ವಿಟ್ಲ: ಉಡುಪಿ ಕಾಸರಗೋಡು 400 ಕೆ ವಿ. ವಿದ್ಯುತ್ ಪ್ರಸರಣ ಕಾಮಗಾರಿಯನ್ನು ಮತ್ತೆ ವಿಟ್ಲದಲ್ಲಿ ಆರಂಭಿಸಲು ಪ್ರಯತ್ನಿಸಿದ್ದು ಇದನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ತಿಳಿಸಿದರು.

ವಿಟ್ಲದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಯುಕೆಟಿಎಲ್ ಗುತ್ತಿಗೆ ನೀಡಿ ಸ್ಟರ್ಲೈಟ್ ಕಂಪೆನಿ ಸ್ಥಳ ಸರ್ವೇ ಮೂಲಕ ವಿದ್ಯುತ್ ಲೈನ್ ಅಳವಡಿಕೆಯ ಕಾರ್ಯಾರಂಭಕ್ಕೆ ಮುಂದಾಗಿದೆ ಇದನ್ನು ವಿರೋಧಿಸುವುದಾಗಿ ತಿಳಿಸಿದರು. ಯೋಜನೆ ಕೇಂದ್ರ ಸರಕಾದ್ದಾದರೂ ರಾಜ್ಯ ಸರಕಾರದ ಅನುಮತಿ ಇಲ್ಲದೇ ಕಾಮಗಾರಿ ಆರಂಭಿಸಲು ಸಾಧ್ಯವಿಲ್ಲ. ಶಾಸಕನಾಗಿದ್ದ ಅವಧಿಯಲ್ಲಿ ಅಂದಿನ ಸಂಬಂಧ ಒಟ್ಟ ಇಲಾಖೆ , ಸಚಿವರಿಗೆ ಹಾಗೂ ಸರಕಾರಕ್ಕೆ ಮನವಿಯನ್ನು ಮಾಡಿ ಕಾಮಗಾರಿ ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದೆ ಎಂದರು.

ಯಾವುದೇ ಕಾರಣಕ್ಕೂ ಈ ಭಾಗದ ರೈತರಿಗೆ ಅನ್ಯಾಯ ಆಗಲು ಬಿಡುವುದಿಲ್ಲ ಎಂದ ಅವರು ಅರಬ್ಬೀ ಸಮುದ್ರದ ತೀರದ ಬದಲಿ ಮಾರ್ಗದ ಮೂಲಕ ಒಯ್ದರೆ ಯಾವುದೇ ಸಮಸ್ಯೆ ಆಗದು ಎಂದರು. ಈ ೪೦೦ ಕೆ ವಿ ವಿದ್ಯುತ್ ಪ್ರಸರಣ ಮಾರ್ಗ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಹಲವು ಗ್ರಾಮಗಳ ಮೇಲೆ ಹಾದು ಹೋಗಲಿದೆ. ಇದರಿಂದಾಗಿ ನೂರಾರು ಎಕರೆ ಪ್ರದೇಶಗಳ ಅಡಿಕೆ, ತೆಂಗು ಭತ್ತ, ಬಾಳೆ ಕಾಳುಮೆಣಸು ,ರಬ್ಬರ್ ಇತ್ಯಾದಿ ಬೆಳೆಗಳಿಗೆ ಹಾನಿಯಾಗಲಿವೆ. ರೈತನ ಬದುಕು ನಾಶವಾಗಲಿ ಎಂದು ಅವರು ಹೇಳಿದರು. ಸರ್ಕಾರ ಗ್ಯಾರಂಟಿಗಳಿಗೆ ಹಣ ಹೊಂದಿಸುವ ಭರಾಟೆಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮರೆತಿದೆ. ಜವಾಬ್ದಾರಿಯನ್ನೂ ಮರೆತಿದೆ ಎಂದು ಟೀಕಿಸಿದರು. ಜನರ ಹಿತಾಸಕ್ತಿಗೆ ಪೂರಕವಾಗಿ ಜನಪ್ರತಿನಿಧಿಗಳು ಸರಕಾರ ಕಾರ್ಯನಿರ್ವಹಿಸಬೇಕಿದೆ ಎಂದರು.
ಕಬಕ – ವಿಟ್ಲ ನಡುವಣ ರಸ್ತೆ ಯ ಕಳಪೆ ಕಾಮಗಾರಿ ಆರೋಪದ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರ ನೀಡಿದ ಅವರು ಪದೋಷಗಳನ್ನು ಮರು ಪರಿಶೀಲನೆ ಮಾಡಿ ಸಂಬಂಧಿತರ ಗಮನಕ್ಕೆ ತಂದು ಅಗತ್ಯ ಕ್ರಮಕ್ಕೆ ಸೂಚಿಸುವುದಾಗಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಅರುಣ್ ವಿಟ್ಲ, ಕರುಣಾಕರ್, ಲೋಕನಾಥ್ , ಅಶೋಕ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
,,,,,,,,



