆ. ಸಂಶೋಧನಾ ಲೇಖನಗಳು, ನಿಯತಕಾಲಿಕಗಳು ಇತ್ಯಾದಿ ಜೊತೆ ವಿದ್ಯಾರ್ಥಿಗಳಿಗೆ ಕೈಗಾರಿಕಾ ಸಂಪರ್ಕ ಕಲ್ಪಿಸಲು ಐಇಇಇ ನೆರವಾಗಲಿದೆ ಎಂದರು.


ದೈನಂದಿನ ಬಳಕೆಯ ಅಂತರ್ಜಾಲ, ವೈಫೈ, ಬ್ಲ್ಯೂಟೂತ್ ಇತ್ಯಾದಿಗಳನ್ನು ಐಇಇಇ ಉನ್ನತೀಕರಿಸಲಿದೆ. LEEE ಒಟ್ಟು 10 ಜಾಗತಿಕ ‘ಪ್ರದೇಶ’ ಎಂದು ವಿಭಜಿಸಿದೆ. LEEE ಭಾರತದ ಮಂಡಳಿಯನ್ನು 1976ರ ಮೇ 20ರಂದು ಸ್ಥಾಪಿಸಲಾಗಿದ್ದು, ಇದು ಏಷ್ಯಾ ಫೆಸಿಪಿಕ್ ಪ್ರದೇಶದ ಐದು ಮಂಡಳಿಗಳಲ್ಲಿ ಒಂದಾಗಿದೆ. ಇವೆಲ್ಲ ಆಯಾ ಪ್ರದೇಶದ ಬೇಡಿಕೆಗೆ ಸ್ಪಂದಿಸಲಿದೆ. ಅಂತಹ 13 ಘಟಕಗಳು ದೇಶದಲ್ಲಿವೆ. ಈ ಪೈಕಿ ಬೆಂಗಳೂರು 10ನೇ ಘಟಕವಾಗಿದ್ದು, ಬೆಂಗಳೂರಿನ ಉಪಘಟಕದ ಪೈಕಿ ಮಂಗಳೂರು ಒಂದಾಗಿದೆ. ಆಳ್ವಾಸ್ ಎಂಜಿನಿಯರಿ0ಗ್ ಮತ್ತು ತಂತ್ರಜ್ಞಾನ ಕಾಲೇಜು ಮಂಗಳೂರು ಉಪ ಘಟಕ 22ನೇ ವಿದ್ಯಾರ್ಥಿ ಘಟಕವಾಗಿದೆ. ಕಾಲೇಜಿನ ಪ್ರಾಂಶುಪಾಲ ಡಾ.ಪೀಟರ್ ಫೆರ್ನಾಂಡೀಸ್ ಮಾತನಾಡಿ, ವೃತ್ತಿಪರ ಸಮಾಜದಲ್ಲಿ ಹೆಚ್ಚು ಹೆಚ್ಚು ಚಟುವಟಿಕೆಗಳನ್ನು ಪ್ರೋತ್ಸಾಹಿಸಿ ಎಂದರು.


LEEE ಬೋಧಕ ಸಮಾಲೋಚಕರಾದ ಡಾ.ಮಂಜುನಾಥ ಕೊಠಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಳ್ವಾಸ್ LEEE ವಿದ್ಯಾರ್ಥಿ ಘಟಕದ ಅಧ್ಯಕ್ಷ ನೀರವ್ ವಿ. ಪಟೇಲ್, ಸಹ ಅಧ್ಯಕ್ಷೆ ಗಾಯತ್ರಿ ಸಿ.ಬಿ. ಇದ್ದರು. ಕಾಲೇಜಿನ ವಿವಿಧ ನಿಕಾಯಗಳ ಡೀನ್, ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಬಂಟ್ವಾಳ: ಪಾಣೆಮಂಗಳೂರು ಹಳೆಯ ಸೇತುವೆ ಮೇಲೆ ರಿಕ್ಷಾ ನಿಲ್ಲಿಸಿ ಚಾಲಕ ಕಾಣೆ..!

ಬಂಟ್ವಾಳ: ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ಚೆನ್ನಕೇಶವ ನಾಪತ್ತೆ

ಬಂಟ್ವಾಳ: ಕಾಮಗಾರಿಯ ಪ್ರಗತಿಯ ಕುರಿತು ಪುರಸಭಾ ಜನಪ್ರತಿನಿಧಿಗಳ ಸಭೆ….!

ಬಂಟ್ವಾಳ: ಬಂಟ್ವಾಳ ತಾಲೂಕಿನ ಕೇಪು ಗ್ರಾಮ ಪಂಚಾಯಿತಿಗೆ ಕಿಶೋರ್ ಕುಮಾರ್ ಭೇಟಿ…!

ಬಂಟ್ವಾಳ: ಕಾರು ಮೇಲ್ಸೇತುವೆಗೆ ಡಿ*ಕ್ಕಿ; ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಚಾಲಕ…!

ಮಂಗಳೂರು: ಆಟವಾಡುತ್ತಾ 15 ಅಡಿ ಆಳದ ನೀರಿದ್ದ ಬಾವಿಗೆ ಬಿದ್ದ ಹೆಣ್ಣು ಮಗು….!

ಮಂಗಳೂರು: ಕಲ್ಲಡ್ಕ ಪ್ರಭಾಕರ್ ಭಟ್ ಅವರ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ..!

ಬಂಟ್ವಾಳ: ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ “ಶ್ರೀರಾಮನ ಚರಿತ್ರೆಯ” ಯಕ್ಷಗಾನ….!

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

error: Content is protected !!