ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ 2023 ನೇ ಸಾಲಿನ ಪ್ರಶಸ್ತಿ ಬರ್ಕೆ ಫ್ರೆಂಡ್ಸ್ ಮಂಗಳೂರು ಇವರಿಗೆ ಲಭಿಸಿದೆ. ಮಂಗಳೂರಿನ ನೆಹರು ಮೈದಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಇವರ ನೇತೃತ್ವದಲ್ಲಿ ಪ್ರಶಸ್ತಿಯನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ , ಮಂಗಳೂರು ಶಾಸಕರಾದ ವೇದವಾಸ್ ಕಾಮತ್, ಬರ್ಕೆಫ್ರೆಂಡ್ಸ್ ಮಂಗಳೂರು ಇದರ ಸ್ಥಾಪಕ ಅಧ್ಯಕ್ಷರಾದ ಯಜ್ಞೇಶ್ವರ ಬರ್ಕೆ, ಗೌರವಾಧ್ಯಕ್ಷರಾದ ಸುಚ್ಚೇಂದ್ರ ಅಮೀನ್ ಬರ್ಕೆ, ಅಧ್ಯಕ್ಷರಾದ ಕಿಶನ್ ಕುಮಾರ್ ಬರ್ಕೆ, ರಾಜು ಬರ್ಕೆ, ಭವಾನಿ ಶಂಕರ್ ಬರ್ಕೆ, ಸಂದೀಪ್ ಬರ್ಕೆ, ಸೂರಜ್ ಬರ್ಕೆ, ರಾಜೇಶ್ ಚಂದನ್ ಬರ್ಕೆ, ದೇವಿ ಶೆಟ್ಟಿ ಬರ್ಕೆ, ವಿಗ್ನೇಶ್ ಕೋಟೆ ಬರ್ಕೆ, ದೀಪಕ್ ಬರ್ಕೆ ಮತ್ತಿತರು ಉಪಸ್ಥಿತರಿದ್ದರು





