ಮುಲ್ಕಿ: ಇಲ್ಲಿನ ಕರ್ನಾಟಕ ಬ್ಯಾಂಕ್ ವತಿಯಿಂದ ಕೆಬಿಎಲ್ ಉತ್ಸವ್ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಅಭಿಯಾನಕ್ಕೆ ಚಾಲನೆ ನೀಡಿ ಮುಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರು ಮಾತನಾಡಿ ಕರ್ನಾಟಕ ಬ್ಯಾಂಕ್ ಗ್ರಾಹಕರ ವಿಶ್ವಸಾರ್ಹತೆ ಗಳಿಸುವುದರ ಜೊತೆಗೆ ಸ್ನೇಹಮಯಿ ಮೂಲಕ ನಂಬರ್ ಒನ್ ಗ್ರಾಹಕರ ಸ್ನೇಹಿ ಬ್ಯಾಂಕ್ ಎಂದು ದಾಪುಗಾಲು ಇಡುತ್ತಿದ್ದು ನಿರಂತರವಾಗಿ ಮುನ್ನಡೆದು ಸಾಧನೆಯ ಶಿಖರಕ್ಕೇರಲಿ ಎಂದು ಶುಭ ಹಾರೈಸಿದರು.

ಮಂಗಳೂರಿನ ಕರ್ನಾಟಕ ಬ್ಯಾಂಕ್ ಚೀಫ್ ಮ್ಯಾನೇಜರ್ ಜಯಪ್ರಕಾಶ್ ಉಡುಪ ರವರು ಕೆಬಿಎಲ್ ಉತ್ಸವ್ ಬಗ್ಗೆ ತಿಳಿಸಿ ಗೃಹ ಸಾಲ, ಕಾರ್ ಲೋನ್, ಚಿನ್ನದ ಸಾಲ ಮತ್ತಿತರ ಆಕರ್ಷಕ ಸ್ಕೀಮ್ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ಮನೋಹರ ಶೆಟ್ಟಿ, ಕಿಲ್ಪಾಡಿ ಶ್ರೀ ವ್ಯಾಸ ಮಹರ್ಷಿ ವಿದ್ಯಾಪೀಠದ ಸಂಚಾಲಕರಾದ ಪಾಂಡುರಂಗ ಭಟ್, ಬಪ್ಪನಾಡು ಲಯನ್ಸ್ ಕ್ಲಬ್ ಇನ್ಸ್ಪೈರ್ ನ ಸ್ಥಾಪಕ ಅಧ್ಯಕ್ಷ ವೆಂಕಟೇಶ ಹೆಬ್ಬಾರ್, ಅಧ್ಯಕ್ಷ ಸುಧೀರ್ ಬಾಳಿಗ, ಗೌತಮ್ ಜೈನ್ ಮುಲ್ಕಿ ಅರಮನೆ, ಮುಲ್ಕಿ ಶಾಖಾಧಿಕಾರಿ ಶಿವಪ್ರಸಾದ್ ಶೆಟ್ಟಿ ಎಸ್ , ಬ್ಯಾಂಕ್ ಸಿಬ್ಬಂದಿ ಗ್ರಾಹಕರು ಮತ್ತಿತರರು ಉಪಸ್ಥಿತರಿದ್ದರು.ಬಳಿಕ ಅಭಿಯಾನವು ಮುಲ್ಕಿ ಪೇಟೆ, ಕಾರ್ನಾಡು ಮೂಲಕ ನಡೆಯಿತು.






