ಜನ ಮನದ ನಾಡಿ ಮಿಡಿತ

Advertisement

ಮೂಡುಕೋಣಾಜೆ ದುಷ್ಕರ್ಮಿಗಳಿಂದ ಪಂಪ್ ಸೆಟ್ಟಿಗೆ ಹಾನಿ, ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ದಕ್ಷಿಣ ಕನ್ನಡ : ಮೂಡಬಿದ್ರೆ ತಾಲೂಕು, ಮೂಡು ಕೋಣಾಜೆ ಗ್ರಾಮದ ಆನಂದ ಪೂಜಾರಿ ಎಂಬವರ ಜಮೀನಿಗೆ ನೀರು ಉಣಿಸುತ್ತಿದ್ದ ಕೃಷಿ ಪಂಪನ್ನು ದುಷ್ಕರ್ಮಿಗಳು ರಾತ್ರಿ ಹಾಳು ಮಾಡಿದ ಘಟನೆ ವರದಿಯಾಗಿದ್ದು, ಮೂಡಬಿದಿರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ತಿಳಿದು ಬಂದಿದೆ.
ಪಂಪು ಸೆಟ್ಟಿನ ಬೋರಿಗೆ ಸಂಪರ್ಕಿಸುವ ಪೈಪನ್ನು ಕಿಡಿಗೇರಿಗಳು ತುಂಡರಿಸಿದ್ದು ಪಂಪು ಹಾಗೂ ಪೈಪು ಎರಡು ಬೋರ್ ವೆಲ್ ಒಳಗೆ ಸಿಲುಕಿಕೊಂಡು ಜೊತೆಗೆ ವಿದ್ಯುತ್ ಸಂಪರ್ಕಗೊಳಿಸುವ ವೈರನ್ನು ತುಂಡು ಮಾಡಿ ಬೋರ್ ನ ಒಳಗೆ ತಳ್ಳಲಾಗಿದ್ದು, ಮುಂದಿನ ದಿನಗಳಲ್ಲಿ ಆನಂದ ಪೂಜಾರಿಯವರ ಗದ್ದೆ ಹಾಗೂ ತೋಟಕ್ಕೆ ನೀರುಣಿಸಲು ಕಷ್ಟ ಸಾಧ್ಯವಾಗುವ ಸಾಧ್ಯತೆ ಇದೆ.


ಪರಸ್ಪರ ಭೂಮಿಗೆ ಸಂಬಂಧಿಸಿದ ವ್ಯಾಜ್ಯದಿಂದ ಈ ಘಟನೆ ಸಂಭವಿಸಿದೆ ಎಂದು ಮೇಲ್ನೋಟಕ್ಕೆ ವರದಿಯಾಗಿದ್ದು, ಪೊಲೀಸರ ತನಿಕೆಯಿಂದಷ್ಟೇ ಸತ್ಯ ಹೊರ ಬರಬೇಕಿದೆ,
ಸದ್ಯ ಮೂಡಬಿದ್ರೆ ತಾಲೂಕಿನಲ್ಲಿ, ಕೆಲವು ಕೃಷಿಕರು ವ್ಯಾಪ್ತಿಮೀರಿ ಅಕ್ರಮ ಸಕ್ರಮ ಭೂಮಿಯನ್ನ ಕಬಳಿಸುವ ಪ್ರಯತ್ನದಲ್ಲಿದ್ದು, ತಾಲೂಕಿನ ಹಲವು ಕಡೆ ಘರ್ಷಣೆಗೆ ಕಾರಣವಾಗುತ್ತಿದ್ದು, ತಹಶೀಲ್ದಾರರು ಮತ್ತು ಕಂದಾಯ ಇಲಾಖೆ ಸಿಬ್ಬಂದಿಗಳು ಸೂಕ್ತ ಕ್ರಮ ಕೈಗೊಂಡು, ಮಿತಿ ಮೀರಿದ ಅಕ್ರಮ ಸಕ್ರಮ ಜಮೀನನ್ನು ವಶಪಡಿಸಿಕೊಂಡಲ್ಲಿ ಮಾತ್ರವೇ ಸರಕಾರಿ ಭೂಮಿ ರಕ್ಷಿಸುವುದರ ಜೊತೆಗೆ, ಕೃಷಿ ಜನರ ಒಳಗಿನ ವೈಶಮ್ಯಗಳನ್ನ ಕಡಿಮೆ ಮಾಡಬಹುದಾಗಿದೆ ಎಂಬುದು ನಾಗರೀಕರ ಅಭಿಪ್ರಾಯ.

Leave a Reply

Your email address will not be published. Required fields are marked *

ನವದೆಹಲಿ: ಅರಬ್ಬಿ ಸಮುದ್ರದಲ್ಲಿ ಭರ್ಜರಿ ಡ್ರಗ್ಸ್ ಬೇಟೆ: ₹3 ಸಾವಿರ ಕೋಟಿ ಮೌಲ್ಯದ ಮಾದಕವಸ್ತು ವಶ..!

ಮಂಗಳೂರು: MRPL ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಭೇಟಿ; ಪರಿಸ್ಥಿತಿ ಪರಿಶೀಲನೆ..!

ಬಂಟ್ವಾಳ: ಮಂಗಳೂರು ರೈಲು ಪ್ರದೇಶ ಮೈಸೂರು ವಿಭಾಗಕ್ಕೆ: ಪ್ರಮುಖ ನಿಲ್ದಾಣಗಳಿಗೆ ಅಧಿಕಾರಿಗಳ ಭೇಟಿ.

ಬೆಂಗಳೂರು: ಬೆಂಗಳೂರಿನಲ್ಲಿ ಟ್ರಾಫಿಕ್ ನಿಯಂತ್ರಣಕ್ಕೆ ಶಾಲಾ ಸಮಯ ಬದಲಾವಣೆಗೆ ಚಿಂತನೆ.

ಉಡುಪಿ: ಶಂಕರಪುರ ಮಠದಲ್ಲಿ ಅ.3, 4ರಂದು ಸಾಯಿ ಈಶ್ವರ್ ಗುರೂಜಿ ಪಂಚಾಶತ್ ಜನ್ಮ ವೈಭವ…!

ಪುತ್ತೂರು: ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಅವಧಿ ಮೀರಿದ ಮಾತ್ರೆ ವಿತರಣೆ ಆರೋಪ; ಅಧಿಕಾರಿಗಳಿಂದ ವಿಚಾರಣೆ

ನವದೆಹಲಿ: ಮೋದಿ–ಟ್ರಂಪ್ ದೂರವಾಣಿ ಮಾತುಕತೆ: ವ್ಯಾಪಾರ, ರಕ್ಷಣೆ, ಇಂಧನ ಸಹಕಾರದ ಕುರಿತು ಚರ್ಚೆ

ಮಂಗಳೂರು: ಮಂಗಳೂರು ರೈಲು ಪ್ರದೇಶ ಇಂದಿನಿಂದ ಮೈಸೂರು ವಿಭಾಗದ ಅಧೀನಕ್ಕೆ…!

ದುಬೈ: ಫ್ಲೈದುಬೈ ವಿಮಾನದಲ್ಲಿ ಕಾಕ್‌ಪಿಟ್ ಘಟನೆ: ಸಹ ಪೈಲಟ್‌ನ ಯತ್ನ ತಡೆದ ಭಾರತೀಯ ಪೈಲಟ್…!

error: Content is protected !!