ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಮೂಡುಬಿದಿರೆ ತಾಲೂಕಿನ ವತಿಯಿಂದ ರಬ್ಬರ್ ನೆಲಹಾಸುಗಳ ವಿತರಣಾ ಕಾರ್ಯಕ್ರಮ ಹಾಗೂ ಪಶು ಸಖಿಯರಿಗೆ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಹೈನುಗಾರರಿಗೆ ಪರಿಕರಗಳನ್ನು ಶಾಸಕ ಉಮಾನಾಥ್ ಕೋಟ್ಯಾನ್ ಅವರು ವಿತರಿಸಿ ಗೋಮಾತೆಗೆ ಗೋಪೂಜೆ ಸಲ್ಲಿಸಿದರು.

ಕೇಂದ್ರ ಸರಕಾರದ ಪಶುವೈದ್ಯಕೀಯ ಇಲಾಖೆಯಡಿಯಲ್ಲಿ ಉಚಿತ ಲಸಿಕೆ, ನೆಲಹಾಸು ಸೇರಿದಂತೆ ಹೈನುಗಾರಿಗೆ ಹಾಗೂ ಹೈನುಗಾರರಿಗೆ ಹಲವಾರು ಸೇವೆಗಳು ಹಾಗೂ ಸವಲತ್ತುಗಳು ಲಭ್ಯವಿದ್ದು, ಹೆಚ್ಚಿನ ಮಾಹಿತಿಗಾಗಿ ಪಶು ವೈದ್ಯರು ಅಥವಾ ಪಶು ವೈದ್ಯಾಧಿಕಾರಿಯವರನ್ನು ಸಂಪರ್ಕಿಸಬಹುದಾಗಿದೆ.




