ಜನ ಮನದ ನಾಡಿ ಮಿಡಿತ

Advertisement

ಇರುವೈಲು ಭಜನಾ ತಂಡಕ್ಕೆ ಸಮವಸ್ತ್ರ ವಿತರಣೆ, ಸನ್ಮಾನ

ಮೂಡುಬಿದಿರೆ: ಇರುವೈಲು ಶ್ರೀ ದುರ್ಗಾಪರಮೇಶ್ವರೀ ಕುಣಿತ  ಭಜನಾ ಮಂಡಳಿಯ ವತಿಯಿಂದ  ಹಿರಿಯ ನ್ಯಾಯವಾದಿಗೆ ಸನ್ಮಾನ ಮತ್ತು ಮಂಡಳಿಯ ಸದಸ್ಯರಿಗೆ ಸಮವಸ್ತ್ರ ವಿತರಣಾ  ಕಾರ್ಯಕ್ರಮವು ಭಾನುವಾರ  ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.

This image has an empty alt attribute; its file name is WhatsApp-Image-2023-10-15-at-6.03.06-PM-1024x576.jpeg

 ಹೈಕೋರ್ಟ್ ನ ಹಿರಿಯ ನಿರ್ದೇಶಿತ ನ್ಯಾಯವಾದಿ ತಾರಾನಾಥ ಪೂಜಾರಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಕುಣಿತ ಭಜನಾ ಮಂಡಳಿಯ ಭಜಕರಿಗೆ ಸಮವಸ್ತ್ರಗಳನ್ನು ವಿತರಿಸಿ ಮಾತನಾಡಿ ಭಜನೆಯಿಂದ ಮನಸ್ಸಿನ ಸಮತೋಲನ ಕಾಪಾಡಿಕೊಳ್ಳಲು ಸಾಧ್ಯ, ಇದರಿಂದ ಶಿಸ್ತು, ಸಂಯಮ, ಶ್ರದ್ದೆ ಬೆಳೆಯುತ್ತದೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಅಡಚಣೆಯಾಗದಂತೆ ಭಜನಾ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಅಲ್ಲದೇ ಜೀವನದಲ್ಲಿ ರಿಸ್ಕ್ ತಗೆದುಕೊಳ್ಳಲು ಹಿಂಜರಿಯಬಾರದು ಏನಾದರೂ ಸಾಧನೆ ಮಾಡಬೇಕು ಎಂಬ ಮನಸ್ಸಿದ್ದರೆ ರಿಸ್ಕ್ ತೆಗೆದುಕೊಂಡರೆ ಮಾತ್ರ ಸಾಧಿಸಲು ಸಾಧ್ಯ, ಯಾವುದೇ ಕಷ್ಟಗಳು ಬಂದರೂ ಎದುರಿಸುವ ಧೈರ್ಯ ಬೆಳಿಸಿಕೊಂಡು, ಋಣಾತ್ಮಕ ಚಿಂತನೆ ಹೊಂದಿರುವವರಿಂದ ದೂರವಿದ್ದು ಧನಾತ್ಮಕ ಚಿಂತನೆಯ ಜನರೊಂದಿಗೆ ಬೆರೆತು ಯಾವುದೇ ಕಷ್ಟ ಬಂದರೂ ಇನ್ನೊಬ್ಬರನ್ನು ಅವಲಂಬಿಸದೆ ಕಷ್ಟಗಳನ್ನು ಎದುರಿಸುವ ಮನೋಬಲವನ್ನು ಬೆಳೆಸಿಕೊಳ್ಳಬೇಕು ಎಂದರು. 

