ಮೂಡುಬಿದಿರೆ ಪೊಲೀಸ್ ಠಾಣೆಯ ಪೊಲೀಸ್ ಸಂದೇಶ್ ಪಿ ಜಿ ಮತ್ತು ಅವರ ತಂಡ ಬೆಳವಾಯಿ ಕಾಂತಾವರ ದ್ವಾರದ ಬಳಿ ನಿಷೇಧಿತ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರು ಯುವಕರನ್ನು ಬಂಧಿಸಿದ್ದಾರೆ.
ಬಂಧಿತರನ್ನು ಬೆಳವಾಯಿ ನಿವಾಸಿಗಳಾದ ಮೊಹಮ್ಮದ್ ಅಯಾನ್ (22), ಫರ್ಹಾನ್ ಖಾನ್ (18) ಮತ್ತು ಶೇಖ್ ಮೊಹಮ್ಮದ್ ಜುಬೇರ್ (19) ಎಂದು ಗುರುತಿಸಲಾಗಿದೆ.

ಖಚಿತ ಸುಳಿವಿನ ಮೇರೆಗೆ ದಾಳಿ ನಡೆಸಿದ ಪೊಲೀಸ್ ತಂಡವು 800 ಗ್ರಾಂ ಗಾಂಜಾ ಮತ್ತು ಸ್ಕೂಟರ್ ಅನ್ನು ವಶಪಡಿಸಿಕೊಂಡಿದ್ದು, ಇದರ ಒಟ್ಟು ಮೌಲ್ಯ 62000 ರೂ ಎಂದು ಅಂದಾಜಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ದಿವಾಕರ ರೈ, ಸಿದ್ದಪ್ಪ ನರನೂರ, ಪ್ರಶಾಂತ್, ಮಹಮ್ಮದ್ ಇಕ್ಬಾಲ್, ಮಹಮ್ಮದ್ ಹುಸೇನ್, ಅಕಿಲ್ ಅಹ್ಮದ್, ವೆಂಕಟೇಶ್ ಸೇರಿದಂತೆ ಸಿಬ್ಬಂದಿ ಪಾಲ್ಗೊಂಡಿದ್ದರು.



