ತಂದೆಯೇ ಪೊಲೀಸರ ಎದುರಿನಲ್ಲಿ ತನ್ನ ಒಂದೂವರೆ ವರ್ಷದ ಮಗುವನ್ನು ಕುತ್ತಿಗೆ ಹಿಡಿದು, ಮಗುವನ್ನು ಎತ್ತಿ ನೆಲಕ್ಕೆಸೆದು ಕೊಲೆ ಮಾಡಲು ಯತ್ನಿಸಿದ ಅಮಾನವೀಯ ಘಟನೆ ನಡೆದಿದೆ.

ವ್ಯಾಸನಗರದ ನಿವಾಸಿ ಮಹೇಶ್ ಆರೋಪಿಯಾಗಿದ್ದು, ಈತ ಹೆಂಡತಿ ಮಕ್ಕಳನ್ನು ಕೊಲ್ಲಲು ಮುಂದಾಗಿದ್ದು, ಇದರಿಂದ ಗಾಬರಿಗೊಂಡ ಪತ್ನಿ ತನ್ನ ಮಕ್ಕಳನ್ನು ಮನೆಯಲ್ಲೇ ಬಿಟ್ಟು ರಾತ್ರೋ ರಾತ್ರಿ ಕದ್ರಿ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿದ್ದಾಳೆ.
ಪೊಲೀಸರು ಆಕೆಯ ಮನೆಗೆ ಹೊರಡುತ್ತಿದ್ದಂತೆ ಆರೋಪಿ ಮಹೇಶ್ ತನ್ನ 6 ವರ್ಷದ ಮತ್ತು ಒಂದೂವರೆ ವರ್ಷದ ಹೆಣ್ಣು ಮಗುವನ್ನು ಕರೆದುಕೊಂಡು ಠಾಣೆಗೆ ಬಂದಿದ್ದಾನೆ. ಈ ವೇಳೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾಗ ” ನನ್ನ ಮಗುವಿಗೆ ಏನು ಬೇಕಾದರೂ ಮಾಡಬಹುದು ಅದನ್ನು ಕೇಳಲು ನೀವು ಯಾರು?” ಎಂದು ಪ್ರಶ್ನಿಸಿ, ಮಗುವನ್ನು ಕೊಲ್ಲಲು ಯತ್ನಿಸಿದ್ದಾನೆ.
ತಕ್ಷಣ ಪೊಲೀಸರು ಮಕ್ಕಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇನ್ನೂ ಪೊಲೀಸರು ಆರೋಪಿ ಮಹೇಶ್ ವಿರುದ್ಧ ಸುಮೊಟೋ ಪ್ರಕರಣ ದಾಖಸಿಕೊಂಡಿದ್ದಾರೆ.



