ಸಾಲೆತ್ತೂರು; ಸಾಲೆತ್ತೂರು ಗ್ರಾಮದ ಕೊಲ್ಲಾಡಿ ಶ್ರೀ ಧರ್ಮ ದೈವಗಳ ಪುನರುತ್ಥಾನದ ಬಗ್ಗೆ ಕೊಲ್ಲಾಡಿ ಶಾರದಾ ನಾರಾಯಣ ನಿಲಯದಲ್ಲಿ ಸಭೆ ನಡೆದಿದೆ.

ಸುಮಾರು 500ವರ್ಷಗಳಿಂದಲೂ ಪುರಾತನವಾಗಿ ಉತ್ತರದ ಕೊಡಿಯಲ್ ಗುತ್ತಿನಿಂದ ವಲಸೆ ಬಂದು ಸಾಲೆತ್ತೂರು ಗ್ರಾಮದ ಕೊಲ್ಲಾಡಿ ಎಂಬಲ್ಲಿ ನೆಲೆನಿಂತು ವಿಟ್ಲ ಅರಸರ ತುಂಡರಸರಾಗಿ ಊರಿನಲ್ಲಿ ಗೌರವದ ಸ್ಥಾನ ಹೊಂದಿದ ಕುಟುಂಬವಾಗಿತ್ತು ಎಂದು ಅಷ್ಟಮಂಗಲ ಪ್ರಶ್ನೆಯಲ್ಲಿ ತಿಳಿದು ಬಂದಿದೆ.

ಇದೀಗ ದೈವಾಗಳಾದ ನಾಗದೇವರು ರಕ್ತೇಶ್ವರಿ, ಜುಮಾದಿ ಬಂಟ, ಪಂಜುರ್ಲಿ ಕಲ್ಲುರ್ಟಿ ರಾಜನ್ ಗುಳಿಗವನ್ನೂ ಆರಾಧನೆ ಮಾಡಲು ದೈವಜ್ಞರು ಸೂಚಿಸಿದ ಹಿನ್ನೆಲೆಯಲ್ಲಿ ಸಮಿತಿ ರಚನೆ ಮತ್ತು ಇತರ ಕೆಲಸಗಳಿಗೆ ಸಭೆ ಕರೆಯಲಾಗಿದೆ. ಈ ಸಭೆಯ ಅಧ್ಯಕ್ಷತೆ ಕೊಲ್ಲಾಡಿ ರಾಮಯ್ಯ ಶೆಟ್ಟಿ ವಹಿಸಿದ್ದರು. ಶ್ರೀ ಸದಾಶಿವ ದೇವಸ್ಥಾನದ ಅರ್ಚಕರು ಮಾರ್ಗದರ್ಶಕರು ಆದ ವೇದಮೂರ್ತಿ ಶ್ರೀ ಭಾರ್ಗವ ಉಡುಪರು ಸಲಹೆ ಸೂಚನೆ ನೀಡಿದ್ದಾರೆ.
ಪ್ರಥಮ ಹಂತದ ಕಾಮಗಾರಿಗೆ ಚಾಲನೆ ನೀಡಲಾಯಿತು ಹಿರಿಯರಾದ ಕೊರಗಪ್ಪ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು ನೂತನ ಆಡಳಿತ ಟ್ರಸ್ಟ್ ರಚಿಸಲಾಯಿತು
ಈ ಸಂದರ್ಭದಲ್ಲಿ ಶೀನಪ್ಪ ಆಳ್ವಾ ಸದಾಶಿವ ದೇವಸ್ಥಾನದ ಟ್ರಸ್ಟಿ ಪಾಳ್ತಾಜೆ ದೇವಿದಾಸ ಶೆಟ್ಟಿ, ಬಾಲಕೃಷ್ಣ ರೈ ಕೃಷ್ಣಾ ಕಾಂಪ್ಲೆಕ್ಸ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕೊಲ್ಲಾಡಿ ಬಾಲಕೃಷ್ಣ ರೈ ಅವರು ನಿರೂಪಿಸಿದರು