ಅಧ್ಯಕ್ಷತೆ ವಹಿಸಿದ್ದ ಇರುವೈಲು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ  ಐ. ಕುಮಾರ್ ಶೆಟ್ಟಿ ಮಾತನಾಡಿ ಭಜನೆಯಿಂದ ಮನಸ್ಸಿಗೆ ನೆಮ್ಮದಿಯ ಜತೆಗೆ ದೇವರನ್ನು ಒಳಿಸಿಕೊಳ್ಳುವ ಸರಳ ಮತ್ತು ಸುಲಭದ ದಾರಿ ಎಂದರೆ ಭಜನೆ ಎಂದು ಭಜನೆಯ ಮಹತ್ವವನ್ನು ವಿವರಿಸಿದರು.
ಭಜನಾ ಮಂಡಳಿ ವತಿಯಿಂದ  ತಾರಾನಾಥ ಪೂಜಾರಿಯವರನ್ನು ಶಾಲು ಹೊದೆಸಿ, ಫಲಪುಷ್ಪ,ಸ್ಮರಣಿಕೆ, ಸಮ್ಮಾನ ಪತ್ರ ನೀಡಿ  ಸನ್ಮಾನಿಸಲಾಯಿತು. ಇದೇ ವೇಳೆ ಅತ್ಯಧಿಕ ಅಂಕ ಗಳಿಸಿ ಸಾಧನೆ ಮಾಡಿರುವ ವಿದ್ಯಾರ್ಥಿನಿಯರಾದ ನಂದಿನಿ ಮತ್ತು ಪೂಜಾ ಅವರುಗಳನ್ನು ಶಾಲು ಹೊದಿಸಿ, ಫಲಪುಷ್ಪ ನೀಡಿ ಸನ್ಮಾನಿಸಲಾಯಿತು.

ಉದ್ಯಮಿಗಳಾದ ಸತೀಶ್ಚಂದ್ರ ಪಾಣಿಲ, ಶಾಂತಲಾ ಎಸ್. ಆಚಾರ್ಯ ಮೂಡುಬಿದಿರೆ ಮಾತನಾಡಿ ಶುಭ ಹಾರೈಸಿದರು.

ಶ್ರೀ ದುರ್ಗಾಪರಾಮೇಶ್ವರೀ ಭಜನಾ ಮಂಡಳಿ ಇರುವೈಲು ಇದರ ಅಧ್ಯಕ್ಷ ಬಾಲಚಂದ್ರ ಶೆಟ್ಟಿ, ಹಿರಿಯ ಭಜಕ ಹರಿಪ್ರಸಾದ್ ಶೆಟ್ಟಿ ಕೊಲ್ಲಾಯಿಕೊಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನಂದಿನಿ ಸ್ವಾಗತಿಸಿದರು. ಕುಮಾರಿ ಹರ್ಷಿತಾ ಪ್ರಾರ್ಥಿಸಿದರು. ಗುರುಪ್ರಸಾದ್, ಭರತ್, ಅಶ್ವಥ್ ಸಮ್ಮಾನ ಪತ್ರ ವಾಚಿಸಿದರು. ನಿಶಾ ಕುಮಾರಿ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

ಬಂಟ್ವಾಳ: ಪಾಣೆಮಂಗಳೂರು ಹಳೆಯ ಸೇತುವೆ ಮೇಲೆ ರಿಕ್ಷಾ ನಿಲ್ಲಿಸಿ ಚಾಲಕ ಕಾಣೆ..!

ಬಂಟ್ವಾಳ: ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ಚೆನ್ನಕೇಶವ ನಾಪತ್ತೆ

ಬಂಟ್ವಾಳ: ಕಾಮಗಾರಿಯ ಪ್ರಗತಿಯ ಕುರಿತು ಪುರಸಭಾ ಜನಪ್ರತಿನಿಧಿಗಳ ಸಭೆ….!

ಬಂಟ್ವಾಳ: ಬಂಟ್ವಾಳ ತಾಲೂಕಿನ ಕೇಪು ಗ್ರಾಮ ಪಂಚಾಯಿತಿಗೆ ಕಿಶೋರ್ ಕುಮಾರ್ ಭೇಟಿ…!

ಬಂಟ್ವಾಳ: ಕಾರು ಮೇಲ್ಸೇತುವೆಗೆ ಡಿ*ಕ್ಕಿ; ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಚಾಲಕ…!

ಮಂಗಳೂರು: ಆಟವಾಡುತ್ತಾ 15 ಅಡಿ ಆಳದ ನೀರಿದ್ದ ಬಾವಿಗೆ ಬಿದ್ದ ಹೆಣ್ಣು ಮಗು….!

ಮಂಗಳೂರು: ಕಲ್ಲಡ್ಕ ಪ್ರಭಾಕರ್ ಭಟ್ ಅವರ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ..!

ಬಂಟ್ವಾಳ: ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ “ಶ್ರೀರಾಮನ ಚರಿತ್ರೆಯ” ಯಕ್ಷಗಾನ….!

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

error: Content is protected !!