ಕಿನ್ನಿಗೋಳಿ: ಶ್ರೀ ಶಿರ್ಡಿ ಸಾಯಿಬಾಬಾ ಮಂದಿರ, ಕಟೀಲು ಸಾಯಿಧಾಮ ಜುಮಾದಿಗುಡ್ಡೆ ಇಲ್ಲಿ ಭಜನೆ ತಾಳಮದ್ದಳೆ, ಭಕ್ತಿಗೀತೆ ಸಾಧಕರಿಗೆ ಸನ್ಮಾನ, ಯಕ್ಷಗಾನ ಕಾರ್ಯಕ್ರಮ ನಡೆಯಿತು.

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಅರ್ಚಕರಾದ ವೇ.ಮೂ.ಶ್ರೀ.ಕೆ ಲಕ್ಷ್ಮೀನಾರಾಯಣ ಆಸ್ರಣ್ಣ, ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.
ಧರ್ಮದರ್ಶಿ ಡಾ.ಹರಿಕ್ರಷ್ಣ ಪುನರೂರು, ಮಾಜಿ ಅಧ್ಯಕ್ಷರು ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ಮುಖ್ಯ ಅಭ್ಯಾಗತರಾಗಿ ಶ್ರೀ ಉಮಾನಾಥ ಕೋಟ್ಯಾನ್ ಶಾಸಕರು, ಮುಲ್ಕಿ ಮೂಡಬಿದ್ರೆ, ಭುವನಾಭಿರಾಮ ಉಡುಪ, ಪ್ರಧಾನ ಸಂಪಾದಕರ ಯುಗಪುರುಷ ಕಿನ್ನಿಗೋಳಿ, ದೇವಿ ಪ್ರಸಾದ್ ಶೆಟ್ಟಿ, ಕೊಡೆತ್ತೂರು, ಅಧ್ಯಕ್ಷರು, ಶ್ರೀ ಅರಸು ಕುಂಜಿರಾಯ ದೈವಸ್ಥಾನ ಕೊಡೆತ್ತೂರು, ಶ್ರೀ ಪ್ರೇಮ್ ರಾಜ್ ಶೆಟ್ಟಿ, ಬರ್ಕೆ ಫ್ರೆಂಡ್ಸ್ (ರಿ.), ಉಲ್ಲಂಜೆ, ಶ್ರೀ ಸಂಜೀವ ಮಡಿವಾಳ, ಕಟೀಲು,ಸಮಾಜ ಸೇವಕರು, ಅಮ್ಮುಂಜೆ ಜನಾರ್ಧನ, ಸೀತಾರಾಮ ಕುಮಾರ್ ಕಟೀಲು,ಲ . ದಯಾನಂದ ರೈ, ಅಧ್ಯಕ್ಷರು ಕಟೀಲು, ಎಕ್ಕಾರು ಲಯನ್ಸ್ ಕ್ಲಬ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ರೀ ಶಿರ್ಡಿ ಸಾಯಿಬಾಬಾ ಮಂದಿರ ಕಟೀಲು ಇದರ ಪ್ರಧಾನ ಅರ್ಚಕರಾದ ರಾಜಭಟ್ ಇವರನ್ನು ಸನ್ಮಾನಿಸಲಾಯಿತು.



