ಮುಲ್ಕಿ: ಶ್ರೀ ಸುಬ್ರಮಣ್ಯ ದೇವಸ್ಥಾನ ತೋಕೂರಿಗೆ ಕೊಡಗು , ಮಡಿಕೇರಿ ಜಿಲ್ಲಾ ಅಸಿಸ್ಟೆಂಟ್ ಕಮಿಷನರ್ ಯತೀಶ್ ಉಲ್ಲಾಳ್ ಭೇಟಿ ನೀಡಿ ದೇವರ ದರ್ಶನ ಪಡೆದರು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಹರಿದಾಸ್ ಭಟ್, ಅರ್ಚಕರಾದ ಮಧುಸೂಧನ ಆಚಾರ್ಯ, ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಪುರುಷೋತ್ತಮ ಭಟ್, ದೇವಳದ ಸಿಬ್ಬಂದಿಗಳು ಮತ್ತಿತರು ಉಪಸ್ಥಿತರಿದ್ದರು.






