ಭಾರತ ಸರಕಾರ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ, ಮಂಗಳೂರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು, ಜಿಲ್ಲಾಡಾಳಿತ ದ.ಕ ಜಿಲ್ಲಾ ಪಂಚಾಯತ್, ಗ್ರಾಮ ಪಂಚಾಯತ್ ಪಡುಪಣಂಬೂರು, ತಾಲೂಕು ಮತ್ತು ಜಿಲ್ಲಾ ಯುವಜನ ಒಕ್ಕೂಟ, ದ.ಕ ಜಿಲ್ಲೆ.
ಇವರುಗಳ ಮಾರ್ಗದರ್ಶನದಲ್ಲಿ ಜಿಲ್ಲಾ, ರಾಜ್ಯ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ 2021 ನೇ ಸಾಲಿನ ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಫೋರ್ಟ್ಸ್ ಕ್ಲಬ್ (ರಿ)ತೋಕೂರು, ಹಳೆಯಂಗಡಿ ಇದರ ಆಶ್ರಯದಲ್ಲಿ ರವಿವಾರ “ಸ್ವಚ್ಛತಾ ಹೀ ಸೇವಾ” ಶೀರ್ಷಿಕೆಯ ಅಡಿಯಲ್ಲಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕೆರೆಯ ವಠಾರ ಹಾಗೂ ಕೆರೆಯನ್ನು ಸ್ವಚ್ಚಗೊಳಿಸುವ ಕಾರ್ಯವನ್ನು ಶ್ರಮದಾನದ ಮೂಲಕ ನಡೆಸಲಾಯಿತು.

ಅಕ್ಟೋಬರ್ 2 ರಂದು ರಾಷ್ಟ್ರಪಿತ ಶ್ರೀ ಮಹಾತ್ಮಾ ಗಾಂಧೀಜಿಯವರ ಜನ್ಮದಿನದ ಅಂಗವಾಗಿ ಭಾರತವನ್ನು ಸ್ವಚ್ಚವಾಗಿರಿಸಿರುವ ಶ್ರೀ ಮಹಾತ್ಮಾ ಗಾಂಧೀಜಿಯವರ ಕನಸು ನನಸು ಮಾಡುವ ಗುರಿಯೊಂದಿಗೆ ಭಾರತದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಈ ಅಭಿಯಾನವನ್ನು ಆರಂಭಿಸಿದರು ಎಂದು ಪಡುಪಣಂಬೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕುಸುಮಾ ಚಂದ್ರಶೇಖರ್ ಚಾಲನೆ ನೀಡಿ ಮಾತನಾಡಿದರು.
ಈ ಸ್ವಚ್ಛತಾ ಕಾರ್ಯದಲ್ಲಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಶ್ರೀ ಹರಿದಾಸ್ ಭಟ್,
ಗ್ರಾಮ ಪಂಚಾಯತ್ ಪಡುಪಣಂಬೂರು ಇಲ್ಲಿನ ಕಾರ್ಯನಿರ್ವಹಣಾ ಅಧಿಕಾರಿ ಸುಧೀರ್,ಉಪಾಧ್ಯಕ್ಷರಾದ ಹೇಮನಾಥ ಅಮೀನ್, ಸದಸ್ಯರಾದ ಮೋಹನ್ ದಾಸ್, ಸಂತೋಷ್ ಕುಮಾರ್, ಮಾಜಿ ಸದಸ್ಯರಾದ ನಾರಾಯಣ ಸುವರ್ಣ, ಸಿಬ್ಬಂದಿ ದಿನಕರ್, ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷರಾದ ಜಗದೀಶ್ ಕುಲಾಲ್, ಉಪಾಧ್ಯಕ್ಷರಾದ ಸುನಿಲ್ ದೇವಾಡಿಗ, ಕಾರ್ಯಾಧ್ಯಕ್ಷ ಸಂತೋಷ್ ದೇವಾಡಿಗ, ನಿಕಟ ಪೂರ್ವ ಕಾರ್ಯಾಧ್ಯಕ್ಷ ಸುರೇಶ್ ಶೆಟ್ಟಿ, ಮಾಜಿ ಅಧ್ಯಕ್ಷ ರತನ್ ಶೆಟ್ಟಿ, ಜೊತೆ ಕಾರ್ಯದರ್ಶಿ ಗಣೇಶ್ ದೇವಾಡಿಗ, ಪರಿಸರ ಸಂರಕ್ಷಣಾ ಕಾರ್ಯದರ್ಶಿಗಳಾದ ಜಗದೀಶ್ ಕೋಟ್ಯಾನ್, ಸಂಪತ್ ದೇವಾಡಿಗ, ಕ್ರೀಡಾ ಕಾರ್ಯದರ್ಶಿ ಮಹಮ್ಮದ್ ಯೂನುಸ್, ಕ್ರಿಕೆಟ್ ತಂಡದ ನಾಯಕ ಗೌತಮ್ ಬೆಲ್ಚೆಡ್, ಸದಸ್ಯರಾದ ಜಯಂತ್ ಕುಂದರ್, ಚಂದ್ರಶೇಖರ್ ದೇವಾಡಿಗ, ಚಂದ್ರ ಸುವರ್ಣ, ಪಾಂಡುರಂಗ, ಸೋಮನಾಥ ಕೋಟ್ಯಾನ್, ಮಿತಂಶ್ ಹಾಗೂ ಮತ್ತಿತರರು ಪಾಲ್ಗೊಂಡರು.



