ಮೂಡುಬಿದಿರೆ: ನಿನ್ನ ನೆರೆಮನೆಯವರು ಹಸಿವಿನಿಂದ ಬಳಲುತ್ತಿರುವಾಗ ಹೊಟ್ಟೆ ತುಂಬಾ ಉಂಡು ಮಲಗುವವನು ನನ್ನವನಲ್ಲ ಎಂಬ ಉದಾತ್ತವಾದ ಮಾನವೀಯ ಸಂದೇಶವನ್ನು ಸಾರಿದ ವಿಶ್ವ ಪ್ರವಾದಿ ಮುಹಮ್ಮದ್ ಪೈಗಂಬರರ 1498ನೇ ಹುಟ್ಟಿದ ದಿನದ ಅಂಗವಾಗಿ ಆಚರಿಸುವ ಈದ್ ಮಿಲಾದ್ ಹಬ್ಬವನ್ನು ಮೂಡುಬಿದಿರೆ ತಾಲೂಕಿನ ವಿವಿಧ ಮಸೀದಿಗಳಲ್ಲಿ ಸಂಭ್ರಮದಿಂದ ಆಚರಿಸಲಾಯಿತು.

ತಾಲೂಕಿನ ಶಿರ್ತಾಡಿಯ ಮಕ್ಕಿ ಮಸೀದಿಯಿಂದ ವಾಲ್ಪಾಡಿ ವರೆಗೆ, ಕಿಲ್ಲ ಸುನ್ನಿ ಜಾಮಿಯಾ ಮಸೀದಿ ಕೋಟೆಬಾಗಿಲು, ಹಂಡೇಲು ಮಸೀದಿ, ಮರಿಯಾಡಿ, ಸಂಪಿಗೆ-ಪುತ್ತಿಗೆ ಪದವು, ಸಾರಾ ಮಸೀದಿ ಗುಂಡೀರು ತೆಂಕಮಿಜಾರು, ಪುಚ್ಚಮೊಗರು, ಗಂಟಾಲ್ ಕಟ್ಟೆ, ಬೆಳುವಾಯಿ ಹಾಗೂ ಹಿದಾಯತುಲ್ ಇಸ್ಲಾಂ ಮದರಸ ತೋಡಾರು ಇಲ್ಲಿ ಬೃಹತ್ ರ್ಯಾಲಿ ನಡೆಯಿತು.



