ಶ್ರೀ ವೀರಭದ್ರ ಮಹಾಮ್ಮಾಯಿ ದೇವಸ್ಥಾನ ಕಲ್ಲಾಪು ಹಳೆಯಂಗಡಿ ಇಲ್ಲಿ ನವರಾತ್ರಿ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ವೇದಿಕೆಯಲ್ಲಿ ನಿವೃತ್ತ ಶಿಕ್ಷಕಿ ಭುವನೇಶ್ವರಿ ವ್ಯಾಸರಾಯ ಶೆಟ್ಟಿಗಾರ್ ಇವರನ್ನು ಅಭಿಮಾನಿ ಬಳಗ ಕಲ್ಲಾಪು ವತಿಯಿಂದ ಸನ್ಮಾನಿಸಲಾಯಿತು. ಕ್ಷೇತ್ರದ ಗುರಿಕಾರರು, ಆಡಳಿತ ಮಂಡಳಿಯ ಅಧ್ಯಕ್ಷರು, ಯುವಕ ಮಂಡಲದ ಅಧ್ಯಕ್ಷರು, ಮಹಿಳಾ ವೇದಿಕೆ ಅಧ್ಯಕ್ಷರು, ಹಾಗೂ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.




